
ಬೆಂಗಳೂರು: ಜಪಾನ್‌ನ ವಾಹನ ತಯಾರಿಕಾ ಕಂಪನಿ ನಿಸ್ಸಾನ್ ಮೋಟರ್ ಇಂಡಿಯಾ ಡಿಸೆಂಬರ್ ತಿಂಗಳಿನಲ್ಲಿ 15,372 ವಾಹನಗಳನ್ನು ಮಾರಾಟ ಮಾಡಿದೆ.
ಈ ಪೈಕಿ 13,470 ವಾಹನಗಳನ್ನು ರಫ್ತು ಮಾಡಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಹನ ರಫ್ತು ಆದ ತಿಂಗಳಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
1,902 ವಾಹನಗಳು ದೇಶದಲ್ಲಿ ಮಾರಾಟವಾಗಿವೆ. ನಿಸ್ಸಾನ್ ವಾಹನಗಳಿಗೆ ಹೆಚ್ಚಿದ ಬೇಡಿಕೆಯು ರಫ್ತು ಏರಿಕೆಗೆ ಒಂದು ಕಾರಣವಾಗಿದೆ ಎಂದು ತಿಳಿಸಿದೆ.
ಕಂಪನಿಯು ಡಿಸೆಂಬರ್‌ವರೆಗೆ ಒಟ್ಟು 12 ಲಕ್ಷ ವಾಹನಗಳನ್ನು ರಫ್ತು ಮಾಡಿದೆ. ಭಾರತದಲ್ಲಿ ತಯಾರಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ವಾಹನವು 65ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತಾಗಿದೆ ಎಂದು ತಿಳಿಸಿದೆ.
ಕಂಪನಿಯು, ತನ್ನ ಹೊಸ ಗ್ರಾವೈಟ್ (7 ಆಸನಗಳ ಬಿ–ಎಂಪಿವಿ) ವಾಹನವನ್ನು ಜನವರಿ 21ರಂದು ಬಿಡುಗಡೆ ಮಾಡಲಿದೆ. 5 ಆಸನದ ನಿಸ್ಸಾನ್ ಟೆಕ್ಟಾನ್ ಸಿ–ಎಸ್‌ಯುವಿ ಫೆಬ್ರುವರಿ 4ರಂದು ಮತ್ತು ಏಳು ಆಸನದ ಸಿ–ಎಸ್‌ಯುವಿ ಅನ್ನು 2027ರಲ್ಲಿ ಬಿಡುಗಡೆ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.