ADVERTISEMENT

ಕೈಯಲ್ಲಿ ಶ್ವೇತ ಮದರಂಗಿ!

​ಪ್ರಜಾವಾಣಿ ವಾರ್ತೆ
Published 23 ಜುಲೈ 2018, 19:30 IST
Last Updated 23 ಜುಲೈ 2018, 19:30 IST
   

ಮದರಂಗಿ ಎಂದ ಕೂಡಲೇ ಸುಂದರ ಚಿತ್ತಾಕರ್ಷಕ ವಿನ್ಯಾಸಗಳು ಕಣ್ಣ ಮುಂದೆ ಬರುತ್ತವೆ. ಹಿಂದೆ ಮದರಂಗಿ ಎಲೆಗಳನ್ನು ಅರೆದು ಅದನ್ನು ಕೈಗೆ ಹಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ, ಮಾರುಕಟ್ಟೆಯಲ್ಲಿ ಸಿಗುವ ಕೋನ್‌ಗಳನ್ನು ತಂದು ಕೈಯಲ್ಲಿ ಬಗೆ ಬಗೆ ವಿನ್ಯಾಸ ಬಿಡಿಸುತ್ತಾರೆ. ಅದರ ಜೊತೆಗೆ ಕಲರ್‌ಫುಲ್‌ ಡಿಸೈನ್‌ಗಳುಳ್ಳ ರೆಡಿಮೇಡ್‌ ಡಿಸೈನ್‌ಗಳೂ ಸಿಗುತ್ತವೆ. ಈಗ ಬಿಳಿ ಮೆಹಂದಿ ಫ್ಯಾಷನ್‌ ಲೋಕದಲ್ಲಿ ಸದ್ದು ಮಾಡುತ್ತಿದೆ.

ಇದೇನು ಬಿಳಿ ಮದರಂಗಿ ಎಂದು ಹುಬ್ಬೇರಿಸದಿರಿ. ಸದ್ಯ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಳಿ ಮೆಹಂದಿ ಕೈಗೆ ಹಚ್ಚಿಕೊಳ್ಳುವುದು ಟ್ರೆಂಡ್‌ ಅನಿಸಿಕೊಂಡಿದೆ. ಆದರೆ ಈ ವಿನ್ಯಾಸಗಳು ಸಾಂಪ್ರದಾಯಿಕ ಮದುವೆಯಂತಹ ಕಾರ್ಯಕ್ರಮಗಳಿಗೆ ಸರಿಹೊಂದುವುದಿಲ್ಲ. ಆದರೆ ಆಧುನಿಕ ಉಡುಪಿಗೆ ಚಂದ ಕಾಣುತ್ತದೆ ಎಂಬುದು ಫ್ಯಾಷನ್‌ ಪ್ರಿಯರ ಮಾತು.

ಈ ಬಿಳಿ ಮೆಹಂದಿ ಕೋನ್‌ಗಳನ್ನು ಸ್ವತಃ ಅವರವರೇ ತಯಾರಿ ಮಾಡಿಕೊಳ್ಳಬಹುದು. ತಯಾರಿ ವಿಧಾನಗಳೂ ಯೂಟ್ಯೂಬ್‌, ಇನ್‌ಸ್ಟಾಗ್ರಾಂನಲ್ಲಿದೆ. ಮುಖಕ್ಕೆ ಬಳಸುವ ಫೌಂಡೇಷನ್‌ ಕ್ರೀಂ ಹಾಗೂ ಪೌಡರ್‌ ಅನ್ನು ಕಲಸಿಕೊಂಡು, ಕೋನ್‌ಗೆ ತುಂಬಿಸಿಕೊಳ್ಳಬೇಕು. ಆದರೆ ಈ ಕ್ರಿಂ ವಾಟರ್‌ ಪ್ರೂಫ್‌ ಆಗಿರುವುದು ಮುಖ್ಯ. ಬಳಿಕ ಸಾಬೂನಿನಿಂದ ಕೈ ತೊಳೆದುಕೊಂಡರೆ ಇದು ಅಳಿಸಿಹೋಗುತ್ತದೆ.

ADVERTISEMENT

ಈಚೆಗೆ ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಬದಲಾವಣೆಯಾಗುತ್ತಲೇ ಇರುತ್ತದೆ. ಇದಕ್ಕೆ ಈ ಬಿಳಿ ಮದರಂಗಿ ವಿನ್ಯಾಸವನ್ನು ಸೇರ್ಪಡೆ ಮಾಡಬಹುದು. ಜೀನ್ಸ್‌, ಮಿಡಿ, ಸ್ಕರ್ಟ್‌ ತೊಟ್ಟಾಗ ಕೈಗಳಲ್ಲಿನ ಈ ಬಿಳಿ ಬಣ್ಣದ ವಿನ್ಯಾಸಗಳು ಬೋಲ್ಡ್‌ ಲುಕ್‌ ಕೊಡುತ್ತವೆ.

ಇಂಡಿಯನ್‌, ಅರೇಬಿಯನ್‌, ಬ್ರೈಡಲ್‌ ಹೀಗೆ ಎಲ್ಲಾ ವಿನ್ಯಾಸಗಳಲ್ಲೂ ಈ ಬಿಳಿ ಮೆಹಂದಿ ಜಾಗ ಪಡೆದಿವೆ. ವಿಭಿನ್ನ ಶೈಲಿಯ ಮೂಲಕ ಗುರುತಿಸಿಕೊಳ್ಳಲು ಇಷ್ಟಪಡುವವರಿಗೆ ಇದು ಸರಿಯಾದ ಆಯ್ಕೆ. ಡಿಸೈನ್‌ ಬಿಡಿಸಿಕೊಂಡ ಬಳಿಕ ಅದರ ಮೇಲೆ ಕೆಲ ವಸ್ತುಗಳಿಂದ ಅಲಂಕಾರ ಮಾಡಿದರೆ ಮತ್ತೂ ಚಂದ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.