ADVERTISEMENT

ಮಾರುತಿ ತಯಾರಿಕೆ ಹೆಚ್ಚಳ

ಪಿಟಿಐ
Published 7 ಸೆಪ್ಟೆಂಬರ್ 2020, 13:20 IST
Last Updated 7 ಸೆಪ್ಟೆಂಬರ್ 2020, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಆಗಸ್ಟ್‌ನಲ್ಲಿಒಟ್ಟಾರೆ 1.24 ಲಕ್ಷ ವಾಹನಗಳನ್ನು ತಯಾರಿಸಿದ್ದು, ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ತಯಾರಿಕೆಯು ಶೇಕಡ 11ರಷ್ಟು ಹೆಚ್ಚಾಗಿದೆ. 2019ರ ಆಗಸ್ಟ್‌ನಲ್ಲಿ ಕಂಪನಿಯು 1.11 ಲಕ್ಷ ವಾಹನಗಳನ್ನು ತಯಾರಿಸಿತ್ತು.

ಪ್ರಯಾಣಿಕ ವಾಹನಗಳ ತಯಾರಿಕೆ 1.10 ಲಕ್ಷದಿಂದ 1.21 ಲಕ್ಷಕ್ಕೆ ಹೆಚ್ಚಳ ಕಂಡಿದೆ. ಸಣ್ಣ ಕಾರುಗಳಾದ ಆಲ್ಟೊ ಮತ್ತು ಎಸ್‌–ಪ್ರೆಸೊ ತಯಾರಿಕೆ ಶೇ 61ರಷ್ಟು ಹೆಚ್ಚಾಗಿದೆ. ಕಾಂಪ್ಯಾಕ್ಟ್‌ ಕಾರು ಮತ್ತು ಯುಟಿಲಿಟಿ ವಾಹನಗಳ ತಯಾರಿಕೆಯೂ ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT