ಮುಂಬೈ: ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು, ಭಾರತದ ಐಕಾನಿಕ್ ದ್ವಿಚಕ್ರ ವಾಹನಗಳ ಪೈಕಿ ಒಂದಾಗಿರುವ ‘ಯೆಜ್ಡಿ’ಯನ್ನು ಮಾರುಕಟ್ಟೆಗೆ ಮತ್ತೆ ಬಿಡುಗಡೆ ಮಾಡಿದೆ. ಕಂಪನಿಯು ಮೂರು ಹೊಸ ಮಾದರಿಗಳನ್ನು ಗುರುವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಎಕ್ಸ್ ಷೋರೂಂ ಬೆಲೆಯು ₹ 1.98 ಲಕ್ಷದಿಂದ ₹ 2.09 ಲಕ್ಷದವರೆಗೆ ಇದೆ.
ಯೆಜ್ಡಿ ರೋಡ್ಸ್ಟರ್ ಬೆಲೆ ₹ 1.98 ಲಕ್ಷದಿಂದ, ಸ್ಕ್ರ್ಯಾಂಬ್ಲರ್ ಬೆಲೆ ₹ 2.04 ಲಕ್ಷದಿಂದ ಹಾಗೂ ಅಡ್ವೆಂಚರ್ ಬೆಲೆ ₹ 2.09 ಲಕ್ಷದಿಂದ ಆರಂಭ ಆಗುತ್ತದೆ. ಈ ಬೈಕ್ಗಳಿಗೆ ₹ 5 ಸಾವಿರ ಕೊಟ್ಟು ಬುಕಿಂಗ್ ಮಾಡಬಹುದು ಎಂದು ಕಂಪನಿಯು ತಿಳಿಸಿದೆ.
ಈ ಮೂರು ಬೈಕ್ಗಳು ಲಿಕ್ವಿಡ್ ಕೂಲ್ಡ್, ಫ್ಯೂಯೆಲ್ ಇಂಜೆಕ್ಟೆಡ್ 334 ಸಿಸಿ ಎಂಜಿನ್ ಹೊಂದಿವೆ. ಕ್ಲಾಸಿಕ್ ಲೆಜೆಂಡ್ಸ್ನ ಎಲ್ಲಾ ವಿತರಣಾ ಜಾಲಗಳಲ್ಲಿ ಹೊಸ ಮಾದರಿಗಳು ಖರೀದಿಗೆ ಲಭ್ಯ ಇರಲಿವೆ ಎಂದು ಕಂಪನಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.