ADVERTISEMENT

ಫಾರಿನ್ ಡಿಎಲ್‌ ಪಡೆಯುವ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:30 IST
Last Updated 12 ಡಿಸೆಂಬರ್ 2018, 19:30 IST

ವಿದೇಶ ಪ್ರವಾಸ ಕೈಗೊಳ್ಳುವಾಗ ಅಲ್ಲಿನ ಸ್ಥಳೀಯ ಪ್ರವಾಸಿತಾಣಗಳ ಭೇಟಿಗಾಗಿ ಪ್ರವಾಸಿಗರು ಟ್ಯಾಕ್ಸಿ ಅಥವಾ ಸ್ಥಳೀಯ ಟ್ರಾವಲ್ಸ್‌ಗಳನ್ನು ಬಳಸುತ್ತಾರೆ. ಆದರೆ, ವಿದೇಶಗಳಲ್ಲಿ ಟ್ಯಾಕ್ಸಿ ಬಲು ದುಬಾರಿ. ಮಲೇಷ್ಯಾದಂತಹ ದೇಶದಲ್ಲಂತೂ ಏಳು ಆಸನದ ಟ್ಯಾಕ್ಸಿಗೆ ದಿನಕ್ಕೆ ₹10 ಸಾವಿರದವರೆಗೂ ದರವಿರುತ್ತದೆ. ಜತೆಗೆ ಟ್ಯಾಕ್ಸಿಗಾಗಿ ಕಾಯುವುದು, ಸಮಯ ವ್ಯರ್ಥ. ಇಂಥ ಸಂದರ್ಭದಲ್ಲಿ ಸ್ವಯಂ ಚಾಲಿತ ಟ್ಯಾಕ್ಸಿ ಬಳಸಬಹುದು. ಈಗ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ನಮ್ಮಲ್ಲಿ ಝೂಮ್ ಕಾರ್‌ಗಳಿದ್ದಂತೆ ಸೆಲ್ಫ್ ಡ್ರೈವ್ ವೆಹಿಕಲ್ಸ್‌ಗಳು ಇವೆ. ಇವು ಟ್ಯಾಕ್ಸಿಯಷ್ಟು ದುಬಾರಿಯಲ್ಲ, ಬಸ್, ರೈಲಿನಷ್ಟು ಅಗ್ಗವಲ್ಲ.

ಆದರೆ, ವಿದೇಶದಲ್ಲಿ ವಾಹನಗಳನ್ನು ಚಾಲನೆ ಮಾಡಬೇಕಾದರೆ, ಅಂತರರಾಷ್ಟ್ರೀಯ ಚಾಲನ ಪರವಾನಗಿ ಬೇಕು. ‘ಹೌದಾ? ಹಾಗಾದರೆ, ಆ ಪರವಾನಗಿ ಎಲ್ಲಿ ಸಿಗುತ್ತದೆ? ಯಾರು ಕೊಡುತ್ತಾರೆ’ ಎಂಬುದು ನಿಮ್ಮ ಮುಂದಿನ ಪ್ರಶ್ನೆ ಅಲ್ವಾ. ಯೋಚನೆ ಮಾಡಬೇಡಿ. ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ, ಈ ಪರವಾನಗಿಯನ್ನು ಆನ್‌ಲೈನ್ ಮೂಲಕ ಸ್ಥಳೀಯ ಆರ್‌ಟಿಒದಿಂದ ಪಡೆಯಬಹುದು. ದಾಖಲೆಗಳು ಸರಿಯಿದ್ದರೆ, ಒಂದು ವಾರದೊಳಗೆ ಈ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಲಭ್ಯ. ಅದನ್ನು ಪಡೆಯಲು ಇಲ್ಲಿದೆ ಟಿಪ್ಸ್...

ನಿಮ್ಮ ಬಳಿ ಇಲ್ಲಿನ (ಭಾರತೀಯ) ಚಾಲನಾ ಪರವಾನಗಿ ಇರಬೇಕು.

ADVERTISEMENT

ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು, ತಪ್ಪಿಲ್ಲದೆ ಭರ್ತಿ ಮಾಡಿ.

ಅದೇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನಮೂನೆಯ ಪ್ರಕಾರ ವೈದ್ಯಕೀಯ ಪ್ರಮಾಣಪತ್ರ ಮಾಡಿಸಿಕೊಳ್ಳಿ. ವಿಮಾನ ಟಿಕೆಟ್ ಮತ್ತು ಶುಲ್ಕ ಸಿದ್ಧಪಡಿಸಿಕೊಳ್ಳಿ.

ಅತಿ ಮುಖ್ಯವಾಗಿ ನಿಮಗೆ ಯಾವ ಆರ್‌ಟಿಒದಿಂದ ಚಾಲನಾ ಪರವಾನಗಿ ನೀಡಲಾಗಿದೆಯೋ, ಅದೇ ಆರ್‌ಟಿಒಗೆ ಹೋಗಿ ಅರ್ಜಿ ಸಲ್ಲಿಸಿ.

ಎಲ್ಲವೂ ಸರಿಯಿದ್ದರೆ ವಾರದೊಳಗೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ದೊರೆಯುತ್ತದೆ

(ಮಾಹಿತಿ ಸಂಗ್ರಹ: ಲೇಖಕ ರವಿಶಂಕರ್ ಭಟ್ ಅವರ ‘ಫಾರಿನ್ ಟೂರ್’ ಕೃತಿಯಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.