ADVERTISEMENT

ಹುಂಡೈ: ಮಾರಾಟದಲ್ಲಿ ಶೇ 5 ರಷ್ಟು ಕುಸಿತ

ಪಿಟಿಐ
Published 1 ಮೇ 2022, 10:21 IST
Last Updated 1 ಮೇ 2022, 10:21 IST
ಹುಂಡೈ
ಹುಂಡೈ   

ನವದೆಹಲಿ: ಏಪ್ರಿಲ್‌ನಲ್ಲಿ ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ 5 ರಷ್ಟು ಕುಸಿತ ಕಂಡು ಬಂದಿದೆ.

ಈ ಬಗ್ಗೆ ಭಾನುವಾರ ‍ಪ್ರಕಟಣೆ ನೀಡಿರುವ ಹುಂಡೈ, ಕಳೆದ ಏಪ್ರಿಲ್‌ನಲ್ಲಿ 56,201 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷ ಇದೇ ಏಪ್ರಿಲ್‌ನಲ್ಲಿ 59,203 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದೆ.

ಏಪ್ರಿಲ್‌ನಲ್ಲಿ ದೇಶಿಯ ಮಾರಾಟವೂ ಕೂಡ ಶೇ 10 ರಷ್ಟು ಕುಸಿತವಾಗಿದೆ. ಈ ಏಪ್ರಿಲ್‌ನಲ್ಲಿ 44,001 ವಾಹನಗಳು ಮಾರಾಟವಾಗಿದ್ದರೆ, ಕಳೆದ 2021 ರ ಏಪ್ರಿಲ್‌ನಲ್ಲಿ 49,002 ವಾಹನಗಳು ಮಾರಾಟ ಆಗಿದ್ದವು.

ADVERTISEMENT

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆವಾಹನಗಳ ರಪ್ತುಈ ಏಪ್ರಿಲ್‌ನಲ್ಲಿ ಹೆಚ್ಚಳವಾಗಿದೆ. ಅಂದರೆ 12,200 ವಾಹನಗಳನ್ನು ರಪ್ತು ಮಾಡಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 10,201 ವಾಹನಗಳನ್ನು ರಪ್ತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.