ADVERTISEMENT

ಅರ್ಜುನಸಾ ನಾಕೋಡ ಸ್ಮರಣೆಗೆ ಸ್ಮೃತಿ ಸಂಗೀತೋತ್ಸವ

smruthi

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:45 IST
Last Updated 11 ಫೆಬ್ರುವರಿ 2019, 19:45 IST
ನಾಗನಂದಿನಿ
ನಾಗನಂದಿನಿ   

ರೇಣುಕಾ ಸಂಗೀತ ಸಭಾ ಫೆ. 16ರಂದು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ 17ನೇ ವರ್ಷದ ಸ್ಮೃತಿ ವಾರ್ಷಿಕ ಸಂಗೀತೋತ್ಸವ ಆಯೋಜಿಸಿದೆ. ಪಂ. ಅರ್ಜುನಸಾ ನಾಕೋಡ ಸ್ಮರಣೆಗಾಗಿ ಈ ಸಂಗೀತೋತ್ಸವ ನಡೆಯಲಿದೆ.

ಅತಿಥಿಗಳು: ಆರ್. ಸುಬ್ಬರಾಜ್ ಅರಸ್ ಮತ್ತು ಅನಸೂಯಾ ನಾಕೋಡ್. ಅಧ್ಯಕ್ಷತೆ: ಯತಿರಾಜ ಜೀಯರ್ ಸ್ವಾಮೀಜಿ. ಈ ಬಾರಿಯ ಅರ್ಜುನ ಸಾ ನಾಕೋಡ ಗೌರವ ಪುರಸ್ಕಾರವನ್ನು ಸಂಗೀತಗಾರ ಪಂ. ವಿನಾಯಕ್ ತೊರವಿ ಅವರಿಗೆ ಪ್ರದಾನ ಮಾಡಲಾಗುವುದು.

ಸಂಗೀತೋತ್ಸವದಲ್ಲಿ ಪುಣೆಯ ಸಿತಾರ್ ವಾದಕ ಉಸ್ತಾದ್ ಶಾಹಿದ್ ಪರ್ವೇಜ್ ಖಾನ್, ಮುಂಬೈನ ಗಾಯಕ ರಾಮ್‌ ದೇಶಪಾಂಡೆ. ನಗರದ ನಾಗನಂದಿನಿ ವಿಶ್ವನಾಥ್, ಅನಘಾ ಕಲ್ಬಾಗ್, ಮಹಾಲಕ್ಷ್ಮೀ ಹೆಗಡೆ ಹಾಡುಗಾರಿಕೆ, ಸ್ನೇಹಾ ಮತ್ತು ಆರ್ಯ ಅವರಿಂದ ಕೊಳಲು, ಅಮಿತ್ ನಾಯಕ್ ಅವರಿಂದ ಮ್ಯಾಂಡೊಲಿನ್ ಜುಗಲ್ ಬಂದಿ ನಡೆಯಲಿದೆ. ಇವರಿಗೆ ರಘುನಾಥ ನಾಕೋಡ್, ರಾಜೇಂದ್ರ ನಾಕೋಡ್, ಡಾ.ರವಿಕಿರಣ್ ನಾಕೋಡ್, ಮೈಸೂರು ಪಿ. ಅಶ್ವಿನ್, ವಿ. ದತ್ತಕುಮಾರ್, ವ್ಯಾಸಮೂರ್ತಿ ಕಟ್ಟಿ, ಸಾಯಿತೇಜಸ್ ಚಂದ್ರಶೇಖರ್ ವಾದ್ಯ ಸಹಕಾರ ನೀಡುವರು.

ADVERTISEMENT

ಮಾಹಿತಿಗೆ ವಿಶ್ವನಾಥ್ ನಾಕೋಡ್ 98450 54543ಗೆ ಸಂಪರ್ಕಿಸಬಹುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.