ADVERTISEMENT

ಸಂಪೂರ್ಣ ವಿದ್ಯುತ್ ಚಾಲಿತ ಬಿಎಂಡಬ್ಲ್ಯು ಐಎಕ್ಸ್: ಮೊದಲ ದಿನವೇ ಎಲ್ಲವೂ ಬುಕ್!

ಪಿಟಿಐ
Published 14 ಡಿಸೆಂಬರ್ 2021, 12:15 IST
Last Updated 14 ಡಿಸೆಂಬರ್ 2021, 12:15 IST
ಬಿಎಂಡಬ್ಲ್ಯು ಐಎಕ್ಸ್‌
ಬಿಎಂಡಬ್ಲ್ಯು ಐಎಕ್ಸ್‌   

ನವದೆಹಲಿ: ಸಂಪೂರ್ಣ ವಿದ್ಯುತ್ ಚಾಲಿತ ಸ್ಪೋರ್ಟ್ಸ್‌ ಆ್ಯಕ್ಟಿವಿಟಿ ವೆಹಿಕಲ್‌ (ಎಸ್‌ಎವಿ) ‘ಐಎಕ್ಸ್‌’ ಬಿಡುಗಡೆ ಮಾಡಿದ ಮೊದಲ ದಿನವೇ, ಮೊದಲ ಹಂತದಲ್ಲಿ ಲಭ್ಯವಿದ್ದ ಎಲ್ಲ ಕಾರುಗಳ ಬುಕಿಂಗ್‌ ಆಗಿದೆ ಎಂದು ಬಿಎಂಡಬ್ಲ್ಯು ಕಂಪನಿ ಮಂಗಳವಾರ ತಿಳಿಸಿದೆ.

ಕಂಪನಿಯು ಸೋಮವಾರವಷ್ಟೇ ‘ಐಎಕ್ಸ್‌’ ಬಿಡುಗಡೆ ಮಾಡಿತ್ತು.

ಮೊದಲ ಹಂತದ ಬುಕಿಂಗ್‌ಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

2022ರ ಏಪ್ರಿಲ್‌ ತಿಂಗಳ ಆರಂಭದಿಂದ ಈ ಕಾರುಗಳ ವಿತರಣೆ ಶುರುವಾಗಲಿದೆ. ಎರಡನೇ ಹಂತದ ಬುಕಿಂಗ್‌ ಅನ್ನು 2022ರ ಮೊದಲ ತ್ರೈಮಾಸಿಕದಲ್ಲಿ ಆರಂಭಿಸಲಾಗುವುದು ಎಂದು ಕಂಪನಿಯು ಹೇಳಿದೆ.

‘ಐಎಕ್ಸ್‌’ನ ಪರಿಚಯಾತ್ಮಕ ಬೆಲೆಯು ₹ 1.16 ಕೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.