ADVERTISEMENT

ಟಾಟಾ ಮೋಟರ್ಸ್‌ನಿಂದ ವಿಆರ್‌ಎಲ್‌ಗೆ 1,300 ವಾಣಿಜ್ಯ ವಾಹನ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 15:49 IST
Last Updated 11 ಏಪ್ರಿಲ್ 2022, 15:49 IST
   

ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯಿಂದ ವಿಆರ್‌ಎಲ್‌ ಲಾಜಿಸ್ಟಿಕ್ಸ್‌ ಕಂಪನಿಯು ಒಟ್ಟು 1,300 ವಾಣಿಜ್ಯ ವಾಹನಗಳನ್ನು ಖರೀದಿಸಲಿದೆ. ಭಾರಿ ಗಾತ್ರದ ವಾಣಿಜ್ಯ ವಾಹನಗಳು, ಮಧ್ಯಮ ಮತ್ತು ಲಘು ಪ್ರಮಾಣದ ವಾಣಿಜ್ಯ ವಾಹನಗಳು ಈ ಖರೀದಿಯ ಭಾಗವಾಗಿರಲಿವೆ ಎಂದು ಟಾಟಾ ಮೋಟರ್ಸ್ ಪ್ರಕಟಣೆ ತಿಳಿಸಿದೆ.

‘ನಮ್ಮ ವಾಹನಗಳ ಮಾಲೀಕತ್ವದ ವೆಚ್ಚವು ಅತ್ಯಂತ ಕಡಿಮೆ ಮಟ್ಟದಲ್ಲಿ ಇರುವಂತೆ ಮಾಡಲು ನಾವು ಶ್ರಮಿಸುತ್ತಿರುತ್ತೇವೆ. ನಮ್ಮ ವಿಸ್ತಾರವಾದ ಸೇವಾ ಜಾಲವು ಅತ್ಯುತ್ತಮ ಸೇವೆಗಳನ್ನು ದೇಶದ ಎಲ್ಲ ಕಡೆಗಳಲ್ಲಿಯೂ ಒದಗಿಸುತ್ತದೆ’ ಎಂದು ಟಾಟಾ ಮೋಟರ್ಸ್ ಕಂಪನಿಯ ವಾಣಿಜ್ಯ ವಾಹನಗಳ ವಹಿವಾಟು ವಿಭಾಗದ (ಮಾರಾಟ ಮತ್ತು ಮಾರುಕಟ್ಟೆ) ಉಪಾಧ್ಯಕ್ಷ ರಾಜೇಶ್ ಕೌಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT