ADVERTISEMENT

ನಾ ದಿವಾಕರ ಅವರ ಕವನ 'ಶೋಧ ಮರುಶೋಧದ ದಾರಿ'

ನಾ ದಿವಾಕರ
Published 9 ಆಗಸ್ಟ್ 2025, 23:30 IST
Last Updated 9 ಆಗಸ್ಟ್ 2025, 23:30 IST
   

ಅನಾಥ ಭಾವ ಕಳೆಯಲು ತುಸು ನಗು ಬೇಕಿದೆ
ಮಸಣ ಮೌನದ ಅಂಗಳದಲಿ ಹುಡುಕುವಿರಾ ?

ಆಡುವ ಪಿಸು ನುಡಿಗೊಂದು ತೆರೆದ ಕಿವಿ ಬೇಕಿದೆ
ಮನದ ಮೌನಕೆ ತುಡಿವ ಹೃದಯ ಅರಸುವಿರಾ ?

ಏಕಾಂತ ಭಾವ ತರಂಗಗಳಿಗೆ ಬಿಗಿಯಪ್ಪುಗೆ ಬೇಕಿದೆ
ಸದ್ದಿಲ್ಲದ ಕ್ಷಣಭಂಗುರ ಸುನಾದ ಉಣಬಡಿಸುವಿರಾ ?

ADVERTISEMENT

ಸವೆದ ಹೆಜ್ಜೆಗಳ ದಿನಚರಿಗೊಂದು ಖಾಲಿಹಾಳೆ ಬೇಕಿದೆ
ಶಾಯಿ ಇಲ್ಲದ ಲೇಖನಿಗೆ ಎರಡು ಹನಿ  ನೀಡುವಿರಾ  ?

ಗೂಡು ತಪ್ಪಿದ ಮರಿಹಕ್ಕಿಗೆ ಆಸರೆಯೊಂದು ಬೇಕಿದೆ
ರೆಕ್ಕೆಮೂಡದ ಕಂದನಿಗೆ ತಾಯ್ಮಡಿಲ ಕೊಡಿಸುವಿರಾ  ?

ಬೇಕು ಬೇಡಗಳ ಸಂತೆಮಾಳದಲಿ ವಾತ್ಸಲ್ಯ ಬೇಕಿದೆ
ಮಾರುವವರು ಕಂಡರೆ ಹೊಸ್ತಿಲಿಗೆ ಕರೆತರುವಿರಾ ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.