• ಸರಜಾಪುರ ರಸ್ತೆ ಘಟಕವು ಸುಧಾರಿತ ತಂತ್ರಜ್ಞಾನ, ಶ್ರೇಷ್ಠ ತಜ್ಞರು ಹಾಗೂ ಸಮುದಾಯದೊಂದಿಗೆ ಆಳವಾದ ಸಂಪರ್ಕವನ್ನು ಒದಗಿಸಲು ಸಿದ್ಧವಾಗಿದೆ
• ಸ್ಪರ್ಶ್ ಆಸ್ಪತ್ರೆಗಳ ಗುಂಪು ಈಗ ಒಟ್ಟು 1,400ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯ ಹೊಂದಿರುವ 9 ಆಸ್ಪತ್ರೆಗಳನ್ನು ನಡೆಸುತ್ತಿದ್ದು, ತೃತೀಯ ಮತ್ತು ಚತುರ್ಥಿಕ ಆರೈಕೆಯಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ
ಸ್ಪರ್ಶ್ ಆಸ್ಪತ್ರೆಗಳ ಗುಂಪು ಇಂದು ಬೆಂಗಳೂರಿನ ಸರಜಾಪುರ ರಸ್ತೆಯಲ್ಲಿ ತನ್ನ ಹೊಸ 250 ಹಾಸಿಗೆಗಳ ಅತಿ-ವಿಶೇಷ ಆಸ್ಪತ್ರೆಯನ್ನು ಭವ್ಯವಾಗಿ ಉದ್ಘಾಟಿಸಿತು. ಈ ಆಸ್ಪತ್ರೆಯನ್ನು ಮುಂದಿನ ತಲೆಮಾರಿನ ಆರೋಗ್ಯ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾಗಿದ್ದು, ನಗರದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದರಲ್ಲಿ ಸುಧಾರಿತ ತಂತ್ರಜ್ಞಾನ, ಶ್ರೇಷ್ಠ ವೈದ್ಯ ತಜ್ಞರು ಮತ್ತು ಮಾನವೀಯ ಸ್ಪರ್ಶ ಹೊಂದಿದ ಸಮುದಾಯ ಸ್ನೇಹಿ ಆರೈಕೆಯನ್ನು ಒದಗಿಸಲು ಉದ್ದೇಶಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ದೊರಕಿತು. ಇದೇ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾದ ಖನಿಜ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್, ಜ್ಯೇಷ್ಟ ವಕೀಲರು ಮತ್ತು ಸಿಕ್ಕಿಂ ರಾಜ್ಯದ ಅಟಾರ್ನಿ ಜನರಲ್ ಶ್ರೀ ಬಾಸವಪ್ರಭು ಎಸ್. ಪಾಟೀಲ, ಭಾರತ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಹಾಗು ಅನೇಕ ಹಿರಿಯ ತಜ್ಞರು ಮತ್ತು ಸ್ಪರ್ಶ್ ಆಸ್ಪತ್ರೆಗಳ ಘಟಕ ಮುಖ್ಯಸ್ಥರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸ್ಪರ್ಶ್ ಆಸ್ಪತ್ರೆಗಳ ಗುಂಪಿನ ಅಧ್ಯಕ್ಷ ಡಾ. ಶರಣ್ ಶಿವರಾಜ್ ಪಾಟೀಲ ಅವರು ಹೇಳಿದರು:
“ಭಾರತದ ಆರೋಗ್ಯ ರಾಜಧಾನಿಯಾಗಿ ಬೆಳೆದುಬರುವ ಶಕ್ತಿಯನ್ನು ಬೆಂಗಳೂರಿಗೆ ಇದೆ. ಹೇಗೆ ಈ ನಗರವು ಭಾರತದ ಐಟಿ ಕ್ರಾಂತಿಯನ್ನು ಮುನ್ನಡೆಸುವಲ್ಲಿ ಮುಂಚೂಣಿಯ ಪಾತ್ರ ವಹಿಸಿತೋ, ಮುಂದಿನ ದಶಕದಲ್ಲಿ ಭಾರತವನ್ನು ಜಾಗತಿಕ ಆರೋಗ್ಯ ನಾಯಕನನ್ನಾಗಿ ಸಹ ಇದೇ ರೀತಿ ಮುನ್ನಡೆಸಬಹುದು.”
