ADVERTISEMENT

ನೃತ್ಯಗಾರ್ತಿ ತನ್ಮಯಿ ಸುಧಾಕರ್ ರಂಗಪ್ರವೇಶ ಇಂದು

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 4:39 IST
Last Updated 11 ಜನವರಿ 2025, 4:39 IST
   

ನೃತ್ಯಗಾರ್ತಿ ತನ್ಮಯಿ ಸುಧಾಕರ್ ಅವರ ರಂಗಪ್ರವೇಶ ‘ಹರಿಹರಾರ್ಪಣಂ’ ಜನವರಿ 11ರಂದು ಸಂಜೆ 5 ಗಂಟೆಗೆ ನಡೆಯಲಿದೆ. 

ಒಂಬತ್ತು ವರ್ಷಗಳಿಂದ ಡಾ. ರಕ್ಷಾ ಕಾರ್ತಿಕ ಅವರ ಶಿಷ್ಯೆಯಾಗಿರುವ ತನ್ಮಯಿ ಭರತನಾಟ್ಯ ಪ್ರವೀಣೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಐಡಿಯಾಸ್ಪ್ರಿಂಗ್‌ ಕ್ಯಾಪಿಟಲ್‌ ವ್ಯವಸ್ಥಾಪಕ ನಾಗಾನಂದ ದೊರೆಸ್ವಾಮಿ, ಅತಿಥಿಗಳಾಗಿ ವಿಮರ್ಶಕ ಡಾ.ಎಂ. ಸೂರ್ಯಪ್ರಸಾದ್‌, ಎಫ್‌ಕೆಸಿಸಿಐ ಉಪಾಧ್ಯಕ್ಷ ಸಾಯಿರಾಮ್‌ ಪ್ರಸಾದ್‌, ಆರ್‌ವಿ ಪಿಯು ಕಾಲೇಜಿನ ಪ್ರಾಂಶುಪಾಲ ತೇಜೇಶ್‌ ಎಸ್‌ ಮತ್ತು ವಿನಯಾ ನಾರಾಯಣನ್‌ ಪಾಲ್ಗೊಳ್ಳಲಿದ್ದಾರೆ.  ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಶಿವರಾತ್ರೀಶ್ವರ ವೃತ್ತ, ಜಯನಗರ 8ನೇ ಬ್ಲಾಕ್‌

ಇಂದು ‘ಸೇವಂತಿ ಪ್ರಸಂಗ’

ADVERTISEMENT

ರಂಗರಸಧಾರೆ ತಂಡ ಅಭಿನಯಿಸುವ  ಜಯಂತ ಕಾಯ್ಕಿಣಿ ವಿರಚಿತ ನಾಟಕ ‘ಸೇವಂತಿ ಪ್ರಸಂಗ’ ಜ.11ರಂದು ಸಂಜೆ 7ಗಂಟೆಗೆ ಎನ್‌.ಆರ್‌.ಕಾಲೊನಿಯಲ್ಲಿರುವ  ಡಾ.ಸಿ.ಅಶ್ವತ್ಥ ಕಲಾಭವನದಲ್ಲಿ ನಡೆಯಲಿದೆ. 

ನಾಟಕಕ್ಕೆ ವಿಜಯ ಕಶ್ಯಪ್‌ ಅವರ ನಿರ್ದೇಶನವಿದೆ. 

ನಾಳೆ ವೀರ ಸನ್ಯಾಸಿಯ ಆತ್ಮಗೀತೆ

ಪರಂ ಕಲ್ಚರ್‌ ‘ರಾಷ್ಟ್ರೀಯ ಯುವ ದಿನಾಚರಣೆ’ ಯ ಪ್ರಯುಕ್ತ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ನಿಮಿತ್ತ ಜ.12ರಂದು ಭಾನುವಾರ ‘ವೀರ ಸನ್ಯಾಸಿಯ ಆತ್ಮಗೀತೆ’ ಸಂಗೀತ ಕಾರ್ಯಕ್ರಮವನ್ನು ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮವು ಎರಡು ಗಂಟೆಗಳ ಅವಧಿಯದ್ದಾಗಿರುತ್ತದೆ. ಸಂಗೀತಗಾರರು: ಸಿದ್ಧಾರ್ಥ ಬೆಳ್ಮಣ್ಣು, ಪ್ರವೀಣ್‌ ಡಿ.ರಾವ್, ವಾರಿಜಶ್ರೀ ಗೋಪಾಲ್‌. ಸಂಜೆ 5.30. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.