ADVERTISEMENT

ಟೊಮೆಟೊ: ಮನೆ ಮದ್ದಿಗೂ ಮುದ್ದು

ಹರ್ಷಿತಾ ಕೆ.ವಿ.
Published 21 ಡಿಸೆಂಬರ್ 2018, 19:30 IST
Last Updated 21 ಡಿಸೆಂಬರ್ 2018, 19:30 IST
A woman eating salad. Isolated on white.A woman eating salad. Isolated on white.
A woman eating salad. Isolated on white.A woman eating salad. Isolated on white.   

ಟೊಮೆಟೊ ಅಡುಗೆಗೆ ಮಾತ್ರವೇ ಅಲ್ಲದೆ ಮನೆಮದ್ದಿಗೂ ಒದಗುತ್ತದೆ.

ಟೊಮೆಟೊದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮುಂತಾದ ಲವಣಗಳಿವೆ.
ಬಿ. 1, ಬಿ. 2, ಮತ್ತು ಸಿ. ಎ. ಮಿಟಮಿನ್‌ಗಳಿವೆ.

ಟೊಮೆಟೊ ಬೊಜ್ಜು ನಿರೋಧಕವೂ ಹೌದು. ಪ್ರತಿ ಮುಂಜಾನೆ ಉಪಹಾರಕ್ಕಿಂತ ಮುಂಚೆ ಒಂದೆರಡು ಟೊಮೊಟೊವನ್ನು ತಿನ್ನಬಹುದು.

ADVERTISEMENT

ಟೊಮೆಟೊರಸ ಹೊಟ್ಟೆಯನ್ನು ಸ್ವಚ್ಛಮಾಡುತ್ತದೆ. ಇದು ಅಜೀರ್ಣ, ವಾಯು, ಮಲಬದ್ಧತೆಗಳ ನಿವಾರಕ. ಟೊಮೆಟೊದಲ್ಲಿರುವ ಕಬ್ಬಿಣ ಸುಲಭ ಪಚನಕಾರಿ. ಆದ್ದರಿಂದ ರಕ್ತಹೀನತೆಯಿದ್ದವರು ಟೊಮೆಟೊ ತಿನ್ನಬಹುದು. ಮಕ್ಕಳಿಗೂ ಟೊಮೆಟೊರಸ ಉತ್ತಮ. ಟೊಮೆಟೊ ರಸಕ್ಕೆ ಬೆಲ್ಲ, ಕಲ್ಲು, ಸಕ್ಕರೆ, ಜೇನು, ಖರ್ಜೂರ – ಇವನ್ನು ಸೇರಿಸಿ ಸೇವಿಸಬಹುದು.

* ಚೆನ್ನಾಗಿ ಹಣ್ಣಾದ ದೊಡ್ಡ ಟೊಮೆಟೊವನ್ನು ಅರ್ಧಕ್ಕೆ ಕತ್ತರಿಸಿ ಅದರಿಂದ ಮುಖ ಮಾಲೀಶ್ ಮಾಡಿದರೆ ತ್ವಚೆ ಕೋಮಲವಾಗುತ್ತದೆ; ಮುಖದ ಕಾಂತಿ ಹೆಚ್ಚುತ್ತದೆ.

* ಮುಖದಲ್ಲಿ ಹೆಚ್ಚು ಮೊಡವೆಗಳು ಇರುವವರು ಟೊಮೆಟೊರಸವನ್ನು ಬಳಸಬಹುದು.

* ಟೊಮೆಟೊರಸಕ್ಕೆ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಲೇಪಿಸಿದರೆ ತ್ವಚೆಗೆ ಬಿಳಿಯ ಬಣ್ಣ ನೀಡುವ ಫೇಸ್‌ಪ್ಯಾಕ್‌ನಂತೆ ಕಾರ್ಯ ನಿರ್ವಹಿಸುತ್ತದೆ.

* ಟೊಮೆಟೊವನ್ನು ಉರುಟಾಗಿ ಕತ್ತರಿಸಿ ಕಣ್ಣಿನ ಮೇಲೆ ಅರ್ಧ ಗಂಟೆ ಇಟ್ಟು ಬಿಟ್ಟರೆ ಕಣ್ಣಿನ ಆಯಾಸ ಪರಿಹಾರವಾಗುತ್ತದೆ.

* ಒಡೆದ ಕಾಲು ಅಥವಾ ಒರಟು ಚರ್ಮವಿರುವ ಕಾಲುಗಳನ್ನು ಉಪ್ಪು ಬೆರೆಸಿದ ನೀರಲ್ಲಿ ಹತ್ತು ನಿಮಿಷಗಳ ಕಾಲ ಇಡಬೇಕು. ನಂತರ ತೊಳೆದು ಟೊಮೆಟೊರಸ, ಅರಿಸಿನ ಹಾಗೂ ಕೊಬ್ಬರಿ ಎಣ್ಣೆಯನ್ನು ಲೇಪಿಸಿ ತಿಕ್ಕಬೇಕು.

* ಹಸಿ ಟೊಮೆಟೊ ಸೇವನೆಯಿಂದ ವಿಟಮಿನ್ ಸಿ ಹೆಚ್ಚಾಗಿ ದೊರೆತು ಚಳಿಗಾಲದಲ್ಲಿ ತುಟಿ ಒಣಗುವುದಿಲ್ಲ, ಒಡೆಯುವುದಿಲ್ಲ‌.

* ಬೇಸಿಗೆಯಲ್ಲಿ ಟೊಮೆಟೊ ಮತ್ತು ಮೊಸರನ್ನು ಸೇವಿಸಿದರೆ ಚರ್ಮದ ಆರೋಗ್ಯಕ್ಕೆ ಪೂರಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.