ADVERTISEMENT

ಫಾಕ್ಸ್‌ಕಾನ್‌ನಿಂದ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ

ರಾಯಿಟರ್ಸ್
Published 20 ಅಕ್ಟೋಬರ್ 2021, 10:53 IST
Last Updated 20 ಅಕ್ಟೋಬರ್ 2021, 10:53 IST
   

ತೈಪೆ: ತೈವಾನ್‌ನ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಫಾಕ್ಸ್‌ಕಾನ್‌, ಭಾರತದಲ್ಲಿ ವಿದ್ಯುತ್ ಚಾಲಿತ (ಇ.ವಿ.) ವಾಹನಗಳನ್ನು ತಯಾರಿಸುವ ಚಿಂತನೆ ನಡೆಸಿದೆ. ಭಾರತ ಮಾತ್ರವೇ ಅಲ್ಲದೆ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿಯೂ ಇ.ವಿ. ತಯಾರಿಕೆ ಆರಂಭಿಸಲು ಕಂಪನಿ ಮುಂದಾಗಿದೆ.

ಕಂಪನಿಯ ಅಧ್ಯಕ್ಷ ಲಿಯು ಯಂಗ್–ವೆ ಅವರು ಬುಧವಾರ ಈ ವಿಷಯ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಇ.ವಿ. ತಯಾರಿಕೆಯಲ್ಲಿ ಪ್ರಮುಖ ಪಾಲು ಹೊಂದುವ ಉದ್ದೇಶ ಫಾಕ್ಸ್‌ಕಾನ್‌ಗೆ ಇದೆ. ಈ ದಿಸೆಯಲ್ಲಿ ಕಂಪನಿಯು ಅಮೆರಿಕದ ನವೋದ್ಯಮ ಫಿಸ್ಕರ್ ಮತ್ತು ಥೈಲ್ಯಾಂಡ್‌ನ ಪಿಟಿಟಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಕೆಲವು ವಿಷಯಗಳನ್ನು ಬಹಿರಂಪಡಿಸಲು ನಿರ್ಬಂಧಗಳು ಇರುವ ಕಾರಣ ಭಾರತ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಗದು ಎಂದು ಲಿಯು ಅವರು ಹೇಳಿದ್ದಾರೆ. ಮೊದಲು ಯುರೋಪ್‌ನಲ್ಲಿ ಕೆಲಸ ಶುರುವಾಗಲಿದೆ, ನಂತರ ಭಾರತದಲ್ಲಿ, ಅದಾದ ನಂತರ ಲ್ಯಾಟಿನ್ ಅಮೆರಿಕದಲ್ಲಿ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇ.ವಿ. ವಾಹನಗಳನ್ನು ಸ್ಥಳೀಯವಾಗಿ ತಯಾರಿಸಿ, ಸ್ಥಳೀಯ ಗ್ರಾಹಕರಿಗೆ ಮಾರಾಟ ಮಾಡುವ ಮಾದರಿಯನ್ನು ಕಂಪನಿ ಅನುಸರಿಸಲಿದೆ. ಫಾಕ್ಸ್‌ಕಾನ್ ಕಂಪನಿಯು ಅಮೆರಿಕದ ಆ್ಯಪಲ್‌ ಕಂಪನಿಗಾಗಿ ಐಫೋನ್‌ಗಳನ್ನು ಸಿದ್ಧಪಡಿಸಿ ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.