ADVERTISEMENT

ಅಕ್ಷಯ ತೃತೀಯ ಹಬ್ಬಕ್ಕೆ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ನಿಂದ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 11:22 IST
Last Updated 25 ಏಪ್ರಿಲ್ 2025, 11:22 IST
   

ಬೆಂಗಳೂರು, -- ಏಪ್ರಿಲ್‌ 2025: ಜವಾಬ್ದಾರಿಯುತ ಜ್ಯುವೆಲ್ಲರಿ ಸಂಸ್ಥೆಯಾಗಿರುವ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್ ಈ ಬಾರಿಯ ಅಕ್ಷಯ ತೃತೀಯಗೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದೆ. ಗ್ರಾಹಕರಿಗೆ ಮೌಲ್ಯ, ವಿಶ್ವಾಸಾರ್ಹತೆ ಮತ್ತು ಪರಿಣತಿಯನ್ನು ಒದಗಿಸುವ ತನ್ನ ಸಂಪ್ರದಾಯವನ್ನು ಮುಂದುವರಿಸುವ ಮೂಲಕ ಮಲಬಾರ್‌ ಈ ಅಕ್ಷಯ ತೃತೀಯವನ್ನು ಇನ್ನಷ್ಟು ಅವಿಸ್ಮರಣೀಯಗೊಳಿಸುವ ದಿಸೆಯಲ್ಲಿ ಕೊಡುಗೆಗಳನ್ನು ನೀಡುತ್ತಿದೆ.

ಅಕ್ಷಯ ತೃತೀಯ ಆಚರಣೆಯ ಭಾಗವಾಗಿ ಮಲಬಾರ್‌ ಗೋಲ್ಡ್ & ಡೈಮಂಡ್ಸ್‌ ಗ್ರಾಹಕರಿಗೆ ಚಿನ್ನಾಭರಣಗಳ ಮೇಕಿಂಗ್‌ ಶುಲ್ಕದ ಮೇಲೆ ಶೇ.25 ರವರೆಗೆ, ಪ್ರೆಶಿಯಸ್‌ ಸ್ಟೋನ್‌ ಮತ್ತು ಅನ್‌ಕಟ್‌ ವಜ್ರಾಭರಣಗಳ ಮೇಕಿಂಗ್‌ ಶುಲ್ಕದ ಮೇಲೆ ಫ್ಲ್ಯಾಟ್‌ ಶೇ.25 ರಷ್ಟು ಹಾಗೂ ವಜ್ರದ ಮೌಲ್ಯದ ಮೇಲೆ ಶೇ.25 ರವರೆಗೆ ರಿಯಾಯ್ತಿಯನ್ನು ನೀಡುತ್ತಿದೆ. ಈ ಹಬ್ಬದ ಕೊಡುಗೆಗಳು ಗ್ರಾಹಕರಿಗೆ ಕರಕುಶಲತೆಯನ್ನು ಮೌಲ್ಯದೊಂದಿಗೆ ಬೆರೆಸುವ ಆಭರಣಗಳಲ್ಲಿ ಹೂಡಿಕೆ ಮಾಡಲು ಅಸಾಧಾರಣವಾದ ಅವಕಾಶವನ್ನು ಒದಗಿಸುತ್ತವೆ.

ಖರೀದಿ ಅನುಭವವನ್ನು ಇನ್ನಷ್ಟು ಲಾಭದಾಯಕವಾಗಿಸಲು, ಮಲಬಾರ್‌ ಮುಂಗಡ ಬುಕಿಂಗ್‌ಗಳೊಂದಿಗೆ ಉಚಿತ ಬೆಳ್ಳಿ ನಾಣ್ಯವನ್ನು ನೀಡುತ್ತಿದೆ. ಗ್ರಾಹಕರು ಆಭರಣದ ಒಟ್ಟು ಮೌಲ್ಯದ ಕನಿಷ್ಠ ಶೇ.10 ರಷ್ಟನ್ನು ಪಾವತಿಸುವ ಮೂಲಕ ತಮ್ಮ ಆಭರಣಗಳನ್ನು ಬುಕ್‌ ಮಾಡಿಕೊಳ್ಳಬಹುದು ಮತ್ತು ಚಿನ್ನದ ಬೆಲೆ ಏರಿಕೆಯಿಂದ ಸುರಕ್ಷಿತವಾಗಿರಬಹುದಾಗಿದೆ. ಆಭರಣವನ್ನು ಬುಕ್‌ ಮಾಡಿದ ಸಂದರ್ಭದಲ್ಲಿ ಇರುವ ದರ ಅಥವಾ ಖರೀದಿಸುವ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ದರ—ಇದರಲ್ಲಿ ಯಾವುದು ಕಡಿಮೆ ಇರುತ್ತದೋ ಆ ದರದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ADVERTISEMENT

