ಜಗತ್ತಿನ ಯಾವುದೇ ಮೂಲೆಯಲ್ಲಿ ಹೊಸತನ್ನು ಕಂಡುಹಿಡಿದರೆ, ಅದು ಕ್ಷಣಾರ್ಧದಲ್ಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಡುತ್ತದೆ. ಅದರಲ್ಲೂ ಫ್ಯಾಷನ್ ಲೋಕದಲ್ಲಂತೂ ಅದು ಹೆಚ್ಚು. ಯಾವುದೇ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದರೂ ಅವುಗಳನ್ನು ಖರೀದಿಸಬೇಕೆಂಬ ತುಡಿತ ಯುವಕ–ಯುವತಿಯರದ್ದಾಗಿರುತ್ತದೆ. ಅದೇ ಟ್ರೆಂಡ್ ಸಹ ಆಗುತ್ತದೆ.
ಅದೇ ರೀತಿ ಟ್ರೆಂಡ್ ಆಗಿರುವಂತಹದ್ದು ಫಿಂಗರ್ ವಾಚ್ ಬೆರಳು ಗಡಿಯಾರ.ವಾಚ್‌ಗಳೆಂದರೆ, ಸಾಮಾನ್ಯವಾಗಿ ಗೋಡೆಗಳ ಮೇಲೆ ಹಾಗೂ ಕೈಗಳಲ್ಲಿ ನೋಡಿರುತ್ತೇವೆ. ಆದರೆ, ಅದ್ಯೋರೊ ಪುಣ್ಯಾತ್ಮನೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ, ಫಿಂಗರ್ ವಾಚ್ ಅನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿಬಿಟ್ಟಿದ್ದಾರೆ.
ಈ ವಾಚ್ ಹುಟ್ಟಿದ್ದು ಚೀನಾದಲ್ಲಿ. ಯುವತಿಯರು ಹೆಚ್ಚಾಗಿ ಇಂತಹ ವಾಚ್‌ಗಳನ್ನು ಬಳಸುತ್ತಿದ್ದು, ಸಭೆ ಸಮಾರಂಭಗಳು, ಕಚೇರಿಗಳು ಹಾಗೂ ಕಾಲೇಜಿಗೆ ಹೋಗುವಾಗ ಇವುಗಳನ್ನು ಧರಿಸಿದರೆ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಬಹುದು. ಇವುಗಳನ್ನು ಧರಿಸುವುದೂ ಉಂಗುರಗಳಂತೆಯೇ ಸುಲಭ. ನಾನಾ ವಿನ್ಯಾಸದ ಫಿಂಗರ್ ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಅಂತಹ ಕೆಲ ವಾಚ್‌ಗಳ ಮಾಹಿತಿ ಇಲ್ಲಿದೆ ಓದಿ.
ಸ್ಟೋನ್ ಫಿಂಗರ್ ವಾಚ್
ಈ ವಾಚ್‌ನ ಸುತ್ತಲೂ ಅಂದದ ಹೊಳೆಯುವ ಸ್ಟೋನ್‍ಗಳನ್ನು ಅಳವಡಿಸಲಾಗಿದೆ. ಉಡುಪುಗಳಿಗೆ ತಕ್ಕಂತೆ ಈ ವಾಚ್‌ಗಳನ್ನು ಧರಿಸಬಹುದು. ಸಿಂಪಲ್ ಆಗಿ, ಗ್ರ್ಯಾಂಡ್ ಆಗಿ ಕಾಣುವಂತಹ ಸ್ಟೋನ್‍ಗಳ ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಕೈಬೆರಳಿನಲ್ಲಿ ಕೇವಲ ಹರಳಷ್ಟೇ ಅಲ್ಲ, ಸಮಯ ಸೂಚಕ ಮುಳ್ಳುಗಳೂ ಇದ್ದು, ಗಮನಸೆಳೆಯುತ್ತವೆ.
