ADVERTISEMENT

ಜಿಎಸ್‌ಟಿ ದರ ಪರಿಷ್ಕರಣೆಯಿಂದ ವಾಹನ ಉದ್ಯಮದಲ್ಲಿ ಲವಲವಿಕೆ: ನಿರೀಕ್ಷೆ ಏನು?

ಪಿಟಿಐ
Published 21 ಡಿಸೆಂಬರ್ 2025, 16:01 IST
Last Updated 21 ಡಿಸೆಂಬರ್ 2025, 16:01 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ನವದೆಹಲಿ: 2026ರಲ್ಲಿ ದೇಶದ ವಾಹನ ಉದ್ಯಮದ ಮಾರಾಟ ಪ್ರಮಾಣವು ಶೇಕಡ 6ರಿಂದ ಶೇ 8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ.

ಜಿಎಸ್‌ಟಿ ದರ ಪರಿಷ್ಕರಣೆ, ಹಣಕಾಸಿನ ಪರಿಸ್ಥಿತಿ ತಿಳಿಗೊಳ್ಳುತ್ತಿರುವುದು, ಆದಾಯ ತೆರಿಗೆ ವಿನಾಯಿತಿ ಪ್ರಮಾಣವನ್ನು ಹೆಚ್ಚು ಮಾಡಿರುವುದು ವಾಹನ ಖರೀದಿಯನ್ನು ಸುಲಭವಾಗಿಸಲಿವೆ, ಗ್ರಾಹಕರಿಂದ ಉತ್ತಮ ಬೇಡಿಕೆ ಬರುವಂತೆ ಮಾಡಲಿವೆ ಎಂದು ಉದ್ಯಮ ವಲಯ ನಿರೀಕ್ಷಿಸಿದೆ.

ADVERTISEMENT

‘ಜಿಎಸ್‌ಟಿ ಪರಿಷ್ಕರಣೆಯ ಪ್ರಯೋಜನವು 2026ರಲ್ಲಿ ಪೂರ್ಣವಾಗಿ ಲಭ್ಯವಾಗಲಿದೆ ಎಂಬುದು ನಮ್ಮ ನಿರೀಕ್ಷೆ. ಇದು ಉದ್ಯಮ ವಲಯದ ವಾರ್ಷಿಕ ಬೆಳವಣಿಗೆಯನ್ನು ಶೇ 8ರವರೆಗೆ ಒಯ್ಯಬಹುದು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ನಾವು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ’ ಎಂದು ಮಾರುತಿ ಸುಜುಕಿ ಕಂಪನಿಯ ಎಂ.ಡಿ. ಮತ್ತು ಸಿಇಒ ಹಿಸಾಷಿ ತಕೆಯುಚಿ ಹೇಳಿದ್ದಾರೆ.

‘ಜಿಎಸ್‌ಟಿ ಪರಿಷ್ಕರಣೆಯ ಮೂಲಕ ಜಾರಿಗೆ ಬಂದ ಭಾರಿ ಸುಧಾರಣೆಯು ಅರ್ಥ ವ್ಯವಸ್ಥೆಗೆ ಹೊಸ ಚೇತನ ನೀಡಿತು’ ಎಂದು ಅವರು ತಿಳಿಸಿದ್ದಾರೆ.

ಆಟೊಮೊಬೈಲ್‌ ಡೀಲರ್‌ ಸಂಘಗಳ ಒಕ್ಕೂಟದ (ಎಫ್ಎಡಿಎ) ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ಅವರು ‘ದ್ವಿಚಕ್ರ ವಾಹನ ಹಾಗೂ ಪ್ರಯಾಣಿಕ ವಾಹನ ವಿಭಾಗದಲ್ಲಿ 2025ರಲ್ಲಿ ಎರಡು ಅಂಕಿಗಳ ಬೆಳವಣಿಗೆಯನ್ನು ದಾಖಲಿಸುವ ವಿಶ್ವಾಸವು ಡೀಲರ್‌ಗಳಿಗೆ ಇದೆ’ ಎಂದು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಆದಾಯವು ಸ್ಥಿರವಾಗಿದೆ. ಈಗ ಮದುವೆ ಸಮಾರಂಭಗಳ ಋತು ನಡೆಯುತ್ತಿದೆ. ಹೀಗಾಗಿ ಈಗ ಕಾಣುತ್ತಿರುವ ಸಕಾರಾತ್ಮಕ ವಾತಾವರಣವು 2026ರಲ್ಲಿಯೂ ಇರಲಿದೆ ಎಂಬುದು ನಮ್ಮ ನಿರೀಕ್ಷೆ’ ಎಂದು ವಿಘ್ನೇಶ್ವರ ಹೇಳಿದ್ದಾರೆ.

ಡೀಲರ್‌ಗಳ ಪೈಕಿ ಶೇ 74ರಷ್ಟು ಮಂದಿ ಮುಂದಿನ ಮೂರು ತಿಂಗಳಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ ಎಂಬ ಆಶಾಭಾವನೆ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತದ ವಾಹನಗಳ ಬಿಡಿಭಾಗ ತಯಾರಕರ ಸಂಘ (ಎಸಿಎಂಎ) ಕೂಡ ಮುಂದಿನ ವರ್ಷದಲ್ಲಿ ಬೆಳವಣಿಗೆಯು ಚೆನ್ನಾಗಿ ಇರಲಿದೆ ಎಂದು ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.