ADVERTISEMENT

ನೋಡಗರ ಮನಸೂರೆಗೊಂಡ ಅಂತರರಾಷ್ಟ್ರೀಯ ಫ್ಯಾಷನ್ ವೀಕ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 11:28 IST
Last Updated 19 ಫೆಬ್ರುವರಿ 2022, 11:28 IST
ಅಂತರರಾಷ್ಟ್ರೀಯ ಫ್ಯಾಷನ್ ವೀಕ್
ಅಂತರರಾಷ್ಟ್ರೀಯ ಫ್ಯಾಷನ್ ವೀಕ್   

ಬೆಂಗಳೂರು:ಕೊರೋನ ಆತಂಕ ಕೊಂಚ ತಗ್ಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಫ್ಯಾಷನ್ ಕಲರವ ಶುರುವಾಗಿದೆ.

ವೈಟ್ ಫೀಲ್ಡ್ ನಲ್ಲಿರುವ ಮ್ಯಾರಿಯೆಟ್ ಹೋಟೆಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ "ಟಾಕ್ ಆಫ್ ದಿ ಟೌನ್- 2022" ಫ್ಯಾಷನ್ ವೀಕ್" ಈ ಎಲ್ಲದ್ದಕ್ಕು ಸಾಕ್ಷಿಯಾಯಿತು.

ನಟಿ ಕಾರುಣ್ಯ ರಾಮ್

ಫ್ಯಾಷನ್ ವೀಕ್‌ನಲ್ಲಿ 40 ಸೂಪರ್ ಮಾಡೆಲ್‌ಗಳ ಮಾದಕ ಕ್ಯಾಟ್‌ವಾಕ್ ನೋಡುಗರಲ್ಲಿ ಮಿಂಚು ಹರಿಸಿತು. ಝಗಮಗಿಸುವ ವೇದಿಕೆ, ಮನಸನ್ನು ಕುಣಿಸುವ ಮ್ಯೂಸಿಕ್, ಆ ಮ್ಯೂಸಿಕ್ ನ ತಾಳಕ್ಕೆ ತಕ್ಕಂತೆ ಲಲನೆಯರು ಹಾಕಿದ ಮೋಹಕ ಹೆಜ್ಜೆ ಫ್ಯಾಷನ್ ಪ್ರಿಯರನ್ನು ಮಂತ್ರ ಮುಗ್ಧಗೊಳಿಸಿತು.

ಜಯಂತಿ ಬಲ್ಲಾಳ್, ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಅವರಂತಹ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿದ ದೇಶಿ ಮತ್ತು ವೆಸ್ಟರ್ನ್ ಕಲ್ಚರ್ ಸೇರಿದಂತೆ ಹಲವು ಬಗೆಯ ನೂತನ ಶೈಲಿ ಧಿರಿಸುಗಳು, ಆಭರಣಗಳನ್ನು ಧರಿಸಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಬಳುಕುತ್ತಾ ಹೆಜ್ಜೆ ಹಾಕಿದರು.

ಸ್ಯಾಂಡಲ್‌ವುಡ್ ತಾರೆಯರಾದ ಶ್ವೇತಾ ಶ್ರೀವಾತ್ಸವ್, ಇತಿ ಆಚಾರ್ಯ, ಕಾರುಣ್ಯರಾಮ್, ಶ್ವೇತಾ ನಂದಿತಾ, ಕಾರ್ತಿಕ್ ಜಯರಾಮ್, ಬಾಲಿವುಡ್ ನಟ ಕೀತ್ ಸಿಕ್ವೇರಾ ವಿವಿಧ ಡಿಸೈನರ್ಸ್ ಗಳಿಗೆ ಶೋಸ್ ಟಾಪಾರ್ ಆಗಿ ಹೆಜ್ಜೆ ಹಾಕಿ ಟಾಕ್ ಆಫ್ ದಿ ಟೌನ್ ಫ್ಯಾಷನ್‌ ಶೋಗೆ ಮತ್ತಷ್ಟು ರಂಗು ತುಂಬಿದರು. ಟಗರು ಖ್ಯಾತಿ ಕಾಕ್ರೋಚ್ ಸುಧಿ ಸೇರಿದಂತೆ ಹಲವು ಸೆಲಿಬ್ರಿಟಿಗಳು ಈ ಫ್ಯಾಷನ್‌ ಶೋ ಅನ್ನು ಕಣ್ತುಂಬಿಕೊಂಡರು.

