ADVERTISEMENT

Miss Universe 2023: ನಿಕರಾಗುವಾದ ಶೆನ್ನಿಸ್‌ಗೆ 'ಮಿಸ್‌ ಯೂನಿವರ್ಸ್‌' ಕಿರೀಟ

2023ರ ಮಿಸ್‌ ಯೂನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2023, 10:41 IST
Last Updated 19 ನವೆಂಬರ್ 2023, 10:41 IST
   

ಎಲ್ ಸಾಲ್ವಡಾರ್(ಅಮೆರಿಕ): ಸ್ಯಾನ್ ಸಾಲ್ವಡಾರ್‌ನಲ್ಲಿ ನಡೆದ '72ನೇ ಮಿಸ್‌ ಯೂನಿವರ್ಸ್‌ 2023' ಸ್ಪರ್ಧೆಯಲ್ಲಿ ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ಈ ವರ್ಷದ ‘ಮಿಸ್ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿಕೊಂಡರು.

ನ.19 ರಂದು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ಭವ್ಯ ಸಮಾರಂಭ ನಡೆಯಿತು.

72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ 84 ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಬಾರಿ ಭಾರತವನ್ನು ಪ್ರತಿನಿಧಿಸಿದ ಶ್ವೇತಾ ಶಾರದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದರು.

ADVERTISEMENT

ಭಾರತವನ್ನು ಪ್ರತಿನಿಧಿಸಿರುವ ಶ್ವೇತಾ ಶಾರದಾ (23) ಚಂಡೀಗಢದ ಮೂಲದವರು. ಅವರು ಕಳೆದ ಆಗಸ್ಟ್‌ನಲ್ಲಿ ನಡೆದ 'ಮಿಸ್‌ ದಿವಾ ಯುನಿವರ್ಸ್‌ 2023'ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಶೆನ್ನಿಸ್‌ಗೆ ಮಾಜಿ ವಿಶ್ವ ಸುಂದರಿ ಆರ್.ಬನ್ನಿ ಗೇಬ್ರಿಯಲ್ ಕಿರೀಟ ತೊಡಿಸಿ ಶುಭಾಷಯ ಕೋರಿದರು. ಮಿಸ್‌ ಯೂನಿವರ್ಸ್‌ ಶೆನ್ನಿಸ್‌ಗೆ ಸಿನಿ ಗಣ್ಯರು ಹಾಗೂ ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಮಿಸ್ ಯೂನಿವರ್ಸ್ ಗೆದ್ದ 'ಮೊದಲ ನಿಕರಾಗುವಾ ಮಹಿಳೆ' ಎಂಬ ಹೆಗ್ಗಳಿಕೆಗೆ ಶೆನ್ನಿಸ್‌ ಪಲಾಸಿಯೋಸ್ ಪಾತ್ರರಾಗಿದ್ದಾರೆ. ಸ್ಪರ್ಧೆಗಾಗಿ ಅಲಂಕರಿಸಿದ ಗೌನ್‌ನಲ್ಲಿ ಅವರು ಮಿಂಚಿದರು. ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ 2ನೇ ರನ್ನರ್ ಅಪ್ ಆಗಿದ್ದರೆ, ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಶೆನ್ನಿಸ್‌ ಪಲಾಸಿಯೋಸ್ 2000 ಮೇ 31ರಂದು ನಿಕರಾಗುವಾದ ಮನಾಗುವಾದಲ್ಲಿ ಜನಿಸಿದರು. ಯೂನಿವರ್ಸಿಡಾಡ್ ಸೆಂಟ್ರೊದಲ್ಲಿ ಅಧ್ಯಯನ ಮಾಡಿದ ಅವರು ಸಮೂಹ ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.