ADVERTISEMENT

ಟಾಟಾ ಮೋಟರ್ಸ್‌ನ ನೆಕ್ಸಾನ್‌ ಕ್ರೇಜ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:04 IST
Last Updated 18 ಸೆಪ್ಟೆಂಬರ್ 2019, 14:04 IST
   

ಟಾಟಾ ಮೋಟರ್ಸ್‌ ಕಂಪನಿಯು ಕಾಂಪ್ಯಾಕ್ಟ್‌ ಎಸ್‌ಯುವಿ ನೆಕ್ಸಾನ್‌ನ ಸೀಮಿತ ಆವೃತ್ತಿ ‘ಕ್ರೇಜ್‌’ ಬಿಡುಗಡೆ ಮಾಡಿದೆ. 1 ಲಕ್ಷ ನೆಕ್ಸಾನ್ ಎಸ್‌ಯುವಿ ಮಾರಾಟವಾದ ಸಂಭ್ರಮದಲ್ಲಿ ಇದನ್ನು ಬಿಡುಗಡೆ ಮಾಡಿದೆ.

ಮ್ಯಾನ್ಯುಯಲ್‌ ಮತ್ತು ಆಟೊಮೆಟಿಕ್ ಆಯ್ಕೆಗಳಲ್ಲಿ ‘ಕ್ರೇಜ್‌’ ಲಭ್ಯ ಇರಲಿದೆ. ಬೆಲೆ ₹ 7.57 ಲಕ್ಷ ಮತ್ತು₹ 8.17 ಲಕ್ಷ ಇದೆ.1.5 ಲೀಟರ್‌ ಡೀಸೆಲ್‌ ಮತ್ತು 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ನಲ್ಲಿ ಲಭ್ಯವಿದೆ. 6 ಸ್ಪೀಡ್ ಮ್ಯಾನ್ಯುಯಲ್‌ ಮತ್ತು ಆಟೊಮೆಟೆಡ್‌ ಮ್ಯಾನ್ಯುಯಲ್‌ ಎಎಂಟಿ ಟ್ರಾನ್ಸ್‌ಮಿಷನ್‌ ಹೊಂದಿದೆ.

‘ನೆಕ್ಸಾನ್‌ನ ಎರಡನೇ ಸೀಮಿತ ಆವೃತ್ತಿ ಇದಾಗಿದೆ. ಒಳಾಂಗಣ ಮತ್ತು ಹೊರಾಂಗಣ ಹೆಚ್ಚು ಆಕರ್ಷಕವಾಗಿವೆ’ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಮುಖಸ್ಥ ವಿವೇಕ್‌ ಶ್ರೀವಾಸ್ತವ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.