ಈ ವೇಳೆ ಮಾತನಾಡಿದ ನಟಿಯರಾದ ಕಾರುಣ್ಯರಾಮ್ ಹಾಗೂ ಇತಿ ಆಚಾರ್ಯ, ಮಹಿಳೆಯರೆಲ್ಲರೂ ಒಟ್ಟಿಗೆ ಕೂಡಿ ಈ ಫ್ಯಾಷನ್ ಶೋ ಆಯೋಜಿಸಿದ್ದು, ಸಖತ್ ಖುಷಿ ತಂದಿದೆ. ಮಹಿಳೆಯರು ಮನಸ್ಸು ಮಾಡಿದರೆ ಎನ್ನೆಲ್ಲಾ ವಂಡರ್‌ಗಳನ್ನು ಮಾಡಬಹುದು ಎಂಬುದನ್ನು ಶೋನ ಆಯೋಜಕಿ ನಂದಿನಿ ನಾಗರಾಜ್ ಮಾಡಿ ತೋರಿಸಿದ್ದಾರೆ ಎಂದರು. ಸಾಕಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಅತ್ಯಾದ್ಭುತ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಅತ್ಯಾಕರ್ಷಕ ಡಿಸೈನರ್ ವೇರ್‌ಗಳನ್ನು ಕಂಡು ನಿಬ್ಬೆರಗಾದೆ ಎಂದರು.

ನಟಿ ಇತಿ ಆಚಾರ್ಯ

ಫ್ಯಾಷನ್ ವೀಕ್‌ನ ಆಯೋಜಕರಾದ ನಂದಿನಿ ನಾಗರಾಜ್ ಮಾತನಾಡಿ, ಒಳ್ಳೆಯ ಡಿಸೈನ್ಸ್ ಮತ್ತು ಡೈಮಂಡ್ ಕಲೆಕ್ಷನ್‌ಗಳನ್ನು ಒಂದೇ ವೇದಿಕೆಯಲ್ಲಿ ತೋರಿಸಬೇಕೆಂಬ ಹಂಬಲದಿಂದ ಈ ಶೋ ಆಯೋಜಿಸಲಾಗಿತ್ತು. ವಿಶ್ವಮಟ್ಟದ ಈ ಫ್ಯಾಷನ್ ಶೋಗೆ ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ನಮಗೆ ಒಳ್ಳೆಯ ಸ್ಪಂದನೆ ಲಭಿಸಿದೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆನ್ನೈನ ಕರುಣ್ ರಾಮನ್ ಈ ಫ್ಯಾಷನ್‌ ಶೋನ ಡೈರೆಕ್ಟರ್ ಮಾಡಿದ್ದಾರೆ. ಧ್ರುವ ಪ್ರೊಡಕ್ಷನ್ ಪಾರ್ಟ್‌ನರ್ ಆಗಿದ್ದರು. ಸದಾಶಿವನಗರದ ಗಣೇಶ್ ಗೋಲ್ಡ್ ಅಂಡ್ ಡೈಮೆಂಡ್ ಜ್ಯೂವೆಲ್ಲರಿ ಹಾಗೂ ಕೀರ್ತಿಲಾಲ್ಸ್ ಡೈಮೆಂಡ್ಸ್ ಅಂಡ್ ಗೋಲ್ಡ್ ಜ್ಯುವೆಲ್ಲರಿ ಈ ಫ್ಯಾಷನ್ ವೀಕ್‌ನ ಸಹ ಪ್ರಾಯೋಜಕರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.