ADVERTISEMENT

ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2025, 11:26 IST
Last Updated 9 ಅಕ್ಟೋಬರ್ 2025, 11:26 IST
<div class="paragraphs"><p>ಚಿತ್ರ ಕೃಪೆ: ಪ್ರಜಾವಾಣಿ ಫೈಲ್</p></div>
   

ಚಿತ್ರ ಕೃಪೆ: ಪ್ರಜಾವಾಣಿ ಫೈಲ್

ಭಾರತದಲ್ಲಿ ಅನೇಕರು ಜ್ಯೋತಿಷ ನಂಬುವವರಿದ್ದಾರೆ. ರಾಶಿಗಳ ಮೇಲೆ ಬೀರುವ ಫಲಾಫಲಗಳ ಆಧಾರದಲ್ಲೇ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಇದ್ದಾರೆ. ಅದರಂತೆ ಸದ್ಯ ಇದೇ ಅಕ್ಟೋಬರ್ 9 ರಿಂದ ಶುಕ್ರನ ರಾಜ ಯೋಗ ಪ್ರಾರಂಭವಾಗಲಿದೆ. ಇದರಿಂದ 7 ರಾಶಿಯವರಿಗೆ ಉತ್ತಮ ಯಶಸ್ಸು ದೊರೆಯಲಿದೆ ಎಂದು ಜ್ಯೋತಿಷ ತಿಳಿಸಿದೆ.

ಶುಕ್ರ ಗ್ರಹವು ಮಹತ್ವ ಪೂರ್ಣ ಗತಿಯ ಬದಲಾವಣೆಯಿಂದ ಕಲೆ, ವೈಭವ, ಐಶ್ವರ್ಯ, ಪ್ರೀತಿ ಮತ್ತು ಆಕರ್ಷಣೆಯ ಪ್ರತ್ಯೇಕವಾಗಿರುವ ಶುಕ್ರ ಗ್ರಹ ತನ್ನ ಮಿತ್ರನಾದ ಬುಧನ ರಾಶಿಯಾದ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಇದು ಸಾಮಾನ್ಯವಾಗಿ ಶುಕ್ರನಿಗೆ ನೀಚ ರಾಶಿ ಎಂದು ಪರಿಗಣಿಸಲಾಗಿದೆ. ಆದರೆ, ಈ ಬಾರಿ ನಡೆಯುತ್ತಿರುವ ಗ್ರಹ ಸ್ಥಿತಿಗತಿಯ ವಿಶಿಷ್ಟ ಸಂಯೋಜನೆಯ ಕಾರಣದಿಂದಾಗಿ ನೀಚ ಬಂಗಾರ ಎಂಬ ಶಕ್ತಿಶಾಲಿ ಯೋಗವು ರೂಪಗೊಳ್ಳಲಿದೆ.

ADVERTISEMENT

ಈ ಯೋಗದ ಪರಿಣಾಮದಿಂದಾಗಿ ಕೆಲವೊಂದು ರಾಶಿಗಳಿಗೆ ಯಶಸ್ಸು ದೊರಕಲಿದೆ. ಧನ ಲಾಭ ವ್ಯಕ್ತಿತ್ವದಲ್ಲಿ ಬೆಳವಣಿಗೆ ಕಂಡು ಬರಲಿದೆ. ಸುಮಾರು 26 ದಿನಗಳವರೆಗೆ ಈ ರಾಜಯೋಗ ಇರಲಿದೆ. ಹಾಗಿದ್ರೆ ಯಾವ ರಾಶಿಯವರಿಗೆ ಈ ಯಶಸ್ಸು ಸಿಗಲಿದೆ ಎಂಬುದನ್ನು ನೋಡೋಣ ಬನ್ನಿ.

1–ಮೇಷ ರಾಶಿ: ಈ ರಾಶಿಯವರಿಗೆ ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ನೆಮ್ಮದಿ. ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತದೆ. ಹಳೆಯ ಹಣಕಾಸು ಬಂಡವಾಳ ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು.

