ADVERTISEMENT

ದ್ವಿಚಕ್ರ ವಾಹನ ಮಾರಾಟ ಶೇ 6ರಷ್ಟು ಹೆಚ್ಚಳ ನಿರೀಕ್ಷೆ: ಕ್ರಿಸಿಲ್

ಪಿಟಿಐ
Published 5 ಸೆಪ್ಟೆಂಬರ್ 2025, 15:46 IST
Last Updated 5 ಸೆಪ್ಟೆಂಬರ್ 2025, 15:46 IST
<div class="paragraphs"><p>ದ್ವಿಚಕ್ರ ವಾಹನ </p></div>

ದ್ವಿಚಕ್ರ ವಾಹನ

   

ನವದೆಹಲಿ: ಜಿಎಸ್‌ಟಿ ಸರಳೀಕರಣದಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟದ ಪ್ರಮಾಣ ಶೇ 5ರಿಂದ ಶೇ 6ರಷ್ಟು ಏರಿಕೆಯಾಗಲಿದೆ. ಇದೇ ವೇಳೆ ಪ್ರಯಾಣಿಕ ವಾಹನಗಳ ಮಾರಾಟ ಶೇ 2ರಿಂದ ಶೇ 3ರಷ್ಟು ಹೆಚ್ಚಳವಾಗಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್ ನಿರೀಕ್ಷಿಸಿದೆ.

ಜಿಎಸ್‌ಟಿ ದರ ಕಡಿತದಿಂದ ವಾಹನಗಳ ಬೆಲೆ ಅಂದಾಜು ಶೇ 5ರಿಂದ ಶೇ 10ರಷ್ಟು ಕಡಿತವಾಗಲಿದೆ. ಸಣ್ಣಗಾತ್ರದ ಪ್ರಯಾಣಿಕ ವಾಹನಗಳ ಬೆಲೆ ₹30 ಸಾವಿರದಿಂದ ₹60 ಸಾವಿರ ಕಡಿಮೆ ಆಗಲಿದೆ. ದ್ವಿಚಕ್ರ ವಾಹನಗಳ ಬೆಲೆ ₹3 ಸಾವಿರದಿಂದ ₹7 ಸಾವಿರದವರೆಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.

ADVERTISEMENT

‘ಹಬ್ಬದ ಋತುವಿನಲ್ಲಿ ದರ ಇಳಿಕೆ ಮಾಡಿರುವುದು ವಾಹನೋದ್ಯಮಕ್ಕೆ ಉತ್ತೇಜನ ನೀಡಲಿದೆ. ಹೊಸ ವಾಹನಗಳ ಬಿಡುಗಡೆ, ಬಡ್ಡಿ ದರ ಇಳಿಕೆಯು ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಉದ್ಯಮಕ್ಕೆ ಚಾಲನೆ ನೀಡಲಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್‌ನ ಹಿರಿಯ ನಿರ್ದೇಶಕ ಅನುಜ್ ಸೇಥಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.