ADVERTISEMENT

ಪ್ರಕೃತಿ ವರವೋ, ಶಾಪವೋ: ಸಂವಾದ, ನೃತ್ಯ ಪ್ರಯೋಗ ಪ್ರಸ್ತುತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 20:16 IST
Last Updated 6 ಆಗಸ್ಟ್ 2013, 20:16 IST

ಇತ್ತೀಚೆಗೆ ನಡೆದ ಉತ್ತರಾಖಂಡ ಪ್ರವಾಹ ದುರಂತದ ಕುರಿತು ಸಂವಾದ, ಚರ್ಚೆ, ಪ್ರಯೋಗ, ಪ್ರಸ್ತುತಿಗಳನ್ನೊಳಗೊಂಡ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ (ಆ.4) ಆಯೋಜಿಸಲಾಗಿದೆ. ಸಾಹಿತಿ ಮತ್ತು ಕಲಾವಿದರ ವೇದಿಕೆ ಆಶ್ರಯದಲ್ಲಿ `ಪ್ರಕೃತಿ ವರವೋ ಅಥವಾ ಶಾಪವೋ' ಶೀರ್ಷಿಕೆಯಡಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10ಕ್ಕೆ ಹಿಮಾಲಯ-ಸುನಾಮಿ ಕುರಿತು ಮಕ್ಕಳು ಪ್ರತಿಕ್ರಿಯೆ ನೀಡಲಿದ್ದಾರೆ. ಸ್ಥಳದಲ್ಲೇ ಮಕ್ಕಳು ಚಿತ್ರ ಬಿಡಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಡಿ.ಕೆ.ಚೌಟ ಉದ್ಘಾಟಿಸುವರು.

ಬೆಳಿಗ್ಗೆ 11 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, `ತಾಯೇ ನೀ ಮುನಿಯದಿರು' ಶೀರ್ಷಿಕೆಯ ಹೊಸಕವಿತೆಗಳ ವಾಚನವಿದೆ. ಈ ಗೋಷ್ಠಿಯಲ್ಲಿ ಹಿರಿಯ ಕವಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಾ. ನಾ.ದಾಮೋದರ ಶೆಟ್ಟಿ, ಡಾ.ಬಿ.ಆರ್. ಲಕ್ಷ್ಮಣರಾವ್, ಸುಬ್ಬು ಹೊಲೆಯಾರ್, ಡಾ.ಸಿದ್ಧಲಿಂಗಯ್ಯ, ಹುಲಿಕುಂಟೆ ಮೂರ್ತಿ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ರವಿ ಬಾಗಿ, ಎಲ್.ಹನುಮಂತಯ್ಯ, ಎಸ್.ಮಂಜುನಾಥ್, ಚಿಂತಾಮಣಿ ಕೊಡ್ಲೆಕೆರೆ, ಡುಂಡಿರಾಜ್, ಎಚ್.ಎಲ್.ಪುಷ್ಪಾ, ಕೆ.ಷರೀಫಾ, ವೀಣಾ ಬನ್ನಂಜೆ, ಲಕ್ಷ್ಮೀಪತಿ ಕೋಲಾರ, ಡಿ.ಕೆ.ರಮೇಶ್. ಭಾಗವಹಿಸುವರು. ಅಗ್ರಹಾರ ಕೃಷ್ಣಮೂರ್ತಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ರವಿ ಸಿರಿವರ ಸಮನ್ವಯ ಮಾಡುವರು. 12 ಗಂಟೆಗೆ `ಸತ್ಯ ಮತ್ತು ಮಿಥ್ಯ: ಕಾರಣ ಮತ್ತು ಪರಿಹಾರ' ವಿಷಯದ ಚರ್ಚೆ ಇದೆ. ಎಸ್.ಚಿರಂಜೀವಿ ಸಿಂಗ್ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಜಿ.ಜೆ.ಲಿಂಗರಾಜು, ಸಂಜಯ್ ಗುಬ್ಬಿ, ಪ್ರಕಾಶ್ ಬೆಳವಾಡಿ ಭಾಗವಹಿಸುವರು.

ಮಧ್ಯಾಹ್ನ 2.30ರಿಂದ `ಎಲ್ಲವನೋ ಶಿವನೆಲ್ಲವನೋ'-ಜನಪದ ಗೀತೆಗಳು. ಜನಪದ ಕಲಾವಿದರಿಂದ ಪ್ರತಿಕ್ರಿಯೆ. ಮಧ್ಯಾಹ್ನ 3.30ಕ್ಕೆ ನೃತ್ಯಪಟುಗಳಿಂದ ಪ್ರತಿಕ್ರಿಯೆ. ಸಮೂಹ ನೃತ್ಯ-ಪಂಚಭೂತ ಶಿವ, ನಿಸರ್ಗ, ವಿಶ್ವಶಾಂತಿ. ಗಾಯಕರ ಪ್ರತಿಕ್ರಿಯೆ: ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದುಕೃಷ್ಣ, ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ರಮೇಶ್ ಚಂದ್ರ, ರತ್ನಮಾಲ ಪ್ರಕಾಶ್, ಮಾಲತಿ ಶರ್ಮ, ಬಿ.ಕೆ.ಸುಮಿತ್ರಾ, ಇಂದು ವಿಶ್ವನಾಥ್, ಅರ್ಚನಾ ಉಡುಪ, ಕೆ.ಎಸ್. ಸುರೇಖಾ, ಎಸ್.ಸುನೀತ. ಅಧ್ಯಕ್ಷತೆ: ವೈ.ಕೆ.ಮುದ್ದುಕೃಷ್ಣ. ಸಂಜೆ 5.30.

ಸಮರ್ಪಣಾ ಕಾರ್ಯಕ್ರಮ: ಅರ್ಪಣೆ ಡಾ. ಸುಮಾ ಸುಧೀಂದ್ರ. ನಾದ ರಂಜನಿ ತಂಡದಿಂದ ಸಮೂಹ ವೀಣಾವಾದನ. ಸಂಜೆ 7.
ನೃತ್ಯ ರೂಪಕ: ಪ್ರಕೃತಿ ಪುರುಷ- ಬದುಕಿನ ಸಮತೋಲ. ಸಂಯೋಜನೆ: ಡಾ.ಮಾಯಾ ರಾವ್ ಮತ್ತು ಮಧು ನಟರಾಜ್. ಸಂಜೆ 7.47.
ಭರತಾಂಜಲಿ ತಂಡದಿಂದ ಶಾಂತಿಗಾಗಿ ನೃತ್ಯ `ಮಹಾದೇವ ಶಂಭೋ'. 8.25.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.