ADVERTISEMENT

Yezdi Roadster: ಹೊಸತನದೊಂದಿಗೆ ಬಂದ ‘ರೋಡ್‌ಸ್ಟರ್’

ಜಿ.ಶಿವಕುಮಾರ
Published 15 ಆಗಸ್ಟ್ 2025, 23:30 IST
Last Updated 15 ಆಗಸ್ಟ್ 2025, 23:30 IST
<div class="paragraphs"><p>ಕಾರ್ಯಕ್ರಮದಲ್ಲಿ (ಎಡದಿಂದ) ಕ್ಲಾಸಿಕ್‌ ಲೆಜೆಂಡ್ಸ್‌ನ ಆರ್‌ ಆ್ಯಂಡ್‌ ಡಿ ವಿಭಾಗದ ಮುಖ್ಯಸ್ಥ ಸುಶೀಲ್‌ ಸಿನ್ಹಾ, ಚೀಫ್‌ ಬ್ಯುಸಿನೆಸ್‌ ಆಫೀಸರ್‌ ಶರದ್‌ ಅಗರವಾಲ್‌ ಹಾಗೂ ಚೀಫ್‌ ಆಪರೇಟಿಂಗ್‌ ಆಫೀಸರ್‌ ಲಲಿತ್‌ ವರ್ಮಾ ‘ರೋಡ್‌ಸ್ಟರ್‌’ ಬೈಕ್‌ ಅನಾವರಣಗೊಳಿಸಿದರು</p></div>

ಕಾರ್ಯಕ್ರಮದಲ್ಲಿ (ಎಡದಿಂದ) ಕ್ಲಾಸಿಕ್‌ ಲೆಜೆಂಡ್ಸ್‌ನ ಆರ್‌ ಆ್ಯಂಡ್‌ ಡಿ ವಿಭಾಗದ ಮುಖ್ಯಸ್ಥ ಸುಶೀಲ್‌ ಸಿನ್ಹಾ, ಚೀಫ್‌ ಬ್ಯುಸಿನೆಸ್‌ ಆಫೀಸರ್‌ ಶರದ್‌ ಅಗರವಾಲ್‌ ಹಾಗೂ ಚೀಫ್‌ ಆಪರೇಟಿಂಗ್‌ ಆಫೀಸರ್‌ ಲಲಿತ್‌ ವರ್ಮಾ ‘ರೋಡ್‌ಸ್ಟರ್‌’ ಬೈಕ್‌ ಅನಾವರಣಗೊಳಿಸಿದರು

   

ಮುಂಬೈ: ಯೆಜ್ಡಿ ‘ರೋಡ್‌ಸ್ಟರ್’ ಬೈಕ್‌ ಈಗ ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 

ಬೈಕ್‌ ಅನಾವರಣ ಕಾರ್ಯಕ್ರಮವು ಮುಂಬೈನಲ್ಲಿ ಈಚೆಗೆ ನಡೆಯಿತು. 5 ಆಕ ರ್ಷಕ ಬಣ್ಣಗಳಲ್ಲಿ, ಗಮನ ಸೆಳೆಯುವ ವಿನ್ಯಾಸ, ನಾವೀನ್ಯ‌ ಎಂಜಿನ್‌, ವೈಶಿಷ್ಟ್ಯಗಳೊಂದಿಗೆ ರೋಡ್‌ಸ್ಟರ್ ರಸ್ತೆಗಿಳಿಯುತ್ತಿದೆ.

ADVERTISEMENT

ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ 4 ವರ್ಷ ಅಥವಾ 50 ಸಾವಿರ ಕಿ.ಮೀ.ವರೆಗೆ ವಾರಂಟಿ ನೀಡಲಾಗುತ್ತಿದೆ. ವಾರಂಟಿ ಅವಧಿ ವಿಸ್ತರಿಸಿಕೊಳ್ಳುವ ಅವಕಾಶ ಗ್ರಾಹಕರಿಗಿದೆ.

