ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಪ್ರಜಾವಾಣಿ ಫೈಲ್
ಅಕ್ಟೋಬರ್ 23 ರಿಂದ 2026 ರವರೆಗೆ ಅಪರೂಪದ ಗ್ರಹಸ್ಥಿತಿ ನಿರ್ಮಾಣವಾಗಲಿದೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಮೂರು ಪ್ರಮುಖ ಗ್ರಹಗಳಾದ ಶುಕ್ರ, ರವಿ ಹಾಗೂ ಚಂದ್ರ ತಮ್ಮ ನೀಚ ಸ್ಥಿತಿಯಲ್ಲಿ ಇರುತ್ತವೆ. ಇದರ ಪರಿಣಾಮದಿಂದ ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಎಲ್ಲರ ಮೇಲು ವಿಭಿನ್ನ ರೀತಿಯ ಪ್ರಭಾವ ಬೀಳಲಿದೆ ಎಂದು ಜ್ಯೋತಿಷ ಹೇಳುತ್ತದೆ.
ರವಿ ಗ್ರಹದ ಪ್ರಭಾವ:
ತುಲಾ ರಾಶಿಯಲ್ಲಿ ರವಿ ನೀಚ ಸ್ಥಿತಿಯಲ್ಲಿರುವುದರಿಂದ ತುಲಾ, ವೃಶ್ಚಿಕ, ಮೀನಾ, ಕನ್ಯಾ, ಕರ್ಕಾಟಕ, ಮಿಥುನ ಮತ್ತು ಕುಂಭ ರಾಶಿಯವರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಇದರಿಂದ ಹೃದಯ ಹಾಗೂ ಕಣ್ಣಿನ ತೊಂದರೆ, ಅನಾವಶ್ಯಕ ಖರ್ಚು, ಅಹಂಕಾರದಿಂದ ವಿವಾದ. ಉದ್ಯೋಗ ಹಾಗೂ ಸರ್ಕಾರಿ ಸಂಬಂಧಿತ ಸಮಸ್ಯೆಗಳು ಈ ರಾಶಿಯವರಿಗೆ ಎದುರಾಗಬಹುದು ಎಂದು ಜ್ಯೋತಿಷ ಹೇಳುತ್ತದೆ.
ಪರಿಹಾರ:
ಭಾನುವಾರ ರವಿಗ್ರಹಕ್ಕಾಗಿ ಗೋದಿ ಮತ್ತು ಕೆಂಪು ವಸ್ತ್ರ ದಾನ ಮಾಡುವುದು, ಸೋಮವಾರ ಚಂದ್ರ ಗ್ರಹಕಾಗಿ ಅಕ್ಕಿ ಮತ್ತು ಬಿಳಿ ವಸ್ತ್ರ ದಾನ ಮಾಡುವುದು ಹಾಗೂ ಶುಕ್ರವಾರ ಶುಕ್ರ ಗ್ರಹಕ್ಕಾಗಿ ಅವರೆಕಾಳು ಮತ್ತು ಬಿಳಿ ವಸ್ತ್ರ ದಾನ ಮಾಡಬೇಕು ಎಂದು ಜ್ಯೋತಿಷ ಹೇಳುತ್ತದೆ.
ಚಂದ್ರ ಗ್ರಹದ ಪ್ರಭಾವ:
ಚಂದ್ರನ ನೀಚ ಸ್ಥಿತಿಯಿಂದ ಮನಸ್ಸು ಅಶಾಂತವಾಗುವುದು. ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಗೊಂದಲ. ನೀರಿನಿಂದ ಅವಘಡಗಳು, ತಾಯಂದಿರ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇದೆ. ವೃಷಭ, ವೃಶ್ಚಿಕ, ಮೇಷ, ಧನಸ್ಸು ಹಾಗೂ ಕರ್ಕಾಟಕ ರಾಶಿಯವರು ಹಣಕಾಸು ಮತ್ತು ವಾಹನ ಚಾಲನೆ ಕುಟುಂಬದ ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ ಜ್ಯೋತಿಷ ಸಲಹೆ ನೀಡುತ್ತದೆ.
ಗ್ರಹಗಳ ಸ್ಥಿತಿ
ಶುಕ್ರ : ಕನ್ಯಾ ರಾಶಿಯಲ್ಲಿ ನೀಚ ಸ್ಥಿತಿ.
ರವಿ: ತುಲಾ ರಾಶಿಯಲ್ಲಿ ನೀಚ ಸ್ಥಿತಿ
ಚಂದ್ರ: ವೃಶ್ಚಿಕ ರಾಶಿಯಲ್ಲಿ ನೀಚ ಸ್ಥಿತಿ
ಗುರು: ಪರಮೋಚ್ಚ ಸ್ಥಿತಿಯಲ್ಲಿ ಕರ್ಕಾಟಕ ರಾಶಿಯಲ್ಲಿ ಇದು ಚಂದ್ರನ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಶುಕ್ರ ಗ್ರಹದ ಪ್ರಭಾವ:
ಕನ್ಯಾ, ಮೇಷ, ಧನಸ್ಸು, ಮೀನ ರಾಶಿಯವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಗುಪ್ತ ರೋಗಗಳು ದಾಂಪತ್ಯ ಕಲಹ, ಪ್ರೇಮದಲ್ಲಿ ಬದಲಾವಣೆಗಳು, ಸ್ಥಾನಮಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಸ್ತ್ರೀರೋಗ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷದಲ್ಲಿ ಎಚ್ಚರಿಕೆ ನೀಡಲಾಗಿದೆ.
ರಾಷ್ಟ್ರೀಯತೆ ಮತ್ತು ವೈಯಕ್ತಿಕ ಪರಿಣಾಮ:
ಈ ಅವಧಿಯಲ್ಲಿ ಆರ್ಥಿಕ ಬಿಗ್ಗಟ್ಟು, ಸರ್ಕಾರಗಳ ಬದಲಾವಣೆ, ಪ್ರತಿಭಟನೆಗಳು, ನೀರಿಗೆ ಸಂಬಂಧಿಸಿದ ಅವಘಢಗಳು ಮತ್ತು ಆಹಾರ ವಿಷಕಾರಿ ಘಟನೆಗಳು ಸಂಭವಿಸಬಹುದು. ಸ್ತ್ರೀಯರ ಮೇಲೆ ಈ ಗ್ರಹ ಸ್ಥಿತಿಯ ಪ್ರಭಾವ ಹೆಚ್ಚು ಇರಲಿದೆ. ಮನಸ್ಸಿನ ಶಾಂತಿ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಜ್ಯೋತಿಷದಲ್ಲಿ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.