ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಭಾರತೀಯ ಆಟೋಮೊಬೈಲ್ ಉತ್ಪನ್ನಗಳ ಬೇಡಿಕೆಯು ಜಾಗತಿಕವಾಗಿ ಹೆಚ್ಚಾಗಿದೆ. ದೇಶದ ಆಟೋಮೊಬೈಲ್ ಉದ್ಯಮದ ಗಾತ್ರ ಈಗ ₹ 22 ಲಕ್ಷ ಕೋಟಿ ಇದೆ. ಐದು ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಲಿದೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ.
ಪ್ರಸ್ತುತ, ಅಮೆರಿಕದ ಆಟೋಮೊಬೈಲ್ ಉದ್ಯಮದ ಗಾತ್ರವು ₹ 78 ಲಕ್ಷ ಕೋಟಿ ಗಳಷ್ಟಿದ್ದರೆ, ಚೀನಾ ₹ 47 ಲಕ್ಷ ಕೋಟಿ ಹಾಗೂ ಮತ್ತು ಭಾರತ ₹ 22 ಲಕ್ಷ ಕೋಟಿ ಇದೆ.
2014ರಲ್ಲಿ ನಾನು ಸಾರಿಗೆ ಸಚಿವಾಲಯದ ಅಧಿಕಾರ ವಹಿಸಿಕೊಂಡಾಗ, ಆಟೋಮೊಬೈಲ್ ಉದ್ಯಮದ ಗಾತ್ರವು ₹ 7. 5 ಲಕ್ಷ ಕೋಟಿಗಳಷ್ಟಿತ್ತು. ಇಂದು ಅದರ ಗಾತ್ರ ₹ 22 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆಟೋಮೊಬೈಲ್ ಉದ್ಯಮವು ಇಲ್ಲಿಯವರೆಗೆ 4. 5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ. ಇದು ದೇಶದಲ್ಲೇ ಅತಿ ಹೆಚ್ಚು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.