
ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಜಾತಕದಲ್ಲಿ ಶನಿಯ ಸ್ಥಾನ ವ್ಯಕ್ತಿಯ ವೈಯಕ್ತಿಕ ಜೀವನ, ವೃತ್ತಿ ಮತ್ತು ವ್ಯವಹಾರಗಳ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಶನಿಯ ಸಾಡೇಸಾತಿ ರಾಶಿಗಳ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತದೆ. ಸಾಡೇಸಾತಿ ಎಂದರೆ 7.5 ವರ್ಷಗಳು. ಈ ಅವಧಿ 2.5 ವರ್ಷಗಳು 3 ಭಾಗಗಳಿಂದ ಕೂಡಿರುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಎಷ್ಟು ವರ್ಷಗಳವರೆಗೆ ಶನಿ ಪ್ರಭಾವ ಇರಲಿದೆ ಎಂಬುದನ್ನು ತಿಳಿಯೋಣ.
ಮೇಷ ರಾಶಿ: ಈ ರಾಶಿಯವರಿಗೆ ಶನಿ ಪ್ರಭಾವ ಈಗಾಗಲೇ ಆರಂಭವಾಗಿದ್ದು, 2033ರ ಮೇ 31ರವರೆಗೆ ಮುಂದುವರೆಯಲಿದೆ ಎಂದು ಜ್ಯೋತಿಷ ಹೇಳುತ್ತದೆ.
ವೃಷಭ ರಾಶಿ: 2027ರ ಜೂನ್ 3ರಿಂದ ಈ ರಾಶಿಯ ಮೇಲೆ ಶನಿ ಪ್ರಭಾವ ಆರಂಭವಾಗಿ 2034ರ ಜೂನ್ 13ರವರೆಗೆ ಇರಲಿದೆ.
ಮಿಥುನ ರಾಶಿ: 2029ರ ಆಗಸ್ಟ್ 8ರಿಂದ ಆರಂಭವಾಗುವ ಶನಿ ಪ್ರಭಾವ 2036ರ ಆಗಸ್ಟ್ 27ರವರೆಗೆ ಇರಲಿದೆ.
ಕಟಕ ರಾಶಿ: ಜ್ಯೋತಿಷದ ಪ್ರಕಾರ ಈ ರಾಶಿಗೆ 2032ರ ಮೇ 31ರಿಂದ ಶನಿ ಪ್ರಭಾವ ಆರಂಭವಾಗಿ 2039ರ ಸೆಪ್ಟೆಂಬರ್ 22ರವರೆಗೆ ಇರಲಿದೆ.
ಸಿಂಹ ರಾಶಿ: 2034ರ ಜುಲೈ 13ರಂದು ಈ ರಾಶಿಯ ಮೇಲೆ ಶನಿ ಪ್ರಭಾವ ಆರಂಭವಾಗಿ 2041ರ ಜನವರಿ 29ಕ್ಕೆ ಕೊನೆಗೊಳ್ಳುತ್ತದೆ.
ಕನ್ಯಾ ರಾಶಿ: 2036ರ ಆಗಸ್ಟ್ 27ರಂದು ಶನಿ ಪ್ರಭಾವ ಈ ರಾಶಿಯವರ ಮೇಲೆ ಆರಂಭವಾಗಿ, 2043ರ ಡಿಸೆಂಬರ್12 ರವರೆಗೆ ಇರಲಿದೆ.
ತುಲಾ ರಾಶಿ: 2038ರ ಅಕ್ಟೋಬರ್ 22ರಿಂದ ಆರಂಭವಾಗಿ 2046ರ ಡಿಸೆಂಬರ್ 8ರವರೆಗೆ ಇರಲಿದೆ.
ವೃಶ್ಚಿಕ ರಾಶಿ: 2041ರ ಡಿಸೆಂಬರ್ 11ರಿಂದ ಆರಂಭವಾಗುವ ಶನಿ ಪ್ರಭಾವ 2049ರ ಡಿಸೆಂಬರ್ 3ರ ವರೆಗೆ ಇರಲಿದೆ.
ಧನಸ್ಸು ರಾಶಿ: ಈ ರಾಶಿಯವರಿಗೆ 2043ರ ಡಿಸೆಂಬರ್ 11ರಿಂದ ಶನಿ ಪ್ರಭಾವ ಆರಂಭವಾಗಿ 2052ರ ಫೆಬ್ರವರಿ 24ರ ವರೆಗೆ ಇರಲಿದೆ.
ಮಕರ ರಾಶಿ: ಈ ರಾಶಿಯವರಿಗೆ ಸದ್ಯ ಶನಿ ವಕ್ರ ದೃಷ್ಟಿ ಮುಗಿದು ಹೋಗಿದೆ.
ಕುಂಭ ರಾಶಿ: ಈ ರಾಶಿಯವರಿಗೆ ಶನಿ ಪ್ರಭಾವ ಈಗ ನಡೆಯುತ್ತಿದ್ದು, 2027ರ ಜೂನ್ 3ರ ವರೆಗೆ ಇರಲಿದೆ.
ಮೀನ ರಾಶಿ:ಈ ರಾಶಿಯವರಿಗೆ ಶನಿ ಪ್ರಭಾವ ಈಗ ನಡೆಯುತ್ತಿದ್ದು, 2029ರ ಆಗಸ್ಟ್ 8ರ ವರೆಗೆ ಇರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಹೇಳಲಾಗುತ್ತದೆ.
ಲಾಭನಷ್ಟಗಳು:
ಈ ಅವಧಿಯಲ್ಲಿ ಲಾಭನಷ್ಟ ಎರಡೂ ಸಂಭವಿಸುತ್ತವೆ. ಉದ್ಯೋಗ ಬದಲಾವಣೆ, ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಕದನ, ಮಾನಸಿಕ ಆಯಾಸ, ಆರ್ಥಿಕ ನಷ್ಟ, ವೃತ್ತಿ ಜೀವನದಲ್ಲಿ ಸವಾಲು ಹಾಗೂ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು.
ಉದ್ಯೋಗದಲ್ಲಿ ಬಡ್ತಿ, ಅದೃಷ್ಟ, ಸಂತೋಷ, ವೃತ್ತಿಯಲ್ಲಿ ಪ್ರಗತಿ, ಆರ್ಥಿಕ ಸ್ಥಿತಿ ಸುಧಾರಣೆ, ಸಮಸ್ಯೆಗಳ ನಿವಾರಣೆ ಹಾಗೂ ಆದಾಯ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.