ADVERTISEMENT

ಸಾಧನಾ ಸಂಗೀತ ಶಾಲೆಗೆ 30 ವರ್ಷ; ಮಕ್ಕಳ ಗೀತಗಾಯನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 10:51 IST
Last Updated 17 ನವೆಂಬರ್ 2021, 10:51 IST
ಸಾಧನಾ ಸಂಗೀತ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಗಣ್ಯರು
ಸಾಧನಾ ಸಂಗೀತ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಗಣ್ಯರು   

ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷ ತುಂಬಿದಪ್ರಯುಕ್ತ ಇತ್ತೀಚೆಗೆ ಗಾಯನ ಕಾರ್ಯಕ್ರಮ ನಡೆಯಿತು.

ಸಾಧನಾ ಸಂಗೀತ ಶಾಲೆಯ ಶುಕ್ರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ನಾಡೋಜ ಪ್ರೊ.ಕಮಲಾ ಹಂಪನಾ ಹಾಗೂ ಹಂಪನಾಗರಾಜಯ್ಯ ದಂಪತಿ, ಲೇಖಕ ಎಂಕೆ ಮಂಜುನಾಥ್, ಪ್ರೊ.ಅರುಣಾ, ಗಾಯಕಿ ರೆಮೋ, ಮಂಗಳಾ ಅಂಜನ್, ಯುವ ಗಾಯಕ ಅನಿರುದ್ಧ ಶಾಸ್ತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಜೆ ವೇಳೆ14 ಯುವ ಗಾಯಕರ ಗಾಯನ ನಡೆಯಿತು.ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ದೇಶಕ ಜೋಸೈಮನ್, ಮಾಲತಿ ಸರದೇಶಪಾಂಡೆ, ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ ಜಟ್ಕರ್ ದಂಪತಿಗಳು, ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್, ಪತ್ರಕರ್ತ ಬಿ.ಜಿ. ರವಿಕುಮಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.