ADVERTISEMENT

ಮೆಟಾವರ್ಸ್‌ನಲ್ಲಿ ಬಿಡುಗಡೆ ಆಗಲಿದೆ ಹುಂಡೈ ವೆನ್ಯು ಎನ್‌ ಲೈನ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 14:01 IST
Last Updated 26 ಆಗಸ್ಟ್ 2022, 14:01 IST

ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಕಂಪನಿಯು ತನ್ನ ಹೊಸ ಎಸ್‌ಯುವಿ ಹುಂಡೈ ವೆನ್ಯು ಎಲ್‌–ಲೈನ್‌ ಅನ್ನು ಮೆಟಾವರ್ಸ್‌ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಮೊಬೈಲ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ಗೆ ಪ್ಲೇಸ್ಟೋರ್‌ ಮೂಲಕ ರೊಬ್ಲಾಕ್ಸ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ವೆನ್ಯು ಎನ್‌ ಲೈನ್‌ ಬಿಡುಗಡೆಯನ್ನು ತಡೆರಹಿತವಾಗಿ ವೀಕ್ಷಿಸಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಚುವಲ್‌ ಮತ್ತು ಭೌತಿಕ ಜಗತ್ತನ್ನು ಒಗ್ಗೂಡಿಸುವ ಮೂಲಕ ತಾಂತ್ರಿಕವಾಗಿ ಸಬಲಗೊಂಡಿರುವ ಇಂದಿನ ಯುವಪೀಳಿಗೆಯೊಂದಿಗೆ ಬಲಿಷ್ಠ ಮತ್ತು ದೀರ್ಘಾವಧಿಯ ಬಾಂಧವ್ಯ ಹೊಂದುವ ವಿಶ್ವಾಸ ಇದೆ ಎಂದು ಕಂಪನಿಯ ಮಾರಾಟ ವಿಭಾಗದ ನಿರ್ದೇಶಕ ತರುಣ್‌ ಗರ್ಗ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.