ನವದೆಹಲಿ : ‘ಬೈಕುಗಳ ಬಾಡಿಗೆ’ ಸೇವೆಗೆ ಪರವಾನಗಿ ನೀಡುವ ಯೋಜನೆಯನ್ನು ಸಾರಿಗೆ ಇಲಾಖೆ ರೂಪಿಸುತ್ತಿದ್ದು, ಪ್ರವಾಸಿಗರು ಶೀಘ್ರದಲ್ಲಿಯೇ ಬಾಡಿಗೆ ದ್ವಿಚಕ್ರ ವಾಹನಗಳ ಸವಾರಿಯನ್ನು ಆನಂದಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದ ಕರಡು ಪ್ರತಿಯನ್ನು ಮುಂದಿನ ವಾರ ಸಾರಿಗೆ ಸಚಿವರ ಮುಂದೆ ಮಂಡಿಸುವ ಸಾಧ್ಯತೆಯಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸೇವೆಯ ಅನುಮತಿ ಪಡೆಯಲು ಅರ್ಜಿದಾರರು ಅಗತ್ಯ ಪರವಾನಗಿಯ ಜೊತೆಗೆ ವಿಮಾ ಸೌಲಭ್ಯಗಳನ್ನು ಹೊಂದಿರಬೇಕು. ಅರ್ಜಿದಾರರು ಐದು ಬೈಕ್‌ಗಳನ್ನು ಹೊಂದಿರಬೇಕು. ವಾಹನಗಳ ನಿರ್ವಹಣೆಗೆ ಅಗತ್ಯವಾದ ಅನುಕೂಲ, ಅವುಗಳನ್ನು ಸ್ಯಾನಿಟೈಸ್ ಮಾಡುವ ಸೌಲಭ್ಯವೂ ಅಗತ್ಯ. 24x7 ದೂರವಾಣಿ ಸಂಪರ್ಕಕ್ಕೆ ಸಿಗುವ ಸೌಲಭ್ಯ ಹೊಂದಿರಬೇಕು. ಅರ್ಹರಿಗೆ ಐದು ವರ್ಷಗಳ ಪರವಾನಗಿ ನೀಡಲಾಗುತ್ತದೆ. ಪರವಾನಗಿ ಶುಲ್ಕ ಇನ್ನೂ ನಿರ್ಧಾರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.