ಸಂಕಟ ಬಂದಾಗ ವೆಂಕಟರಮಣ ಎಂಬುದು ಗಾದೆ ಮಾತು. ವೈಯಕ್ತಿಕವಾಗಿ ಅಥವಾ ಮನೆಯಲ್ಲಿ ಏನಾದರೂ ತೊಂದರೆ ಕಂಡರೆ ಕೆಲವೊಂದು ಸರಳ ಉಪಾಯಗಳನ್ನು ಜ್ಯೋತಿಷದಲ್ಲಿ ಹೇಳಲಾಗಿದೆ. ಇದರಲ್ಲಿ ಪ್ರಮುಖವಾದದ್ದು ಧಾನ್ಯಗಳು. ಧಾನ್ಯಗಳನ್ನು ಯಾವ ಸಂದರ್ಭದಲ್ಲಿ ಯಾರಿಗೆಲ್ಲಾ ದಾನ ಮಾಡುವುದರಿಂದ ಏನೇನು ಲಾಭ ಎಂಬುದರ ಮಾಹಿತಿ ಇಲ್ಲಿದೆ..
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರ ಮನಸ್ಸಿಗೆ ಸಂಬಂಧಪಟ್ಟಂತಹ ಸರ್ವರೋಗಗಳು, ನಕಾರಾತ್ಮಕ ಯೋಚನೆಗಳು, ಮನೆಯ ಕಲಹಗಳು ನಿವಾರಣೆಯಾಗುತ್ತವೆ. ಮನೆಯ ಸದಸ್ಯರಿಗೆ ಉತ್ತಮ ಆರೋಗ್ಯ ಒದಗುತ್ತದೆ.
ತೊಗರಿ ಬೇಳೆ ದಾನದಿಂದ ಕುಜ ದೋಷ (ಮದುವೆಗೆ ಸಂಬಂಧಿತ ಸಮಸ್ಯೆಗಳು), ವಂಶ ಪಾರಂಪರಿಕವಾಗಿ ಬಂದಿರುವ ಸರ್ಪದೋಷಗಳು, ರಕ್ತದೊತ್ತಡ (B.P) ಸಮಸ್ಯೆ ನಿವಾರಣೆಯಾಗುತ್ತವೆ. ರಜಸ್ವಲಾ (ಮುಟ್ಟಾದ ಹೆಣ್ಣು ಮಕ್ಕಳ) ದೋಷಗಳು ನಿವಾರಣೆಯಾಗುತ್ತವೆ.
ಉದ್ದಿನ ಬೇಳೆ ದಾನದಿಂದ ನೀವು ಶ್ರಾದ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗಿ, ಪಿತೃ ಶಾಪ ನಿವಾರಣೆಯಾಗುತ್ತದೆ. (ಪೂರ್ವಜರಿಂದ ಉಂಟಾಗುವ ದೋಷ ಅಥವಾ ಸಮಸ್ಯೆಗಳು), ಅಪಮೃತ್ಯುಗಳು (ಅಕಾಲಿಕ ಮರಣ ಸಂಭವಿಸುವ ಸಾಧ್ಯತೆ ಕಡಿಮೆ), ಅಗೋಚರ ರೋಗಗಳು (ಕಣ್ಣಿಗೆ ಕಾಣದ, ಇಂದ್ರಿಯ ಜ್ಞಾನಕ್ಕೆ ನಿಲುಕದಿರುವಂತಹ ರೋಗಗಳು), ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ.
‘ಇಷ್ಟಾರ್ಥ ಪ್ರದಾಯಿನಿ‘ ಎಂದರೆ (ತೆಂಗಿನಕಾಯಿ) ಆಸೆಯನ್ನು ಈಡೇರಿಸುವವಳು ಅಥವಾ ಇಷ್ಟಾರ್ಥಗಳನ್ನು ಕರುಣಿಸುವವಳು ಎಂದರ್ಥ.
ಮಕ್ಕಳು ಸನ್ಮಾರ್ಗದಲ್ಲಿ (ಒಳ್ಳೆಯ ದಾರಿ) ನಡೆಯುತ್ತಾರೆ. ಮನೆಯ ಮಂದಿಗೆ ಆರೋಗ್ಯ ಭಾಗ್ಯ, ನೆಮ್ಮದಿ, ಸಂತೋಷ ದೊರೆಯಲು, ಸಂತಾನ ಸಮಸ್ಯೆಗಳು, ಉದರ ಸಂಬಂಧಿ ರೋಗಗಳು ನಿವಾರಣೆಯಾಗಲು, ಸರ್ವಕಾರ್ಯ ವಿಜಯವಾಗುವುದರ ಜತೆಗೆ ಕಾರ್ಯಗಳು ಪೂರ್ಣ ಫಲ ಕೊಡಬೇಕಾದರೆ ತೆಂಗಿನಕಾಯಿ ದಾನ ಮಾಡಬೇಕು.
ವೀಳ್ಯದೆಲೆ ದಾನ ಮಾಡುವುದರಿಂದ ‘ಧನಲಕ್ಷ್ಮೀ‘ ಅನುಗ್ರಹವಾಗಿ ಧನ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ನಿವಾರಣೆಯಾಗುತ್ತವೆ.
ಅಡಿಕೆಗೆ (ಇಷ್ಟಲಕ್ಷ್ಮೀ) ಸಂಸ್ಕೃತದಲ್ಲಿ ‘ಪೂಗೀಫಲ‘ ಎಂದು ಕರೆಯುತ್ತಾರೆ. ಯಾರು ವೀಳ್ಯದೆಲೆ ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೆ ನೆರವೇರುತ್ತವೆ. ಬರೀ ಅಡಿಕೆಯನ್ನು ತಿಂದರೆ ಬ್ರಹ್ಮಹತ್ಯಾ ದೋಷ ( ಮಹಾ ಪಾಪ) ಬರುವುದು ಆದ್ದರಿಂದ ಬರೀ ಅಡಿಕೆ ತಿನ್ನಬಾರದು ಎನ್ನುತ್ತಾರೆ.
ಬೆಲ್ಲದಲ್ಲಿ 'ರಸಲಕ್ಷ್ಮೀ, ಬ್ರಹ್ಮದೇವರು, ಮಹಾಲಕ್ಷ್ಮೀ, ಮಹಾಗಣಪತಿ' ದೇವರ ಸಾನ್ನಿಧ್ಯ ಇರುತ್ತದೆ. ಬೆಲ್ಲ ದಾನ ಮಾಡುವುದರಿಂದ ಬಹಳಷ್ಟು ನಕಾರಾತ್ಮಕ ಯೋಚನೆಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ ಎಂಬುವುದು ನಂಬಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.