ADVERTISEMENT

ಬಜಾಜ್-ಕೆಟಿಎಂ ಹೊಸ ಆವಿಷ್ಕಾರ ‘ಡಾಮಿನಾರ್’

ರಾಹುಲ ಬೆಳಗಲಿ
Published 5 ಸೆಪ್ಟೆಂಬರ್ 2019, 8:57 IST
Last Updated 5 ಸೆಪ್ಟೆಂಬರ್ 2019, 8:57 IST
   

ಉತ್ಕೃಷ್ಟ ಗುಣಮಟ್ಟದ ಮತ್ತು ವಿಶಿಷ್ಟ ಡಿಸೈನ್ವುಳ್ಳ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಹಲವು ವರ್ಷಗಳಿಂದ ಪ್ರಮುಖ ಪಾತ್ರ ವಹಿಸುತ್ತಿರುವ ಬಜಾಜ್ ಮತ್ತು ಕೆಟಿಎಂ ಸಂಸ್ಥೆಗಳು ಜೊತೆಗೂಡಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿವೆ. ಅವುಗಳ ಪೈಕಿ ಎಲೆಕ್ಟ್ರಿಟಿಕ್ ವಾಹನಗಳ ಕ್ಷೇತ್ರದಲ್ಲಿ ವಿಭಿನ್ನ ಛಾಪು ಮೂಡಿಸುವುದು ಒಂದು.

ಕೆಲ ತಿಂಗಳ ಹಿಂದೆಯಷ್ಟೇ, ಬಜಾಜ್ ಸಂಸ್ಥೆಯು ‘ಎಲೆಕ್ಟ್ರಿಕ್ ಸ್ಕೂಟರ್‌’ ಪರಿಚಯಿಸುವ ಇರಾದೆ ಹೊಂದಿತ್ತು. ಆದರೆ, ನಂತರದ ದಿನಗಳಲ್ಲಿ ಕೆಟಿಎಂ-ಬಜಾಜ್‌ನ ಸಹಯೋಗದಲ್ಲಿ ಎಲೆಕ್ಟ್ರಿಕ್ ಮೋಟರ್ ಸೈಕಲ್ ಹೊರತರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತು.

‘ಒಟ್ಟಾರೆ ವಿಭಿನ್ನ ಬಗೆಯ ದ್ವಿಚಕ್ರ ವಾಹನ ಪರಿಚಯಿಸುವ ಬಗ್ಗೆ ಖಾತ್ರಿ ನೀಡಬಲ್ಲೆ. ಆದರೆ, ಅದು ಸ್ಕೂಟರ್ ಅಥವಾ ಮೋಟರ್‌ ಸೈಕಲ್‌ ಎಂಬುದನ್ನು ಸದ್ಯಕ್ಕೆ ಖಚಿತ ಪಡಿಸಲು ಆಗುವುದಿಲ್ಲ. ಕೆಟಿಎಂ ಸಂಸ್ಥೆಯ ಸಹಯೋಗದಲ್ಲಿ ‘ಹೈಯೆಂಡ್ ಎಲೆಕ್ಟ್ರಿಕ್ ಮೋಟರ್ಸೈಕಲ್ ಕ್ಷೇತ್ರದಲ್ಲಿ ಉನ್ನತ ಸಾಧನೆಯ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಬಜಾಜ್‌ನಕಾರ್ಯನಿರ್ವಾಹಕರಾಕೇಶ್‌ಶರ್ಮಾತಿಳಿಸಿದರು.

ADVERTISEMENT

ಬಜಾಜ್ ಸಂಸ್ಥೆಯು ‘ಡಾಮಿನಾರ್’ ಎಂಬ ದುಬಾರಿ ಮತ್ತು ಶಕ್ತಿಶಾಲಿ ಮೋಟರ್ ಸೈಕಲ್‌ ಹೊರತಂದಿದ್ದು, ಇದಕ್ಕೆ ಕೆಟಿಎಂ ಸಂಸ್ಥೆ ನೆರವಾಗಿದೆ. ಕೆಟಿಎಂ ಸಂಸ್ಥೆಯ ಸಹಯೋಗದಲ್ಲಿ ‘ಡಾಮಿನಾರ್’ ಮೋಟರ್‌ ಸೈಕಲ್‌ಗೆ ಎಲೆಕ್ಟ್ರಿಕ್ ಸ್ಪರ್ಶ ನೀಡಲು ಬಜಾಜ್ ಉದ್ದೇಶಿಸಿದೆ. ಅದಕ್ಕೆಂದೇ ನೂತನ ವಾಹನದ ಕುರಿತು ಸಂಸ್ಥೆಯು ಎಲ್ಲಿಯೂ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಇದನ್ನು ಸೂಕ್ತ ಸಮಯದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶ ಬಜಾಜ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.