ಯೆಜ್ಡಿಯ ಈ ಹಿಂದಿನ ಅವತರಣಿಕೆಯ ಬೈಕ್‌ಗಳಿಗೆ ಹೋಲಿಸಿದರೆ ರೋಡ್‌ಸ್ಟರ್‌ನ ಸೀಟ್‌ ಹಾಗೂ ಇಂಡಿಕೇಟರ್‌ಗಳ ವಿನ್ಯಾಸದಲ್ಲಿ ಬದಲಾವಣೆ ಕಾಣಬಹುದಾಗಿದೆ. ಗ್ರಾಹಕರು ಬೇಕಿದ್ದರೆ ಹಿಂದಿನ ಸೀಟ್‌ ತೆಗೆದಿಡಬಹುದು. ಅಗತ್ಯಬಿದ್ದರೆ ಮತ್ತೆ ಅಳವಡಿಸಿಕೊಳ್ಳಬಹುದು. 

ಇದು 334 ಸಿ.ಸಿ.ಸಾಮರ್ಥ್ಯದ ಸಿಂಗಲ್‌ ಸಿಲಿಂಡರ್‌, ಲಿಕ್ವಿಡ್‌ ಕೂಲ್ಡ್‌ ಆಲ್ಫಾ–2 ಎಂಜಿನ್‌ ಒಳಗೊಂಡಿದೆ. 6 ಸ್ಪೀಡ್‌ ಗೇರ್‌ ಬಾಕ್ಸ್‌, 320 ಎಂ.ಎಂ. ಫ್ರಂಟ್‌ ಡಿಸ್ಕ್‌ ಬ್ರೇಕ್‌, 240 ಎಂ.ಎಂ ರಿಯರ್‌ (ಹಿಂಬದಿ) ಡಿಸ್ಕ್‌ ಬ್ರೇಕ್‌ ಹೊಂದಿದೆ. ಬಣ್ಣಕ್ಕನುಗುಣವಾಗಿ ನವದೆಹಲಿ ಯಲ್ಲಿ ಈ ಬೈಕ್‌ಗಳ ಎಕ್ಸ್‌ ಷೋರೂಂ ಬೆಲೆ ₹2.10 ಲಕ್ಷದಿಂದ ₹2.26 ಲಕ್ಷದವರೆಗೆ ಇದೆ. 

‘ಆಸಕ್ತರು ಕಂಪನಿಯ ಅಧಿಕೃತ ವೆಬ್‌ಸೈಟ್‌‌ಗೆ ಭೇಟಿ ನೀಡಿ, ಮುಂಗಡವಾಗಿ ₹999 ಪಾವತಿಸಿ ಆನ್‌ಲೈನ್‌ ಮೂಲಕ ಬೈಕ್‌ ಕಾಯ್ದಿರಿಸಬಹುದು. ಒಂದೊಮ್ಮೆ ಬುಕಿಂಗ್‌ ರದ್ದುಮಾಡಿದರೆ ಪೂರ್ಣ ಮೊತ್ತ ಮರುಪಾವತಿಸಲಾಗುತ್ತದೆ’ ಎಂದು ಜಾವಾ ಯೆಜ್ಡಿ ಮೋಟರ್‌ ಸೈಕಲ್ಸ್‌ನ  ಸಹ ಸಂಸ್ಥಾಪಕ ಅನುಪಮ್‌ ಥರೆಜಾ ತಿಳಿಸಿದರು. 

ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಹಾಗೂ ಉದ್ಯಮಿ ಆನಂದ್‌ ಮಹೀಂದ್ರ ಮಾತನಾಡಿದರು. (ಕಂಪನಿಯ ಆಹ್ವಾನದ ಮೇರೆಗೆ ಪ್ರತಿನಿಧಿ ಮುಂಬೈಗೆ ತೆರಳಿದ್ದರು)

ಇಂತಹದ್ದೊಂದು ಬೈಕ್‌ ಮಾರುಕಟ್ಟೆಗೆ ತರಬೇಕೆಂಬುದು ತಂದೆಯ ಕನಸಾಗಿತ್ತು. ಅದೀಗ ನನಸಾಗಿದೆ‌. ಎಲ್ಲಾ ವಯೋಮಾನದವರಿಗೂ ಇದು ಇಷ್ಟವಾಗಲಿದೆ
ಬೊಮನ್‌ ರುಸ್ತೊಮ್‌ ಇರಾನಿ, ಸಹ ಸಂಸ್ಥಾಪಕ, ಜಾವಾ ಯೆಜ್ಡಿ ಮೋಟರ್‌ಸೈಕಲ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.