ಕೆ.ಆರ್.ಪೇಟೆ: ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಭಾಗವಹಿಸಲು ತಾಲ್ಲೂಕಿನ ಕೃಷ್ಣಾಪುರದಿಂದ ಹೊರಟ ‘ಊರು ಮಾರಮ್ಮ ತಂಡ’ದ ಕಲಾವಿದರನ್ನು ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಬೀಳ್ಕೊಡಲಾಯಿತು.
ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಿಂದೊಳ್ ಜನಾಂಗದ ಕಲಾವಿದರ ತಂಡ ತಾಲ್ಲೂಕಿನಿಂದ ಭಾಗವಹಿಸಲಿರುವ ಏಕೈಕ ತಂಡವಾಗಿದೆ.
ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಹರಿಚರಣತಿಲಕ್ ಶುಭ ಹಾರೈಸಿದರು. ಶೀಳನೆರೆ ಶಿವಕುಮಾರ್, ಕಟ್ಟೆ ಮಹೇಶ್, ನಂಜುಂಡಯ್ಯ, ಕೆ.ಆರ್.ನೀಲಕಂಠ, ಮಧುಸೂದನ್, ಗಂಗಾಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.