2– ವೃಷಭ ರಾಶಿ: ಈ ರಾಶಿಯವರಿಗೆ ವ್ಯವಸ್ಥಿತ ಹಣಕಾಸು ಲಾಭ. ಹೊಸ ಉದ್ಯಮದಲ್ಲಿ ಯಶಸ್ಸು. ಕಲೆ, ಫ್ಯಾಷನ್ ಅಥವಾ ಸಂಗೀತ ಕ್ಷೇತ್ರದವರು ಈ ಸಮಯದಲ್ಲಿ ಯಶಸ್ಸು ಸಾಧಿಸಲಿದ್ದಾರೆ.

3–ಮಿಥುನ ರಾಶಿ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಬದಲಾವಣೆ, ಪ್ರಭಾವಶಾಲಿ ಸಮಾಲೋಚನೆಗಳಿಂದ ಯಶಸ್ಸು. ಸಂವಹನ ಶಕ್ತಿ ಮತ್ತು ತಂತ್ರಜ್ಞಾನ ಬಲದಿಂದ ಹೊಸ ದಾರಿಗಳು ತೆರೆಯಲಿದೆ.

4– ಕಟಕ ರಾಶಿ: ಈ ರಾಶಿಯವರಿಗೆ ಕುಟುಂಬದ ಜೊತೆಗಿರುವ ಸಂಬಂಧ ಗಟ್ಟಿಯಾಗುತ್ತದೆ. ಗೃಹ ಅಲಂಕಾರ. ಆಸ್ತಿ ಖರೀದಿಯಲ್ಲಿ ಲಾಭ. ಶ್ರೀಮಂತಿಕೆ ಹಾಗೂ ನೆಮ್ಮದಿ ಎರಡರ ಸಂಯೋಜನೆಯ ಸಮಯವಾಗಿದೆ.

5 ಸಿಂಹ ರಾಶಿ: ಈ ರಾಶಿಯವರಿಗೆ ಸಂಪತ್ತು ಮತ್ತು ಆದಾಯದ ಹೊಸ ಮಾರ್ಗಗಳು ದೊರಕಲಿವೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ಗುರುತಿನ ಸಹಿತ ಉತ್ತೇಜನ. ಸಾಲ ತೀರಿಸಲು ಉತ್ತಮ ಸಮಯವಾಗಲಿದೆ.

6–ತುಲಾ ರಾಶಿ: ಈ ರಾಶಿಯವರಿಗೆ ಶುಕ್ರ ಅಧಿಪತಿ ಆದ್ದರಿಂದ ಯಾವುದೇ ಪ್ರಯತ್ನಗಳಿಗೆ ಯಶಸ್ವಿನ ದಾರಿ ದೊರೆಯುತ್ತದೆ. ವಿದೇಶ ಪ್ರಯಾಣ ಹಾಗೂ ಹೊಸ ಉದ್ಯೋಗಕ್ಕೆ ಅವಕಾಶ. ನ್ಯಾಯಾಂಗ ಸಂಬಂಧಿತ ಕಾರ್ಯಗಳಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ.

7–ಧನಸ್ಸು ರಾಶಿ: ಈ ರಾಶಿಯವರಿಗೆ ವೃತ್ತಿಪರ ಜೀವನದಲ್ಲಿ ಹಿರಿತನದ ಬಡ್ತಿ. ವೇತನ ವೃದ್ಧಿ ಅಥವಾ ಜವಾಬ್ದಾರಿಗಳ ಅವಕಾಶ ಸಾಮಾಜಿಕ ವಲಯದಲ್ಲಿ ಹೆಸರು ಮತ್ತು ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ.

Disclaimer: ಈ ಲೇಖನ ಜ್ಯೋತಿಷ ಶಾಸ್ತ್ರದ ಆಧಾರದ ಮೇಲೆ ಸಂಗ್ರಹಿಸಿ ಬರೆಯಲಾಗಿದೆ. ವೈಯಕ್ತಿಕ ಕುಂಡಲಿಯ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ನಿಖರವಾದ ಭವಿಷ್ಯವನ್ನು ತಿಳಿಯಲು ಉತ್ತಮ ಜ್ಯೋತಿಷಿಗಳ ಸಲಹೆ ಪಡೆಯುವುದು ಸೂಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.