ಬೆಂಗಳೂರು: ಟ್ರ್ಯಾಕ್ಟರ್ ತಯಾರಿಕಾ ಐಷರ್ ಟ್ರ್ಯಾಕ್ಟರ್ಸ್ ‘ಐಷರ್ ಪ್ರೈಮಾ ಜಿ3’ ಸರಣಿಯ ಟ್ರ್ಯಾಕ್ಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.
ಟಾಫೆ ಕಂಪನಿಯ ಸಿಎಂಡಿ ಮಲ್ಲಿಕಾ ಶ್ರೀನಿವಾಸನ್ ಅವರು, ‘ಐಷರ್ ಬ್ರ್ಯಾಂಡ್ ಎಂಬುದು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಪ್ರೈಮಾ ಜಿ3 ಟ್ರ್ಯಾಕ್ಟರ್‌ಗಳು ರೈತರಿಗೆ ಹೆಚ್ಚಿನ ಉತ್ಪಾದಕತೆಗೆ ನೆರವಾಗುತ್ತವೆ’ ಎಂದು ಹೇಳಿದ್ದಾರೆ.
ಹೊಸ ಕಾಲಕ್ಕೆ ಸೂಕ್ತವಾಗುವ ವಿನ್ಯಾಸ, ಡಿಜಿ ನೆಕ್ಸ್ಟ್ ಡ್ಯಾಶ್‌ಬೋರ್ಡ್‌ನಂತಹ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಅಲ್ಲದೆ, ಬಹಳ ಅವಧಿಯವರೆಗೆ ಟ್ರ್ಯಾಕ್ಟರ್ ಬಳಸಿ ಕೆಲಸ ಮಾಡಬಹುದು ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.