ADVERTISEMENT

ಹಬ್ಬಕ್ಕಿರಲಿ ಉಗುರಿನ ಸಿಂಗಾರ...!

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 6:57 IST
Last Updated 3 ನವೆಂಬರ್ 2021, 6:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಿ ಆಯಿತು. ಅದಕ್ಕೊಪ್ಪುವ ಒಡವೆಯನ್ನೂ ಹೊಂದಿಸಿಕೊಂಡಾಯ್ತು. ಅಂದಹಾಗೆ ಉಗುರುಗಳ ಅಂದಕ್ಕೆ ಏನು ಮಾಡೋದು ಅಂತ ಯೋಚಿಸಿದ್ದೀರಾ? ಉಡುಪಿಗೆ ಹೊಂದುವ ಬಣ್ಣಗಳನ್ನು ಹಾಕಿಕೊಂಡರೆ ಸಾಕೇ?... ನೀವು ಹೀಗೆ ಯೋಚಿಸಿರಬಹುದು. ಟ್ರೆಂಡ್‌ಗೆ ಹೊಂದುವ ನೈಲ್‌ ಆರ್ಟ್‌ ಅನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು.

ಡಿಪ್‌ ನೈಲ್ಸ್‌ (ಕೆಂಪು ಮತ್ತು ಬಂಗಾರದ ಬಣ್ಣ)

ಕೆಂಪು ಮತ್ತು ಬಂಗಾರದ ಬಣ್ಣಗಳಿಂದ ನಿಮ್ಮ ಉಗುರಗಳನ್ನು ಸಿಂಗರಿಸಿಕೊಳ್ಳಬಹುದು. ಡಿಪ್‌ ನೈಲ್ಸ್‌ನ ಉಪಯೋಗ ಎಂದರೆ, ಎರಡು– ಮೂರು ಬಣ್ಣಗಳನ್ನು ಬಳಸಬಹುದು. ಉಗುರುಗಳಿಗೆ ನೀವು ಹಚ್ಚಿದ ಮೊದಲ ಕೋಟ್‌ ನೈಲ್‌ ಪಾಲಿಷ್‌ನ ಮೇಲೆ ಡಿಪ್‌ ನೈಲ್ಸ್‌ ಮೂಲಕ ವಿವಿಧ ಬಣ್ಣಗಳನ್ನು ಹಚ್ಚಿಕೊಳ್ಳಬಹುದು.

ADVERTISEMENT

ಕ್ಯಾಂಡಿ ಕೇನ್‌ ನೈಲ್‌ ಆರ್ಟ್‌

ಈ ವಿನ್ಯಾಸ ರಜಾ ದಿನಗಳಲ್ಲಿ ಹೆಚ್ಚು ಒಪ್ಪುತ್ತದೆ. ಕೆಂಪು ಮತ್ತು ಹಸಿರು ಬಣ್ಣದ ಕಾಂಬಿನೇಷನ್‌ ಈ ರೀತಿಯ ನೈಲ್‌ ಆರ್ಟ್‌ಗೆ ಹೆಚ್ಚು ಸೂಕ್ತ. ಇದರೊಂದಿಗೆ ಕೆಂಪು ಬಿಳಿ, ಹಸಿರು ಬಿಳಿ.. ಈ ರೀತಿಯ ಕಾಂಬಿನೇಷನ್‌ ಕೂಡ ಬಳಸಬಹುದು. ಹಬ್ಬದ ರಜಾವನ್ನು ಮಜಾ ಮಾಡಲು, ಉಗುರನ್ನು ಅಂದವಾಗಿಸಿಕೊಳ್ಳಲು ಈ ವಿನ್ಯಾಸ ಸೂಕ್ತ.

