ADVERTISEMENT

ಹಲವು ಮೊದಲುಗಳ ಸೈಬರ್‌vಟ್ರಕ್

ಜಯಸಿಂಹ ಆರ್.
Published 22 ಜನವರಿ 2020, 19:30 IST
Last Updated 22 ಜನವರಿ 2020, 19:30 IST
   

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಶಕೆ ಇನ್ನಷ್ಟೇ ಆರಂಭವಾಗಬೇಕಾಗಿದೆ. ಇತ್ತೀಚಿನ ದಿನಗಳವರೆಗೂ ಭಾರತದಲ್ಲಿ ಮಾರಾಟವಾಗುತ್ತಿದ್ದ ವಿದ್ಯುತ್ ಚಾಲಿತ ಕಾರುಗಳ ರೇಂಜ್‌ (ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸುವ ಗರಿಷ್ಠ ದೂರ) 100–130 ಕಿ.ಮೀ.ನಷ್ಟಿರುತ್ತಿತ್ತು. 300 ಕಿ.ಮೀ.ಗಿಂತಲೂ ಹೆಚ್ಚು ರೇಂಜ್‌ನ ಒಂದೇ ಒಂದು ಮಾದರಿಯ ಕಾರು ಭಾರತದಲ್ಲಿ ಮಾರಾಟಕ್ಕಿದೆ. ಚಾರ್ಜಿಂಗ್‌ ಕೇಂದ್ರಗಳ ಕೊರತೆಯ ಕಾರಣ, ಇ–ಕಾರುಗಳ ಮಾರಾಟ ಬೆರಳೆಣಿಕೆಯಷ್ಟು ಮಾತ್ರ. ಆದರೆ, ಮುಂದುವರಿದ ರಾಷ್ಟ್ರಗಳಲ್ಲಿ ಇ–ಕಾರುಗಳು ಸಾಮಾನ್ಯ ಎಂಬಂತಾಗಿದೆ.

ಈಗ ಇ–ಟ್ರಕ್‌ಗಳ ಶಕೆ ಆರಂಭವಾಗಿದೆ. ವಿದ್ಯುತ್ ಚಾಲಿತ ಕಾರುಗಳಲ್ಲಿ ಹೊಸ ಭಾಷ್ಯವನ್ನೇ ಬರೆದ ಅಮೆರಿಕದ ಟೆಸ್ಲಾ, ಈಗ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬೆಸೆದು ತನ್ನ ಮೊದಲ ಇ–ಟ್ರಕ್‌ ಅನ್ನು ಮೊದಲ ಬಾರಿ ಪ್ರದರ್ಶಿಸಿದೆ. ವಾಹನ ಜಗತ್ತಿನಲ್ಲೇಹಲವು ಮೊದಲುಗಳನ್ನು ಹುಟ್ಟಿಹಾಕಿರುವ ಈ, ಇ–ಟ್ರಕ್‌ಗೆ ‘ಸೈಬರ್‌ಟ್ರಕ್‌’ ಎಂದು ಹೆಸರಿಡಲಾಗಿದೆ. ಭಾರತದ ಮಾರುಕಟ್ಟೆಗೆ ಈ ಟ್ರಕ್‌ ಈಗಲೇ ಬರುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು. ಆದರೆ, ತಂತ್ರಜ್ಞಾನದ ದೃಷ್ಟಿಯಿಂದ ಈ ಟ್ರಕ್‌ ಭಾರತದಲ್ಲೂ ಪ್ರಾಮುಖ್ಯ ಪಡೆದಿದೆ. ಸೈಬರ್‌ಟ್ರಕ್‌ನ ತಂತ್ರಜ್ಞಾನಗಳು ಮತ್ತು ಹೆಗ್ಗಳಿಕೆಗಳ ಕಿರು ಪರಿಚಯ ಇಲ್ಲಿದೆ.

ಎಕ್ಸೊಸ್ಕೆಲಿಟನ್

ADVERTISEMENT

ಸೈಬರ್‌ಟ್ರಕ್‌ನ ಹೊರದೇಹವನ್ನು ಎಕ್ಸೊಸ್ಕೆಲಿಟನ್‌ನಂತೆ ವಿನ್ಯಾಸ ಮಾಡಲಾಗಿದೆ. ಅಂದರೆ, ಟ್ರಕ್‌ನ ದೇಹಕ್ಕೆ ಹೊರಕವಚವೇ ಇಲ್ಲದಂತೆ ಕಾಣುತ್ತದೆ. ಅತ್ಯಂತ ಗಡಸು ತುಕ್ಕುನಿರೋಧಕ ಸ್ಟೀಲ್‌ನಿಂದ ಈ ದೇಹವನ್ನು ನಿರ್ಮಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಈ ದೇಹಕ್ಕೆ ಗೀರು, ತಗ್ಗು ಆಗುವುದಿಲ್ಲ. ಯಾವುದೇ ವಸ್ತುಗಳು ಈ ದೇಹವನ್ನು ಛೇಧಿಸಿ ಒಳಹೋಗುವುದಿಲ್ಲ. ಒಳಗಿದ್ದವರಿಗೆ ಅಪಾಯ ಆಗುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದುಎಂದು ಕಂಪನಿ ಹೇಳಿದೆ.