“ಈ ಹೊಸ ಸೌಲಭ್ಯದಿಂದ ಸಮಾಜದ ದೊಡ್ಡ ವರ್ಗಕ್ಕೆ ಪ್ರಯೋಜನವಾಗುವಂತೆ ಮಾಡಲು ನಾವು ಬಯಸುತ್ತೇವೆ. ಸರಜಾಪುರ ಘಟಕದ ವಿಶೇಷತೆಯೆಂದರೆ, ಅನೇಕ ವಿಭಾಗಗಳಲ್ಲಿ ಅತ್ಯಂತ ಗೂಢ ವೈದ್ಯಕೀಯ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದು,” ಎಂದು ಸ್ಪರ್ಶ್ ಆಸ್ಪತ್ರೆಗಳ ಗುಂಪಿನ ಸಿಇಒ ಶ್ರೀ ಜಸ್‌ದೀಪ್ ಸಿಂಗ್ ತಿಳಿಸಿದ್ದಾರೆ.
ಸರಜಾಪುರ ಘಟಕವು ತನ್ನ ಬಹು-ವಿಶೇಷತೆ ಸೇವೆಗಳ ಜೊತೆಗೆ ಸಮರ್ಪಿತ ಪ್ರತಿಭಾ ಕೇಂದ್ರಗಳು (Centres of Excellence) ಮೂಲಕ ವಿಶಿಷ್ಟವಾಗಿರುತ್ತದೆ. ನ್ಯೂರೋಸೈನ್ಸ್, ಕಾರ್ಡಿಯಾಲಜಿ, ನೆಫ್ರಾಲಜಿ, ಆರ್ಥೋಪೆಡಿಕ್ಸ್, ಆಂಕಾಲಜಿ, ಅಂಗಾಂಗ ಪ್ರತಿರೋಪಣೆ (Transplants), ವಯಸ್ಕ ಮತ್ತು ಬಾಲ ತುರ್ತು ಸೇವೆಗಳು, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಇದರ ಮೂಲಕ, ಆಸ್ಪತ್ರೆ ಸಾಮಾನ್ಯ ಆರೈಕೆಗಿಂತಲೂ ಗಂಭೀರ ಚಿಕಿತ್ಸೆಗಾಗಿ ನಗರದ ಪ್ರಮುಖ ತಾಣವಾಗಲು ತೊಡಗಿಕೊಂಡಿದೆ.
ಆಸ್ಪತ್ರೆಯು ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಸಿಯು ಹಾಸಿಗೆಗಳು, ನಿಯೋನೇಟಲ್ ಐಸಿಯು (NICU) ಮತ್ತು ಪೀಡಿಯಾಟ್ರಿಕ್ ಐಸಿಯು (PICU) ಘಟಕಗಳನ್ನು ಹೊಂದಿದೆ. ಜೊತೆಗೆ, ಎಂಆರ್‌ಐ, ಸಿಟಿ, ಕ್ಯಾಥ್ ಲ್ಯಾಬ್, ಇಇಜಿ, ಸ್ಲೀಪ್ ಸ್ಟಡಿ ಮತ್ತು ಇಂಟರ್ವೆನ್ಶನಲ್ ರೇಡಿಯಾಲಜಿ ಸೇರಿದಂತೆ ಆಧುನಿಕ ನಿದಾನ ಸೌಲಭ್ಯಗಳನ್ನು ಒದಗಿಸಿದೆ. ತುರ್ತು ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ ಹಾಗೂ ಸುಧಾರಿತ ಶಸ್ತ್ರಚಿಕಿತ್ಸಾ ಸೌಲಭ್ಯಗಳ ಸಮನ್ವಯಿತ ಕಾರ್ಯಾಚರಣೆ, ಅತ್ಯಂತ ಗೂಢ ವೈದ್ಯಕೀಯ ಸಮಸ್ಯೆಗಳಿಗೂ ಸಮಯೋಚಿತ ಹಾಗೂ ