ADVERTISEMENT

ಶುಕ್ರನ ಸಂಚಾರ: 2026ರಲ್ಲಿ ಈ ಮೂರು ರಾಶಿಗಳಿಗೆ ಭಾರೀ ಲಾಭ

ಎಲ್.ವಿವೇಕಾನಂದ ಆಚಾರ್ಯ
Published 28 ನವೆಂಬರ್ 2025, 12:32 IST
Last Updated 28 ನವೆಂಬರ್ 2025, 12:32 IST
   

2026ರ ಜನವರಿ 12ರಂದು ಶುಕ್ರನು ಉತ್ತರಾಷಾಢ ನಕ್ಷತ್ರದ ಎರಡನೇ ಪಾದದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಜ್ಯೋತಿಷದ ಪ್ರಕಾರ ಆ ಸಂದರ್ಭದಲ್ಲಿ ಮೂರು ರಾಶಿಯವರಿಗೆ ಸುವರ್ಣ ಕಾಲ ದೊರೆಯಲಿದೆ. ಶುಕ್ರ ಮತ್ತು ಶನಿಯ ಸ್ನೇಹ ಸಂಬಂಧದಿಂದ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲಿಯೂ ಮೂರು ರಾಶಿಯವರಿಗೆ ಅದೃಷ್ಟ ಒಲಿಯುವ ಸಂಭವ ಹೆಚ್ಚು.

ಮೇಷ ರಾಶಿ:

ಈ ರಾಶಿಯವರಿಗೆ 2026ರಲ್ಲಿ ಶುಕ್ರನ ಸಂಚಾರವಾಗಲಿದೆ. ಇವರು ಮಾಡುವ ಕೆಲಸ, ವ್ಯವಹಾರದಲ್ಲಿ ಪ್ರಗತಿ ದೊರೆಯುತ್ತದೆ. ವೃತ್ತಿ ಜೀವನದಲ್ಲಿ ಹೊಸ ಮೈಲುಗಲ್ಲನ್ನು ಪಡೆಯಲು ಸಹಕಾರಿಯಾಗುತ್ತದೆ. ಉದ್ಯೋಗ ಬದಲಿಸುವ ಯೋಚನೆ ಇದ್ದವರಿಗೆ ಇದು ಸೂಕ್ತ ಸಮಯ. ಚಲನಚಿತ್ರ, ಕಲೆ, ಸಂಗೀತ ಹಾಗೂ ಮಾಧ್ಯಮದಲ್ಲಿ ತೊಡಗಿರುವ ಜನರಿಗೆ ಉತ್ತಮ ಅವಕಾಶ ದೊರೆಯಲಿದೆ.

ADVERTISEMENT

ವೃಷಭ ರಾಶಿ:

ಈ ರಾಶಿಗೆ ಶುಕ್ರನು ಅಧಿಪತಿಯಾಗಲಿದ್ದಾನೆ. ಇದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಈ ರಾಶಿಯವರಿಗೆ ಧನ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ. ಆಸ್ತಿ ಖರೀದಿ, ಧಾರ್ಮಿಕ ಚಟುವಟಿಕೆ ಹಾಗೂ ಸಾಮಾಜಿಕವಾಗಿ ಮುಂದುವರಿಯುವ ಅವಕಾಶಗಳು ದೊರೆಯುತ್ತವೆ.

ತುಲಾ ರಾಶಿ:

ಈ ರಾಶಿಯವರು ಮನೆ, ವಾಹನ ಅಥವಾ ಆಸ್ತಿಗೆ ಸಂಬಂಧಪಟ್ಟಂತ ವ್ಯವಹಾರಗಳಲ್ಲಿ ಲಾಭ ಗಳಿಸಲಿದ್ದಾರೆ. ತಾಯಿಯೊಂದಿಗಿನ ಸಂಬಂಧ ಬಲಗೊಳ್ಳಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಂಗಾತಿಯ ಬೆಂಬಲವೂ ದೊರೆಯುತ್ತದೆ ಎಂದು ಜ್ಯೋತಿಷ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.