ADVERTISEMENT

ಹೋಂಡಾ ಸಿಬಿ300ಆರ್‌ ಬುಕಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 19:45 IST
Last Updated 16 ಜನವರಿ 2019, 19:45 IST
   

ಭಾರತದ ಮೋಟರ್‌ಸೈಕಲ್ ಪ್ರಿಯರಿಗೆ ಹೋಂಡಾ ಕಂಪನಿಯು ಸಂಕ್ರಾಂತಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಜಪಾನ್‌ನ ನಿಯೊ ಸ್ಪೋರ್ಟ್ಸ್‌ ಕೆಫೆಯಿಂದ ಪ್ರೇರಣೆಗೊಂಡು ಸಿದ್ಧವಾಗಿರುವ ಹೋಂಡಾ ಸಿಬಿ300ಆರ್‌ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ.

‘ಭಾರತದಲ್ಲಿಯೇ ಬಿಡಿ ಭಾಗಗಳನ್ನು ಜೋಡಿಸಿ ‘ಸಿಬಿ300ಆರ್‌ ಬೈಕ್ ಸಿದ್ಧಪಡಿಸಲಾಗುತ್ತದೆ. ಇದರ ಎಕ್ಸ್ ಷೋರೂಂ ಬೆಲೆ ₹ 2.5 ಲಕ್ಷಕ್ಕಿಂತಲೂ ಕಡಿಮೆ ಇರಲಿದೆ. ಉತ್ಕೃಷ್ಟ ತಂತ್ರಜ್ಞಾನ ಮತ್ತು ರೈಡಿಂಗ್‌ನ ಥ್ರಿಲ್‌ ಅನುಭವಿಸಲು ಹೋಂಡಾ ಗ್ರಾಹಕರಿಗಾಗಿ ಈ ಬೆಲೆ ನಿಗದಿಪಡಿಸಲಾಗಿದೆ. ಮಂಗಳವಾರದಿಂದಲೇ ಬುಕಿಂಗ್‌ ಆರಂಭವಾಗಿದೆ. ದೇಶದಲ್ಲಿರುವ ಆಯ್ದ ಹೋಂಡಾ ದ್ವಿಚಕ್ರವಾಹನ ಡೀಲರ್‌ಶಿಪ್‌ ಕೇಂದ್ರಗಳಲ್ಲಿ ಕೇವಲ ₹ 5000ಕ್ಕೆ ಬುಕಿಂಗ್‌ ಮಾಡಬಹುದು’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಯದುವೀಂದರ್ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

ಅತ್ಯಂತ ಸ್ಟೈಲಿಷ್‌ ಆದ ಸಿಬಿ300ಆರ್ ಶೀಘ್ರವೇ ಭಾರತದ ರಸ್ತೆಗಳಲ್ಲಿ ರಾರಾಜಿಸಲಿವೆ. ಎಂಜಿನ್ ಸಾಮರ್ಥ್ಯದಿಂದಲೂ ಈ ವಿಭಾಗದಲ್ಲಿ ಅತಿ ದೊಡ್ಡದಾಗಿದೆ. 286 ಸಿಸಿ ಎಂಜಿನ್‌ ಡಿಒಎಚ್‌ಸಿ 4 ವಾಲ್ವ್‌ ಲಿಕ್ವಿಡ್‌ ಕೂಲರ್‌ ಸಿಂಗಲ್‌ ಸಿಲಿಂಡರ್‌ ಹೊಂದಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಮೇಟ್‌ ಆಕ್ಸಿಸ್‌ ಗ್ರೇ ಮೆಟಾಲಿಕ್‌ ಮತ್ತು ಕ್ಯಾಂಡಿ ಕ್ರೊಮೋಸ್ಪೀರ್‌ ರೆಡ್‌ ಬಣ್ಣಗಳಲ್ಲಿ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗೆwww.Honda2WheelersIndia.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.