ADVERTISEMENT

ವ್ಯಾಗನ್‌ಆರ್‌, ಸೆಲೆರಿಯೊ, ಇಗ್ನಿಸ್ ಕಾರುಗಳ ಬ್ರೇಕ್ ಪರಿಶೀಲನೆಗೆ ಮುಂದಾದ ಮಾರುತಿ

ಪಿಟಿಐ
Published 30 ಅಕ್ಟೋಬರ್ 2022, 13:02 IST
Last Updated 30 ಅಕ್ಟೋಬರ್ 2022, 13:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಹಿಂದಿನ ಚಕ್ರಗಳ ಬ್ರೇಕಿಂಗ್‌ ವ್ಯವಸ್ಥೆಯಲ್ಲಿ ಇರಬಹುದಾದ ದೋಷವನ್ನು ಸರಿಪಡಿಸಲು ವ್ಯಾಗನ್ ಆರ್‌, ಸೆಲೆರಿಯೊ ಮತ್ತು ಇಗ್ನಿಸ್‌ ಮಾದರಿಗಳ ಒಟ್ಟು 9,925 ಕಾರುಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿ ಭಾನುವಾರ ಹೇಳಿದೆ.

2022ರ ಆಗಸ್ಟ್‌ 3ರಿಂದ ಸೆಪ್ಟೆಂಬರ್ 1ರ ನಡುವೆ ತಯಾರಾಗಿರುವ ವಾಹನಗಳಲ್ಲಿ ದೋಷ ಇರುವ ಸಾಧ್ಯತೆ ಇದೆ ಎಂದು ಕಂಪನಿಯು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

ಗ್ರಾಹಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಯ ಉದ್ದೇಶದಿಂದ ಅನುಮಾನ ಇರುವ ವಾಹನಗಳ ಪರಿಶೀಲನೆ ನಡೆಸಲಾಗುವುದು. ದೋಷ ಕಂಡುಬಂದಲ್ಲಿ ಉಚಿತವಾಗಿ ಸರಿಪಡಿಸಿಕೊಡಲಾಗುವುದು ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.