
ರಾಯಲ್ ಎನ್‌ಫೀಲ್ಡ್ ಬುಲೆಟ್ 650
(ಚಿತ್ರ ಕೃಪೆ: ರಾಯಲ್ ಎನ್‌ಫೀಲ್ಡ್)
ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೆ ಉತ್ತಮ ಬೇಡಿಕೆ ಇದೆ. ಮಧ್ಯಮ ವರ್ಗದ ಜನರು ದೈನಂದಿನ ಜೀವನದಲ್ಲಿ ದ್ವಿಚಕ್ರ ವಾಹನಗಳನ್ನು ಹೆಚ್ಚು ಅವಲಂಬಿಸಿರುತ್ತಾರೆ. ಮತ್ತೊಂದೆಡೆ ಯುವ ಜನರು ಚಿತ್ತಾರ್ಷಕ ಬೈಕ್‌ಗಳತ್ತ ಆಕರ್ಷಿತರಾಗಿದ್ದಾರೆ.
ಕಳೆದ ವರ್ಷದಂತೆಯೇ 2026ನೇ ಸಾಲಿನಲ್ಲೂ ದೇಶದ ಮಾರುಕಟ್ಟೆಗೆ ನೂತನ ಬೈಕ್‌ಗಳ ಪರಿಚಯವಾಗಲಿದೆ. ಇವುಗಳಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.
ದೇಶದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸುತ್ತಿದೆ. ಬುಲೆಟ್ 350 ಯಶಸ್ಸಿನ ಬಳಿಕ ಅದೇ ಸ್ಟೈಲಿಂಗ್ ಹಾಗೂ ರೆಟ್ರೊ ಮೋಡಿಯನ್ನು 650 ಆವೃತ್ತಿಯಲ್ಲೂ ನಿರೀಕ್ಷೆ ಮಾಡಬಹುದಾಗಿದೆ.
ಇದರಲ್ಲಿರುವ 649ಸಿಸಿ ಏರ್/ಒಯಿಲ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ 47 ಅಶ್ವಶಕ್ತಿ ಹಾಗೂ 52 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಇದರ ಎಕ್ಸ್-ಶೋ ರೂಂ ಬೆಲೆ ₹3.50 ಲಕ್ಷ ಇರುವ ಸಾಧ್ಯತೆ ಇದೆ. ಅತಿ ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಆಗಮಿಸುವ ಸಾಧ್ಯತೆ ಇದೆ.
ಬಜಾಜ್ ಪಲ್ಸರ್ 125
ನವೀಕೃತ ಆವೃತ್ತಿಗಳೊಂದಿಗೆ ತನ್ನ ಶ್ರೇಣಿಯ ಬೈಕ್‌ಗಳನ್ನು ವಿಸ್ತರಿಸಲು ಬಜಾಜ್ ಮುಂದಾಗಿದೆ. ಪ್ರಯಾಣಿಕ ಬೈಕ್ ಶ್ರೇಣಿಯಲ್ಲಿ ಹೊಸ ಸ್ಫೋರ್ಟಿಯರ್ ಪಲ್ಸರ್ 125 ಬೈಕ್ ಮಾರುಕಟ್ಟೆ ಲಗ್ಗೆ ಇಡಲು ಸಜ್ಜಾಗಿದೆ. ಹೆಚ್ಚು ಸ್ಪರ್ಧಾತ್ಮಕ 125ಸಿಸಿ ವಿಭಾಗದಲ್ಲೂ ಪಲ್ಸರ್ ಹೊಸತನಕ್ಕೆ ಸಾಕ್ಷಿಯಾಗಲಿದೆ.
ಕೆಟಿಎಂ ಆರ್‌ಸಿ 160
ಯುವ ಜನರ ಹೃದಯ ಗೆದ್ದಿರುವ ಕೆಟಿಎಂ ಈಗ ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲೂ ಅಧಿಪತ್ಯ ಸ್ಥಾಪಿಸಲು ಹೊರಟಿದೆ. ಕೆಟಿಎಂ 160 ಡ್ಯೂಕ್ ತಳಹದಿಯಲ್ಲಿ ನಿರ್ಮಾಣವಾಗಲಿರುವ ಈ ಬೈಕ್ ಪ್ರಮುಖವಾಗಿಯೂ ಯಮಹಾ ಆರ್15ಗೆ ಸ್ಪರ್ಧೆ ಒಡ್ಡಲಿದೆ. ₹2 ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಬಿಎಂಡಬ್ಲ್ಯು 450 ಜಿಎಸ್
ಹೈ-ಎಂಡ್ ಬೈಕ್ ಪ್ರಿಯರಿಗಾಗಿ ಬಿಎಂಡಬ್ಲ್ಯು ಮೋಟೊರಾಡ್ ಸಂಸ್ಥೆಯು ಅತ್ಯಾಕರ್ಷಕ 450 ಜಿಎಸ್ ಬೈಕ್ ಪರಿಚಯಿಸಲಿದೆ. ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಸಂಸ್ಥೆಯಿಂದ ಭಾರತದಲ್ಲಿ ಲಭ್ಯವಾಗಲಿರುವ ಅಡ್ವೆಂಚರ್ ಬೈಕ್ ಆಗಿರಲಿದೆ. 420ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ 48 ಅಶ್ವಶಕ್ತಿ ಹಾಗೂ 43 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750
ಆಫ್-ರೋಡ್ ಬೈಕ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹಿಮಾಲಯನ್ ಈಗ 750ಸಿಸಿ ವಿಭಾಗದಲ್ಲೂ ತನ್ನ ಶಕ್ತಿ ಪ್ರದರ್ಶನ ನಡೆಸಲಿದೆ. ಇದರಲ್ಲಿ 650ಸಿಸಿ ಮೋಡಿಫೈಡ್ ಎಂಜಿನ್ ಜೋಡಣೆಯಾಗುವ ನಿರೀಕ್ಷೆ ಇದ್ದು, 55 ಅಶ್ವಶಕ್ತಿ ಹಾಗೂ 65 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಅಡ್ವೆಂಚರ್ ಬೈಕ್ ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆಯಾಗಿರಲಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ 650
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.