ADVERTISEMENT

ಭಾರತವನ್ನು ಜಾಗತಿಕ ಆಟೋಮೊಬೈಲ್ ಹಬ್ ಮಾಡಲು ಶ್ರಮ: ನಿತಿನ್ ಗಡ್ಕರಿ

ಪಿಟಿಐ
Published 28 ಫೆಬ್ರುವರಿ 2023, 10:02 IST
Last Updated 28 ಫೆಬ್ರುವರಿ 2023, 10:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತವನ್ನು ಜಾಗತಿಕ ಆಟೋಮೊಬೈಲ್ ತಯಾರಿಕಾ ಹಬ್ ಮಾಡಲು ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ ಎಂದು ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಜೈಪುರದಲ್ಲಿ ಸ್ಥಾಪಿಸಲಾಗಿರುವ ಟಾಟಾ ಮೋಟರ್ಸ್‌ನ ವಾಹನಗಳ ಗುಜರಿ ಘಟಕಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸದ್ಯ ಭಾರತದ ಜಿಡಿ‍ಪಿಗೆ ಆಟೋಮೊಬೈಲ್ ಉದ್ಯಮದಿಂದ ಶೇ 7.1 ರಷ್ಟು ಕೊಡುಗೆ ನೀಡಲಾಗುತ್ತಿದೆ. ಈ ಕ್ಷೇತ್ರದ ಗಾತ್ರ ₹7.8 ಲಕ್ಷ ಕೋಟಿಯಷ್ಟಿದ್ದು, ಅದನ್ನು ಮುಂಬರುವ ವರ್ಷಗಳಲ್ಲಿ ₹15 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.

ADVERTISEMENT

ಆಟೋಮೊಬೈಲ್ ಕ್ಷೇತ್ರದಿಂದ ದೇಶದಾದ್ಯಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 4 ಕೋಟಿ ಉದ್ಯೋಗಗಳು ಸಿಕ್ಕಿವೆ. ಇದನ್ನು 2025ರ ವೇಳೆಗೆ 5 ಕೋಟಿಗೆ ಹೆಚ್ಚಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಮೂಲಕ ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತವನ್ನು ನಂಬರ್ 1 ಆಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೊಸ ಗುಜರಿ ನೀತಿಯಿಂದ ಹಳೆಯ ಹಾನಿಕಾರಕ ವಾಹನಗಳನ್ನು ವಿಲೇವಾರಿ ಮಾಡುವುದು ಸುಲಭವಾಗಿದೆ. ಈ ಮೂಲಕ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಲಾಗುವುದು ಎಂದು ಸಚಿವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಟಾಟಾ ಮೋಟರ್ಸ್ ಇದೇ ಮೊದಲ ಬಾರಿಗೆ ತನ್ನ ಗುಜರಿ ಘಟಕವನ್ನು ರಾಜಸ್ಥಾನದ ಜೈಪುರದಲ್ಲಿ ಸ್ಥಾಪಿಸಿದೆ. ಈ ಘಟಕದ ಮೂಲಕ ವಾರ್ಷಿಕವಾಗಿ 15,000 ವಾಹನಗಳನ್ನು ವಿಲೇವಾರಿ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.