ADVERTISEMENT

ರೋಡಿಗಿಳಿದ ಟಾಟಾ ಟಿಗಾರ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:30 IST
Last Updated 17 ಅಕ್ಟೋಬರ್ 2018, 19:30 IST
ಟಿಗೊರ್
ಟಿಗೊರ್   

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟಿಗಾರ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ ಮತ್ತು ಗುಣಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿರುವ ಈ ಕಾರು ಕಾಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲೇ ವಿಶೇಷ ಎನಿಸಿದೆ.

ಹಿಂದಿನಂತೆಯೇ ಟಾಟಾ ಸಂಸ್ಥೆಯೂ ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಈ ಕಾರಿನಲ್ಲಿ ಪರಿಚಯಿಸಿದ್ದು, ಕಾರಿನ ಹೊರ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ತಂದಿರುವುದು ಗಮನಾರ್ಹ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐದು ವೆರಿಯೆಂಟ್‌ಗಳಲ್ಲಿ ಈ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ವಿನೂತನ ವಿನ್ಯಾಸದಿಂದಲೇ ಗ್ರಾಹಕರ ಸೆಳೆಯುತ್ತದೆ.

ಕಾರಿನ ವೈಶಿಷ್ಟ್ಯತೆಗಳು

ADVERTISEMENT

ಹೊಸ ಟಿಗಾರ್ ಕಾರಿನಲ್ಲಿ ವಿನ್ಯಾಸ ಸಾಕಷ್ಟು ಸುಧಾರಣೆಗೊಂಡಿದೆ. ಕಾರಿನ ಮುಂಭಾಗದಲ್ಲಿ ಡೈಮಂಡ್ ಪ್ಯಾಟರ್ನ್ ಫ್ರಂಟ್ ಗ್ರಿಲ್ ಹಾಗೂ ಡ್ಯುಯಲ್ ಚೇಂಬರ್ ಪ್ರೊಜೆಕ್ಟರ್ , ಕ್ರೋಮ್ ಲೈನ್ಡ್ ಡೋರ್ ಹ್ಯಾಂಡಲ್ ಇದೆ.

ಇದರೊಂದಿಗೆ 15 ಇಂಚಿನ ಡ್ಯುಯಲ್ ಟೋನ್ ಅಲಾಯ್ ಚಕ್ರಗಳು, ಕ್ರಿಸ್ಟಲ್ ಡಿಸೈನ್ ಎಲ್‌ಇಡಿ ಟೈಲ್ ಲೈಟ್ ಕ್ಲಸ್ಟರ್, ಶಾರ್ಕ್ ಫಿನ್ ಆ್ಯಂಟೆನ್, 7 ಇಂಚಿನ ಇನ್ಫೊಟೈನ್‌ಮೆಂಟ್ ಟಚ್‌ಸ್ಕ್ರೀನ್‌, ಟೆಟಾನಿಯಂ ಕಲರ್ ಫ್ಲಕ್ಸ್ ಲೆದರ್ ಸೀಟುಗಳು ಮತ್ತು ಕಾರಿನ ಸುಲಭ ನಿರ್ವಹಣೆಗೆ ಹರ್ಮನ್ ಅಂಡ್ರಾಯ್ಡ್ ಆಟೊ ತಂತ್ರಾಂಶದ ಆಯ್ಕೆಯೂ ಇರಲಿದೆ.

ಸುರಕ್ಷತೆಗೆ ಹೆಚ್ಚಿನ ಒತ್ತು

ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ ಕಾರ್ನರ್ ಸ್ಟೆಬಿಲಿಟಿ, ರಿವರ್ಸ್ ಪಾರ್ಕಿಂಗ್ ಸಿನ್ಸಾರ್ ಜೊತೆ ಕ್ಯಾಮೆರಾ ಮತ್ತು ಗುಣಮಟ್ಟದ ಸ್ಟಿಲ್‌ನಿಂದ ಕಾರಿನ ಕವಚ (ಬಾಡಿ) ತಯಾರು ಮಾಡಲಾಗಿದೆ.

ಖರೀದಿಗೆ ಲಭ್ಯವಿರುವ ಬಣ್ಣಗಳು

ಟಿಗೊರ್ ಕಾರುಗಳು ವಿಶೇಷ ಬಣ್ಣಗಳ ಶೇಡ್‌ನಲ್ಲಿ ಲಭ್ಯವಿದೆ. ಬ್ಲೂ, ರೋಮನ್ ಸಿಲ್ವರ್, ಬೆರ್ರಿರೆಡ್, ಪರ್ಲ್ಸ್ಕೆಂಡ್ ವೈಟ್, ಟೈಟಾನಿಯಂ ಗ್ರೇ ಮತ್ತು ಬ್ರೌನ್ ಬಣ್ಣಗಳಲ್ಲಿ ಲಭ್ಯವಿವೆ. ಆರಂಭಿಕ ಟಿಗೋರ್ ಕಾರಿನ ಬೆಲೆ ₹ 5.20 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ₹7.38 ಲಕ್ಷ ನಿಗದಿಗೊಳಿಸಿದೆ. (ದೆಹಲಿ ಎಕ್ಸ್‌ಶೋರೂಂ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.