ADVERTISEMENT

ಯಮಹಾ ವರ್ಚುಯಲ್:  ಆನ್‍ಲೈನ್ ಮಾರಾಟ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 8:27 IST
Last Updated 2 ಸೆಪ್ಟೆಂಬರ್ 2020, 8:27 IST
ಯಮಹಾ ಕಂಪನಿಯ ಬೈಕ್‌
ಯಮಹಾ ಕಂಪನಿಯ ಬೈಕ್‌   

ಬೆಂಗಳೂರು: ಯಮಹಾ ಕಂಪನಿಯು ವಾಹನಗಳನ್ನು ಖರೀದಿಸಲು ಗ್ರಾಹಕರಿಗೆ ಆನ್‌ಲೈನ್‌ ವೇದಿಕೆಯನ್ನು ಕಲ್ಪಿಸಿದೆ.

ವರ್ಚುಯಲ್‌ ಸ್ಟೋರ್‌ ಸಹಕಾರದೊಂದಿಗೆ ಯಮಹಾ ವೆಬ್‌ಸೈಟ್‌ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿವಾಹನಗಳನ್ನು ಖರೀದಿ ಮಾಡಬಹುದು. ಈ ಸಾಲಿನಲ್ಲಿ 300ಕ್ಕೂ ಹೆಚ್ಚು ವಿತರಕರನ್ನುಒಳಗೊಳ್ಳುವ ಗುರಿ ಹೊಂದಿದೆ.

`ದಿ ಕಾಲ್ ಆಫ್ ದಿ ಬ್ಲೂ' ಅಭಿಯಾನದ ಭಾಗವಾಗಿ ಆನ್‍ಲೈನ್ ಮಾರಾಟ ಆರಂಭಿಸಲಾಗಿದೆ ಎಂದು ಯಮಹಾ ಮೋಟಾರ್‌ ಇಂಡಿಯಾ ಗ್ರೂಪ್ ಕಂಪೆನಿಯ ಅಧ್ಯಕ್ಷರಾದ ಮೊಟೊಫು ಮಿಶಿತಾರಾ ಹೇಳಿದ್ದಾರೆ.

ADVERTISEMENT

ವರ್ಚುಯಲ್‌ ಸ್ಟೋರ್‌ ಹೊಂದಿರುವ ನಮ್ಮ ಹೊಸ ವೆಬ್‍ಸೈಟ್‌ ಉತ್ತಮ ಖರೀದಿಯ ಅನುಭವ ನೀಡಲಿದೆ. ಹಾಗೇ ಕಂಪನಿಯು ವೈಯಕ್ತಿಕ ಗ್ರಾಹಕ (ಒನ್ ಟು ಒನ್) ಸೇವೆಗಳನ್ನು ನೀಡಲು ಬದ್ಧವಾಗಿದೆ. ಭಾರತದ ದ್ವಿಚಕ್ರ ವಾಹನ ಗ್ರಾಹಕರಿಗೆ ಸುರಕ್ಷತೆ, ವಿಶ್ವಾಸಾರ್ಹ ಮತ್ತುಆಕರ್ಷಕ ಸೇವೆ ನೀಡುವುದು ನಮ್ಮ ಮುಖಖ್ಯ ಉದ್ದೇಶವಾಗಿದೆ ಎಂದರು.

ಆನ್‌ಲೈನ್‌ ಖರೀದಿಯು ಡಿಜಿಟಲ್‌ ಇಂಡಿಯಾದ ಒಂದು ಭಾಗವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಬಟ್ಟೆ, ದಿನಸಿ ಖರೀದಿಸುವಂತೆ ವಾಹನಗಳನ್ನು ಖರೀದಿ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ: https://shop.yamaha-motor-india.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.