ADVERTISEMENT

ಮಾರುತಿ ಸುಝುಕಿ ಕಾರುಗಳ ಬೆಲೆ ₹ 15 ಸಾವಿರದಷ್ಟು ಹೆಚ್ಚಳ

ಪಿಟಿಐ
Published 12 ಜುಲೈ 2021, 7:29 IST
Last Updated 12 ಜುಲೈ 2021, 7:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಾಗಿರುವ ಪರಿಣಾಮ, ತಮ್ಮ ಕಂಪನಿ ಉತ್ಪಾದಿಸುವ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ₹15 ಸಾವಿರದಷ್ಟು ಹೆಚ್ಚಿಸಿರುವುದಾಗಿ ಮಾರುತಿ ಸುಝುಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ.

‘ಹ್ಯಾಚ್‌ಬಾಕ್‌ ಸ್ವಿಫ್ಟ್‌ ಮತ್ತು ಎಲ್ಲ ರೀತಿಯ ಸಿಎನ್‌ಜಿ ವೆರಿಯಂಟ್‌ ಮಾದರಿಯ ವಾಹನಗಳಾದ ಆಲ್ಟೊ, ಸೆಲೆರಿಯೊ, ಎಸ್‌–ಪ್ರೆಸ್ಕೊ, ವಾಗ್‌ನ್ಆರ್‌, ಇಕೊ ಮತ್ತು ಎರ್ಟಿಗಾ ಕಾರುಗಳ ಬೆಲೆಯನ್ನು ಏರಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಮೇಲೆ ತಿಳಿಸಿರುವ ಎಲ್ಲ ಮಾದರಿಗಳ ಕಾರುಗಳ ಎಕ್ಸ್‌ ಶೋ ರೂಮ್‌ (ದೆಹಲಿ) ಬೆಲೆಯನ್ನು ₹15 ಸಾವಿರದಷ್ಟು ಹೆಚ್ಚಿಸಲಾಗುತ್ತಿದೆ. ಈ ಹೊಸ ದರ ಸೋಮವಾರದಿಂದಲೇ (ಜುಲೈ 12) ಅನ್ವಯಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಬೆಲೆ ಏರಿಕೆಗೆ ಮುನ್ನ ಸ್ವಿಫ್ಟ್ ವೇರಿಯಂಟ್‌ ಕಾರಿನ ಎಕ್ಸ್‌ ಶೋ ರೂಮ್ ಬೆಲೆ (ದೆಹಲಿ) ₹5.73 ಲಕ್ಷದಿಂದ ₹8.27 ಲಕ್ಷ (ಎಕ್ಸ್ ಶೋರೂಮ್ ದೆಹಲಿ) ದರದಲ್ಲಿ ಲಭ್ಯವಿತ್ತು.

ಮಾರುತಿ ಸುಝುಕಿ ಕಂಪನಿ, ಸಿಎನ್‌ಜಿ ವೇರಿಯಂಟ್‌ ಮಾದರಿ ಕಾರುಗಳನ್ನು ₹4.43 ಲಕ್ಷದಿಂದ ₹9.36 ಲಕ್ಷದವರೆಗೆ ಮಾರಾಟ ಮಾಡುತ್ತಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಕಂಪನಿ, ತನ್ನ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಹೆಚ್ಚಿಸಿತ್ತು. ಸೆಲೆರಿಯೊ ಮತ್ತು ಸ್ವಿಫ್ಟ್‌ ಕಾರುಗಳ ಬೆಲೆಯನ್ನು ₹22,500ವರೆಗೂ ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.