ADVERTISEMENT

ದಕ್ಷಿಣ ಭಾರತದಲ್ಲಿ ‘ಹ್ಯಾಪಿ ವಿತ್ ನಿಸಾನ್’

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:30 IST
Last Updated 17 ಜುಲೈ 2019, 19:30 IST
ನಿಸಾನ್‌ ಕಿಕ್ಸ್‌
ನಿಸಾನ್‌ ಕಿಕ್ಸ್‌   

ವಾಹನ ಮಾರಾಟದ ನಂತರ ನೀಡುವ ಸೇವೆಗಳು ಕಂಪನಿಯ ಬಗೆಗೆ ಗ್ರಾಹಕರಲ್ಲಿ ಆತ್ಮೀಯ ಭಾವ ಮೂಡಿಸುತ್ತವೆ. ಕಾಲ ಕಾಲಕ್ಕೆ ಹಲವು ರೀತಿಯ ಶಿಬಿರಗಳನ್ನು ಆಯೋಜಿಸುವುದರಿಂದ ಕಂಪನಿ ಮತ್ತು ಗ್ರಾಹಕರ ಮಧ್ಯೆ ವ್ಯವಹಾರಿಕ ಸಂಬಂಧ ಮೀರಿದ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ಬಹುತೇಕ ಎಲ್ಲ ಕಾರು ತಯಾರಕ ಕಂಪನಿಗಳುತಮ್ಮ ಗ್ರಾಹಕರಿಗಾಗಿ ವಿಶೇಷ ಮುಂಗಾರು-ಪೂರ್ವ ಕಾರು ತಪಾಸಣಾ ಶಿಬಿರ ಆಯೋಜಿಸುತ್ತವೆ.ವಾಹನಗಳ ಮಾರಾಟದ ನಂತರ ಅತ್ಯುತ್ತಮ ಸೇವೆಗಳನ್ನು ನೀಡುವ ಬದ್ಧತೆಯನ್ನು ಹೊಂದಿರುವ ನಿಸಾನ್ ಇಂಡಿಯಾ ಕಂಪನಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ‘ಹ್ಯಾಪಿ ವಿತ್ ನಿಸಾನ್’ ಕಾರ್ಯಕ್ರಮವನ್ನು ಆಯೋಜಿಸಿದೆ. ದೇಶದಾದ್ಯಂತ ಇದುವರೆಗೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.

ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ 2019 ರ ಜುಲೈ 10ರಂದು ಈ ಕಾರ್ಯಕ್ರಮ ಆರಂಭವಾಗಿದ್ದು, ಇದೇ 20 ರವರೆಗೆ ನಡೆಯಲಿದೆ. ಇದರಡಿ ನಿಸಾನ್ ಮತ್ತು ಡಾಟ್ಸನ್‌ ಮಾಲೀಕರು ತಮ್ಮ ಕಾರುಗಳಿಗೆ ಉಚಿತವಾಗಿ 60 ಪಾಯಿಂಟ್ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಎಲ್ಲಾ ನಿಸಾನ್‍ನ ಅಧಿಕೃತ ಸವೀಸ್ ಸೆಂಟರ್‌ಗಳಲ್ಲಿ ಈ ಸೇವೆ ಲಭ್ಯವಿದೆ.

ADVERTISEMENT

‘ಮಾರಾಟದ ನಂತರದ ಉಪಕ್ರಮಗಳ ಜತೆಗೆ ಆಕರ್ಷಕ ಉತ್ಪನ್ನಗಳನ್ನು ನೀಡಲು ಕಂಪನಿ ಬದ್ಧವಾಗಿದೆ. ಇಂತಹ ಉಪಕ್ರಮಗಳಲ್ಲಿ `ಹ್ಯಾಪಿ ವಿತ್ ನಿಸಾನ್’ ಕೂಡ ಒಂದಾಗಿದೆ.

‘ಮಳೆಗಾಲದ ವೇಳೆ ವಾಹನವನ್ನು ಸರಿಯಾಗಿ ಆರೈಕೆ ಮಾಡಬೇಕು ಮತ್ತು ಜುಲೈ 20 ರೊಳಗೆ ನಿಮ್ಮ ಕಾರುಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವಂತೆ ನಾನು ನಮ್ಮ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದೇನೆ’ ಎಂದುನಿಸಾನ್ ಇಂಡಿಯಾದ ಆಫ್ಟರ್ ಸೇಲ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಅತುಲ್ ಅಗರ್‍ವಾಲ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆಗ್ರಾಹಕರು ಹತ್ತಿರದ ನಿಸಾನ್ ಸರ್ವೀಸ್ ಸೆಂಟರ್‌ಗಳನ್ನು ಸಂಪರ್ಕಿಸಬಹುದು.

ಟಾಟಾದಿಂದ ಉಚಿತ ತಪಾಸಣಾ ಶಿಬಿರ

ಟಾಟಾ ಮೋಟರ್ಸ್‌ ಕಂಪನಿಯು ಇದೇ 15 ರಿಂದ 25ರವರೆಗೆ ಉಚಿತವಾಗಿ ಮುಂಗಾರಿನ ವಾಹನ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ತನ್ನ ವಿತರಣಾ ಜಾಲಗಳಲ್ಲಿ ಗ್ರಾಹಕರಿಗೆ ಕೆಲವು ವಿಶೇಷ ಯೋಜನೆಗಳು ಮತ್ತ ಕೊಡುಗೆಗಳನ್ನೂ ನೀಡಲಿದೆ. ಪ್ರತಿ ವರ್ಷವೂ ಶಿಬಿರ ಆಯೋಜಿಸುತ್ತಿದ್ದರೂ ಈ ಬಾರಿ ಗ್ರಾಹಕರನ್ನು ಕೇಂದ್ರೀಕರಿಸಿದ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಿದೆ.

‘ಬದಲಾಗುತ್ತಿರುವ ಬೇಡಿಕೆಗಳು ಮತ್ತು ಮಾರಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಹಲವು ರೀತಿಯ ಸೇವಾ ಕೊಡುಗೆಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಗ್ರಾಹಕರ ಅಗತ್ಯಗಳನ್ನು ಸಮಯಕ್ಕೆ ಸರಿಯಾಗಿ ಈಡೇರಿಸಲಾಗುತ್ತಿದೆ’ ಎಂದು ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಸುಭಜಿತ್‌ ರಾಯ್‌ ತಿಳಿಸಿದ್ದಾರೆ.

ವಿನಾಯ್ತಿ ಕೊಡುಗೆಗಳು

* ರೋಡ್ ಸೈಡ್‌ ಅಸಿಸ್ಟನ್ಸ್‌ (ಆರ್‌ಎಸ್‌ಎ) ಯೋಜನೆಗಳಿಗೆ ಶೇ 10ರಷ್ಟು

* ಬಿಡಿಭಾಗಗಳಿಗೆ ಶೇ 10ರವರೆಗೆ ಫ್ಲೀಟ್‌ ಗ್ರಾಹಕರಿಗೆ ಆಯಿಲ್‌ ಚೇಂಜ್‌ ಅಥವಾ ಟಾಪ್‌ಅಪ್‌ಗೆ ಶೇ 15ರಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.