ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ‘ಟಿಯಾಗೋ’ಹ್ಯಾಚ್ಬ್ಯಾಕ್ನ ‘ಎಕ್ಸ್ಝಡ್+’ ಅವತರಣಿಕೆಯನ್ನು ಈಚೆಗೆ ಬಿಡುಗಡೆ ಮಾಡಿದೆ.
ಹೊಸ ತಲೆಮಾರಿನ ಯುವಕರನ್ನು ಆಕರ್ಷಿಸುವ ಅತ್ಯಾಧುನಿಕ ಸವಲತ್ತುಗಳನ್ನು ಎಕ್ಸ್ಝಡ್+ ಅವತರಣಿಕೆ ಹೊಂದಿದೆ ಎಂದು ಕಂಪನಿ ಹೇಳಿದೆ.
ಹೊಸ ಸವಲತ್ತುಗಳನ್ನು ಹೊಂದಿರುವ ಈ ಅವತರಣಿಕೆಯು ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳಲ್ಲಿ ಲಭ್ಯವಿದೆ.
ಈ ಅವತರಣಿಕೆಯ ಹೊರಾಂಗಣವು ‘ಸಿಂಗಲ್ ಟೋನ್’ ಮತ್ತು ‘ಡ್ಯುಯೆಲ್ ಟೋನ್’ಗಳಲ್ಲಿ ಲಭ್ಯವಿದೆ. ಈ ಅವತರಣಿಕೆಗಳಿಗೆಂದೇ ಎರಡು ಹೊಸ ಬಣ್ಣಗಳನ್ನು ಸೇರಿಸಲಾಗಿದೆ ಎಂದು ಕಂಪನಿ ಹೇಳಿದೆ.
ರೂಫ್ ಮತ್ತು ಸ್ಪಾಯ್ಲರ್ಗಳಿಗೆ ಗ್ಲಾಸಿ ಬ್ಲ್ಯಾಕ್ ಬಣ್ಣ ಪಡೆಯುವ ಅವಕಾಶವಿದೆ. ಪೆಟ್ರೋಲ್ ಮಾದರಿಯ ಟಿಯಾಗೋನಲ್ಲಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಲಭ್ಯವಿದೆ. ಎರಡು ಬಣ್ಣದಲ್ಲಿರುವ ಈ ಅಲಾಯ್ ವೀಲ್ ಕಾರಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಇನ್ನು ಹಿಂಬದಿಯಲ್ಲಿ ಕ್ರೋಮ್ ಗಾರ್ನಿಶ್, ಬಾಡಿ ಸೈಡ್ ಮೌಲ್ಡಿಂಗ್ ನೀಡಲಾಗಿದೆ.
ಇನ್ಫೊಟೈನ್ಮೆಂಟ್ ಸಿಸ್ಟಂ ಅನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈ ಅವತರಣಿಕೆಗಳಲ್ಲಿ 7 ಇಂಚಿನ ಅಳತೆಯ ಟಚ್ಸ್ಕ್ರೀನ್ ನೀಡಲಾಗಿದೆ. ಅಲ್ಲದೆ ಆಟೊ ಕ್ಲೈಮೆಟ್ ಕಂಟ್ರೋಲ್, ಸ್ಮೋಕ್ಡ್ ಪ್ರೊಜೆಕ್ಟರ್ ಹೆಡ್ಲ್ಯಾಂಡ್, ಎಲೆಕ್ಟ್ರಿಕಲಿ ಫೋಲ್ಡೆಬಲ್ ಮಿರರ್ಗಳು ಈ ಅವತರಣಿಕೆಯ ಹೆಗ್ಗಳಿಕೆಗಳು.
ದೆಹಲಿಯಲ್ಲಿ ಈ ಅವತರಣಿಕೆಗಳ ಎಕ್ಸ್ ಷೋರೂಂ ಬೆಲೆ ₹ 5.57 ಲಕ್ಷ (ಪೆಟ್ರೋಲ್) ಮತ್ತು ₹ 6.31 ಲಕ್ಷದಿಂದ (ಡೀಸೆಲ್) ಆರಂಭವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.