ADVERTISEMENT

ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮಾ ನಿಧನ

​ಪ್ರಜಾವಾಣಿ ವಾರ್ತೆ
Published 10 ಮೇ 2022, 10:07 IST
Last Updated 10 ಮೇ 2022, 10:07 IST
ಪಂಡಿತ್‌ ಶಿವಕುಮಾರ್‌ ಶರ್ಮಾ
ಪಂಡಿತ್‌ ಶಿವಕುಮಾರ್‌ ಶರ್ಮಾ   

ನವದೆಹಲಿ: ಭಾರತದ ಖ್ಯಾತ ಸಂಗೀತ ಮಾಂತ್ರಿಕ, ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮಾ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಕಳೆದ 6 ತಿಂಗಳುಗಳಿಂದಕಿಡ್ನಿ ವೈಫಲ್ಯದಿಂದಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ (ಮೇ 10)ಮುಂಬೈನಲ್ಲಿರುವನಿವಾಸದಲ್ಲಿ ಹೃದಯಸ್ತಂಭನದಿಂದ ನಿಧನರಾದರು ಎಂದು ಅವರ ಕುಟುಂಬಮೂಲಗಳು ತಿಳಿಸಿವೆ.

ಶಾಸ್ತ್ರೀಯ ಸಂಗೀತ ಮಾತ್ರವಲ್ಲದೇ ಚಲನಚಿತ್ರ ಸಂಗೀತದಲ್ಲೂ ಶಿವಕುಮಾರ್‌ ಶರ್ಮಾ ರಾಷ್ಟ್ರಮಟ್ಟದಲ್ಲಿ ಖ್ಯಾತಿಪಡೆದಿದ್ದರು. ಬಾಲಿವುಡ್‌ನಲ್ಲಿ ಚಾಂದಿನಿ, ಸಿಲ್‌ಸಿಲಾ, ಡರ್‌ ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದರು.

ADVERTISEMENT

ಶಿವಕುಮಾರ್‌ ಶರ್ಮಾ ಅವರು 1938ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದರು. 1950ರಲ್ಲಿ ತಂದೆಯ ಬಳಿ ಸಂತೂರ್‌ ಶಿಕ್ಷಣ ಆರಂಭಿಸಿದರು. ನಂತರ ಸಂಗೀತ ನಿರ್ದೇಶಕರು ಸೇರಿಂದತೆ ವಿವಿಧ ಸಂಗೀತಗಾರರ ಬಳಿ ಕೆಲಸ ಮಾಡಿ ಸಂತೂರ್‌ ವಾದನದಲ್ಲಿ ಪ್ರಾವೀಣ್ಯತೆ ಪಡೆದರು.

ಭಾರತ ಸೇರಿದಂತೆ ವಿದೇಶಗಳಲ್ಲೂ ಶಿವಕುಮಾರ್‌ ಶರ್ಮಾ ಸಾವಿರಾರು ಸಂಗೀತ ಕಛೇರಿಗಳನ್ನು ನೀಡಿದ್ದಾರೆ.

ಶಿವಕುಮಾರ್‌ ಶರ್ಮಾ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು, ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.