ಅಕ್ಷಯ ತೃತೀಯದ ಶುಭ ಸಂದರ್ಭವನ್ನು ಇನ್ನೂ ಶ್ರೇಷ್ಠಗೊಳಿಸುವ ನಿಟ್ಟಿನಲ್ಲಿ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ 'ಡಿವೈನ್‌' ಎ೦ಬ ವಿಶೇಷ ಬ್ರ್ಯಾ೦ಡ್‌ ಅಡಿಯಲ್ಲಿ 'ತನ್ಹಿಕ್‌ ಎಂಬ ಹೊಸ ಆಭರಣ ಸಂಗ್ರಹವನ್ನು ಅನಾವರಣಗೊಳಿಸಿದೆ. ಇದು ಭಕ್ತಿಯ ಚೈತನ್ಯವನ್ನು ಆಚರಣೆ ಮಾಡುವ ವಿನ್ಯಾಸಗಳನ್ನು ಒಳಗೊಂಡಿದೆ. ದೈವತ್ನದಿ೦ದ ಪ್ರೇರೇಪಿತವಾಗಿ ಮತ್ತು ಅತ್ಯುತ್ತಮ ಕರಕುಶಲತೆಯ ಮೂಲಕ ಜೀವ ತುಂಬಿರುವ ಈ ಆಭರಣಗಳ ಸಂಗ್ರಹವು ಬೆರಗುಗೊಳಿಸುವ ಹೊಸ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತದೆ.ಪ್ರತಿಯೊಂದೂ ಕಾಲಾತೀತ ಸಂಪ್ರದಾಯಗಳು ಮತ್ತು ಸತುವಿನ ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ.

ಈ ಹಬ್ಬದ ಕೊಡುಗೆಗಳ ಬಗ್ಗೆ ಮಾತನಾಡಿದ ಮಲಬಾರ್‌ ಗ್ರೂಪ್‌ ಅಧ್ಯಕ್ಷ ಎಂ.ಪಿ. ಅಹ್ಮದ್‌ ಅವರು, “ಅಕ್ಷಯ ತೃತೀಯವು ಸಮೃದ್ಧಿ ಮತ್ತು ಹೊಸ ಆರಂಭಗಳ ದಿನವಾಗಿ ಅಪಾರ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ನಲ್ಲಿ ನಾವು ಈ ಸಂದರ್ಭವನ್ನು ನಮ್ಮ ಗ್ರಾಹಕರಿಗೆ ಇನ್ನಷ್ಟು ವಿಶೇಷವಾಗಿಸುವ ಗುರಿಯನ್ನು ಹೊಂದಿದ್ದೇವೆ. ಇದೇ ರೀತಿ ಸಾಟಿಯಿಲ್ಲದ ಮೌಲ್ಯ ಮತ್ತು ಕಾಲಾತೀತ ವಿನ್ಯಾಸಗಳನ್ನು ನೀಡುತ್ತೇವೆ. ನಮ್ಮ ವಿಶೇಷ ಕೊಡುಗೆಗಳು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಮ್ಮ ಮೌಲ್ಯಯುತವಾದ ಗ್ರಾಹಕರೊಂದಿಗೆ ಶಾಶ್ವತ ಸಂಬಂಧಗಳನ್ನು ನಿರ್ಮಾಣ ಮಾಡುವುದನ್ನು ಮುಂದುವರಿಸಲು ಒಂದು ಉತ್ತಮ ಮಾರ್ಗವಾಗಿದೆ” ಎಂದರು.

ಅಕ್ಷಯ ತೃತೀಯದ ಸಮೃದ್ಧಿಯನ್ನು ಸ್ವಾಗತಿಸುವ ಮತ್ತು ಹೊಸ ಆರಂಭಗಳನ್ನು ಗುರುತಿಸುವ ಸಮಯವೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಚಿ೦ತನಶೀಲವಾಗಿ ವಿನ್ಯಾಸಗೊಳಿಸಲಾಗಿರುವ ಕೊಡುಗೆಗಳು ಮತ್ತು ಗ್ರಾಹಕರಿಗೆ ಹೊಂದಿಕೊಳ್ಳುವಂತಹ ಬುಕಿಂಗ್‌ ಆಯ್ಕೆಗಳೊಂದಿಗೆ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ ಈ ಹಬ್ಬದ ಅವಧಿಯಲ್ಲಿ ಗ್ರಾಹಕರು ಅರ್ಥಪೂರ್ಣ ಖರೀದಿಗಳನ್ನು ಮಾಡಲು ಅನುವು ಮಾಡಿಕೊಡುವ ಮೂಲಕ ಈ ಸುಸಂದರ್ಭದ ಮಹತ್ವಕ್ಕೆ ಅನುಗುಣವಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ.

AboutMalabarGold&Diamonds

The Malabar Group, headquartered in Calicut, Kerala, India, has 15 enterprises in 13 countries, making it the fastest growing industry in the world, with an annual turnover of USD 6.2 billion and a team of over 21,000 management professionals worldwide. ESG (Environment, Social and Governance) has been the primary commitment of the group since its inception, with health, housing, hunger-free world, education, environment and women empowerment being the key focus areas. Incorporating the principles of responsibility and sustainability into its core business, the Malabar Group strengthens its ESGs from time to time to retain them as a socially conscious and responsible entity and contributes 5% of its profits to such initiatives in the same country of operation.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.