ADVERTISEMENT

ಇವಿ ಬೆಲೆಯಲ್ಲಿ ಇಳಿಕೆ: ಜಿಎಸ್‌ಟಿ ದರ ಕಡಿತದ ಪ್ರಯೋಜನ ಗ್ರಾಹಕರಿಗೆ ವರ್ಗ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:31 IST
Last Updated 21 ಆಗಸ್ಟ್ 2019, 19:31 IST
ಇ–ಬೈಕ್‌
ಇ–ಬೈಕ್‌   

ವಿದ್ಯುತ್‌ ಚಾಲಿತ (ಇವಿ) ವಾಹನ ತಯಾರಿಕಾ ಕಂಪನಿಗಳು ಜಿಎಸ್‌ಟಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿವೆ.

ಜಿಎಸ್‌ಟಿ ಮಂಡಳಿಯು ಇವಿ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 5ಕ್ಕೆ ಮತ್ತು ಚಾರ್ಜಿಂಗ್‌ ಸ್ಟೇಷನ್‌ಗಳ ಮೇಲಿನ ತೆರಿಗೆಯನ್ನು ಶೇ 18 ರಿಂದ ಶೇ 5ಕ್ಕೆ ತಗ್ಗಿಸಿದೆ. ಇದರಿಂದಾಗಿಸದ್ಯ ಮೂರು ಕಂಪನಿಗಳು ವಾಹನಗಳ ಬೆಲೆಯಲ್ಲಿ ಇಳಿಕೆ ಮಾಡಿವೆ.

ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ತನ್ನ ವಿದ್ಯುತ್‌ ಚಾಲಿತ ಎಸ್‌ಯುವಿಕೋನಾಎಲೆಕ್ಟ್ರಿಕ್‌ ಬೆಲೆಯಲ್ಲಿ
₹ 1.59 ಲಕ್ಷ ಇಳಿಕೆ ಮಾಡಿದೆ.ಇದರಿಂದಕೋನಾಬೆಲೆ ₹ 25.3 ಲಕ್ಷದಿಂದ ₹ 23.71 ಲಕ್ಷಕ್ಕೆ ಇಳಿಕೆಯಾಗಿದೆ. ಆಗಸ್ಟ್ 1 ರಿಂದಲೇ ಹೊಸ ದರ ಅನ್ವಯವಾಗಿದೆ.

ADVERTISEMENT

ಚಾರ್ಜಿಂಗ್‌ ಸ್ಟೇಷನ್‌ ಹುಂಡೈ ಸಿದ್ಧತೆ

ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಎಸ್‌ಯುವಿ ಕೋನಾ ಬಿಡುಗಡೆ ಮಾಡಿರುವ ಹುಂಡೈ ಕಂಪನಿಯು ಅದಕ್ಕೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ಕಾರ್ಯಗತವಾಗಿದೆ

ಅತ್ಯಂತ ವೇಗವಾಗಿ ಚಾರ್ಜ್‌ ಮಾಡಲು ಅನುಕೂಲ ಆಗುವಂತೆ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ಇಂಡಿಯನ್‌ ಆಯಿಲ್‌ ಕಂಪನಿಯೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ‌ಇಂಡಿಯನ್‌ ಆಯಿಲ್‌ನ ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹುಂಡೈ ತಿಳಿಸಿದೆ.

‘ವೇಗವಾಗಿ ಚಾರ್ಜ್‌ ಆಗಲು ಬಳಸುವ ಸಾಧನಗಳು ಮತ್ತು ಅದನ್ನು ಅಳವಡಿಸಲು ಹುಂಡೈ ಬಂಡವಾಳ ಹೂಡಿಕೆ ಮಾಡಲಿದೆ. ಒಂದು ಗಂಟೆಯೊಳಗೆ ಶೇ 80ರಷ್ಟು ಚಾರ್ಜ್‌ ಆಗಲಿದೆ’ ಎಂದು ಕಂಪನಿಯ ಸಿಇಒ ಎಸ್‌.ಎಸ್‌. ಕಿಮ್‌ ವಿವರಿಸಿದ್ದಾರೆ.

‘ಎಲೆಕ್ಟ್ರಿಕ್‌ ಎಸ್‌ಯುವಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.ಬಿಡುಗಡೆ ಆದ 15 ದಿನದೊಳಗೆ 120 ಎಸ್‌ಯುವಿಗೆ ಬುಕಿಂಗ್‌ ಆಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.