ಕಲರ್ಸ್ ಫಿಂಗರ್ ವಾಚ್
ನಾನಾ ಬಣ್ಣಗಳ ಫಿಂಗರ್ ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಯುವಕ–ಯುವತಿಯರಿಗೆ ಇವು ಹೆಚ್ಚು ಒಗ್ಗುತ್ತವೆ. ತೊಡುವ ಉಡುಪಿನ ಬಣ್ಣಕ್ಕೆ ಹೊಂದುವಂತಹ ಕಲರ್ಸ್ ಫಿಂಗರ್ ವಾಚ್‌ಗಳ ಯುವಕ–ಯುವತಿಯರಿಗೆ ಸ್ಟೈಲಿಷ್ ಲುಕ್ ನೀಡಲಿವೆ. ಜೀನ್ಸ್, ಕುರ್ತಾ, ಸಲವಾರ್, ಲಾಂಗ್ ಫ್ರಾಕ್ ಸೇರಿದಂತೆ ನಾನಾ ವಿನ್ಯಾಸ ಉಡುಪುಗಳ ಜೊತೆಗೆ ಈ ವಾಚ್‌ಗಳನ್ನು ಹಾಕಿಕೊಳ್ಳುವುದು ಸೂಕ್ತ.
ಕಿಡ್ಸ್ ಫಿಂಗರ್ ವಾಚ್
ಮಕ್ಕಳಿಗೆಂದೇ ಪ್ರತ್ಯೇಕವಾಗಿ ಕಿಡ್ಸ್ ಫಿಂಗರ್ ವಾಚ್‌ಗಳನ್ನು ಸಿದ್ಧಪಡಿಸಲಾಗಿದೆ. ಅವುಗಳು, ಇಷ್ಟವಾಗುವ ಆಕಾರದಲ್ಲಿ ಲಭ್ಯ. ತರಹೇವಾರಿ ಬಣ್ಣಗಳಲ್ಲಿಯೂ ಇವು ಮಾರುಕಟ್ಟೆಯಲ್ಲಿ ಸಿಗುತ್ತವೆ. ಮಕ್ಕಳ ಕೋಮಲ ಬೆರಳುಗಳಿಗೆ ನೋವಾಗದಿರಲೆಂದು ಈ ವಾಚುಗಳಿಗೆ ರಬ್ಬರ್ ಬ್ಯಾಂಡ್ ಅಳವಡಿಸಲಾಗಿದೆ.
ಕ್ಯಾಪ್‍ವಿತ್ ಫಿಂಗರ್ ವಾಚ್
ಕ್ಯಾಪ್‍ವಿತ್ ಫಿಂಗರ್ ವಾಚ್‍ಗಳು ಸಾಮಾನ್ಯ ವಾಚ್‍ಗಳಿಗಿಂತ ಭಿನ್ನವಾಗಿರುತ್ತವೆ. ಥೇಟ್ ಉಂಗುರಗಳ ರೀತಿಯಲ್ಲೇ ಈ ವಾಚ್‌ಗಳು ಕಾಣುತ್ತವೆ. ಇವುಗಳನ್ನು ಸುಲಭವಾಗಿ ವಾಚ್‌ಗಳೆಂದು ಗುರುತಿಸಲು ಸಾಧ್ಯವಾಗಲ್ಲ. ಹರಳುಗಳು ಅಥವಾ ಒಂದೇ ದೊಡ್ಡ ಸ್ಟೋನ್‌ವುಳ್ಳ ಕ್ಯಾಪ್‌ಗಳು ಈ ವಾಚ್‌ಗಳಿಗೆ ಕವಚದ ಮಾದರಿಯಲ್ಲಿರುತ್ತವೆ.
ಈ ಎಲ್ಲ ವಾಚ್‍ಗಳೂ ಚಿಲ್ಲರೆ ಮಾರುಕಟ್ಟೆ ಹಾಗೂ ಆನ್‍ಲೈನ್ ಮಾರುಕಟ್ಟೆಯಲ್ಲಿ ಲಭ್ಯ. ₹ 300 ರಿಂದ 2,000 ರವರೆಗೆ ಇವುಗಳ ಬೆಲೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.