ಪ್ರಚಂಡ ಶಕ್ತಿಯ ಮೋಟರ್

ಇದು ವಿದ್ಯುತ್‌ ಚಾಲಿತ ಟ್ರಕ್‌. ಇದರಲ್ಲಿ ಮೂರು ಅವತರಣಿಕೆಗಳಿವೆ. ಮೂರೂ ಅವತರಣಿಕೆಗಳು ಜಗತ್ತಿನಲ್ಲೇ ಅತ್ಯಂತ ಶಕ್ತಿಯುತ ಮತ್ತು ಅತಿವೇಗದ ಪಿಕ್‌ಅಪ್ ಟ್ರಕ್‌ ಎನಿಸಿವೆ.


ಮೂರು ಮೋಟರ್‌ನ ಟ್ರಕ್‌

*2.9 ಸೆಕೆಂಡ್; 0–100 ಕಿ.ಮೀ. ವೇಗ ಮುಟ್ಟಲು ತೆಗೆದುಕೊಳ್ಳುವ ಸಮಯ

*800 ಕಿ.ಮೀ.: ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸುವ ದೂರ

*3ಟನ್‌ನಷ್ಟು ಭಾರ ಎಳೆಯುವ ಸಾಮರ್ಥ್ಯ

ಎರಡು ಮೋಟರ್‌ನ ಟ್ರಕ್

*4.5 ಸೆಕೆಂಡ್: 0–100 ಕಿ.ಮೀ. ವೇಗ ಮುಟ್ಟಲು ತೆಗೆದುಕೊಳ್ಳುವ ಸಮಯ

*500ಕಿ.ಮೀ.: ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸುವ ದೂರ

*5ಟನ್‌ನಷ್ಟು ಭಾರ ಎಳೆಯುವ ಸಾಮರ್ಥ್ಯ

ಒಂದು ಮೋಟರ್‌ನ ಟ್ರಕ್

6.5 ಸೆಕೆಂಡ್: 0–100 ಕಿ.ಮೀ. ವೇಗ ಮುಟ್ಟಲು ತೆಗೆದುಕೊಳ್ಳುವ ಸಮಯ

400ಕಿ.ಮೀ: ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸುವ ದೂರ

7ಟನ್‌ನಷ್ಟು ಭಾರ ಎಳೆಯುವ ಸಾಮರ್ಥ್ಯ

ಅಡಾಪ್ಟೀವ್ ಏರ್‌ ಸಸ್ಪೆನ್ಶನ್

ಈ ಟ್ರಕ್‌ನಲ್ಲಿ ಅಡಾಪ್ಟೀವ್ ಏರ್ ಸಸ್ಪೆನ್ಶನ್ ವ್ಯವಸ್ಥೆ ಬಳಸಲಾಗಿದೆ. ಹೀಗಾಗಿ ಟ್ರಕ್‌ನ ಎತ್ತರವನ್ನು ನಾಲ್ಕು ಇಂಚಿನಷ್ಟು ಬದಲಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ ರಸ್ತೆ ಹೇಗಿದೆ ಎಂಬುದರ ಆಧಾರದಲ್ಲಿ ಸಸ್ಪೆನ್ಶನ್‌ನ ವರ್ತನೆ ಸ್ವಯಂಚಾಲಿತವಾಗಿ ಬದಲಾಗುತ್ತದೆ. ಇದು ಚಾಲನೆ ಮತ್ತು ಪ್ರಯಾಣವನ್ನು ಆರಾಮದಾಯಕಾಗಿಸುತ್ತದೆ. ಜತೆಗೆ ಟ್ರಕ್‌ನ ರಸ್ತೆ ಮೇಲಿನ ಹಿಡಿತವನ್ನೂ ಹೆಚ್ಚಿಸುತ್ತದೆ

lಜಗತ್ತಿನ ಮೊದಲ ವಿದ್ಯುತ್‌ ಚಾಲಿತ ಪಿಕ್‌ಅಪ್ ಟ್ರಕ್

lಜಗತ್ತಿನ ಅತ್ಯಂತ ವೇಗದಪಿಕ್‌ ಅಪ್ ಟ್ರಕ್

lಎಕ್ಸೊಸ್ಕೆಲಿಟನ್ ಹೊಂದಿರುವ ಜಗತ್ತಿನ ಮೊದಲಪಿಕ್‌ಅಪ್ ಟ್ರಕ್

lಅತಿಹೆಚ್ಚು ಭಾರ ಎಳೆಯುವ ಸಾಮರ್ಥ್ಯವಿರುವಪಿಕ್‌ಅಪ್ ಟ್ರಕ್

lಆಲ್‌ವ್ಹೀಲ್‌ ಡ್ರೈವ್‌ (ಎಡಬ್ಲ್ಯುಡಿ) ತಂತ್ರಜ್ಞಾನವಿರುವ ಜಗತ್ತಿನ ಮೊದಲಪಿಕ್‌ಅಪ್ ಟ್ರಕ್

lಒಮ್ಮೆ ಚಾರ್ಜ್‌ ಮಾಡಿದರೆ ಅತಿಹೆಚ್ಚು ದೂರ ಕ್ರಮಿಸುವ ಜಗತ್ತಿನ ಮೊದಲ ವಿದ್ಯುತ್‌ ಚಾಲಿತ ವಾಹನ

lಜಗತ್ತಿನ ಅತ್ಯಂತ ವೇಗದವಿದ್ಯುತ್‌ ಚಾಲಿತ ವಾಹನ

lಜಗತ್ತಿನ ಅತ್ಯಂತ ಕಡಿಮೆ ತೂಕದ ಪಿಕ್‌ಅಪ್ ಟ್ರಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.