ಸ್ನೋಫ್ಲೇಕ್‌ ಟಿಪ್ಸ್‌

ಇದು ಎಲ್ಲಾ ಬಗೆಯ ಔಟ್‌ಫಿಟ್‌ಗೂ ಹೊಂದುವಂಥ ಉಗುರು ವಿನ್ಯಾಸ. ಸಮಯ ಕಡಿಮೆ ಇದೆ, ಬೇಗ ತಯಾರಾಗಬೇಕು ಎಂದರೆ ಈ ವಿನ್ಯಾಸವನ್ನು ಮಾಡಿಕೊಳ್ಳಬಹುದು. ಒಂದೇ ಬೆರಳಿಗೆ ಈ ವಿನ್ಯಾಸ ಮಾಡಿಕೊಂಡರೂ ಚೆನ್ನಾಗಿ ಒಪ್ಪುತ್ತದೆ. ಹಳದಿ ಮತ್ತು ಕಂದು, ಗುಲಾಬಿ ಮತ್ತು ಬಿಳಿ ಹೀಗೆ ವಿವಿಧ ಬಣ್ಣಗಳ ವಿನ್ಯಾಸದಿಂದ ಸ್ನೋಫ್ಲೇಕ್ಸ್‌ ನೈಲ್‌ ಆರ್ಟ್‌ಯನ್ನು ಮಾಡಿಕೊಳ್ಳಬಹುದು.

ಡಾಟ್‌ ಸ್ನೋಫ್ಲೇಕ್‌

ಹೆಸರೇ ಹೇಳುವಂತೆ ಚಳಿಗಾಲದ ಫ್ಯಾಷನ್‌ಗೆ ಒಪ್ಪುವಂಥ ಉಗುರು ವಿನ್ಯಾಸವಿದು. ಸ್ನೋಫ್ಲೇಕ್‌ ಟಿಪ್ಸ್‌ ವಿನ್ಯಾಸದ ರೀತಿಯಲ್ಲೇ ಇರುವ ಆದರೆ, ಸಣ್ಣ ಬದಲಾವಣೆ ಇರುವ ಉಗುರು ವಿನ್ಯಾಸ ಇದಾಗಿದೆ. ಯಾವ ಬಣ್ಣಗಳ ಕಾಂಬಿನೇಷನ್‌ಗೂ ಇದು ಹೊಂದುತ್ತದೆ. ಸ್ವಲ್ಪ ಗಾಢ ಬಣ್ಣಗಳು ಈ ವಿನ್ಯಾಸಕ್ಕೆ ಹೆಚ್ಚು ಹೊಂದುತ್ತವೆ.

ರೆನ್‌ಡಿಯರ್‌ ಆ್ಯನ್‌ತ್ಲರ್ಸ್‌

ಹೆಸರೇ ಹೇಳುವಂತೆ ಜಿಂಕೆಯ ಕೊಂಬುಗಳಂತೆ ಈ ವಿನ್ಯಾಸವು ಇರಲಿದೆ. ಇದು ತುಂಬಾ ಟ್ರೆಂಡಿ ಆಗಿದ್ದು, ರಜಾ ದಿನಗಳಿಗೆ ಹೇಳಿ ಮಾಡಿಸಿದ ನೈಲ್‌ ಆರ್ಟ್‌ ಆಗಿದೆ. ಒಂದೇ ಬೆರಳಿಗೂ ಹೊಂದುತ್ತದೆ ಅಥವಾ ಎಲ್ಲಾ ಬೆರಳಿಗೆ ಈ ವಿನ್ಯಾಸ ಮಾಡಿಕೊಂಡರೂ ಅಂದವಾಗಿರುತ್ತದೆ.

ತುಂಬಾ ಕಡಿಮೆ ಸಮಯದಲ್ಲಿ ಅಂದವಾದ ವಿನ್ಯಾಸ ಬೇಕಾದರೆ ಹೀಗೆ ಮಾಡಿಬಹುದು. ತುಂಬಾ ಸುಲಭ ಮತ್ತು ತುಂಬಾ ಅಂದವಾಗಿ ಕಾಣಬೇಕು ಅಂತಾದರೆ ಹೀಗೆ ಮಾಡಿ– ಯಾವ ಬಣ್ಣಗಳನ್ನು ಬೇಕಾದರೂ ಆಯ್ದುಕೊಳ್ಳಿ, ಉಗುರಿಗೆ ಹಚ್ಚಿಕೊಳ್ಳಿ ಅದರ ಮೇಲೆ ಗ್ಲಿಟರ್‌ ಅನ್ನು ಹಾಕಿಕೊಳ್ಳಿ. ಇದು ವಿನ್ಯಾಸಕ್ಕೆ ಹೊಸ ಲುಕ್‌ ತಂದುಕೊಡುತ್ತದೆ ಮತ್ತು ತುಂಬಾ ಸುಲಭದಲ್ಲೂ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.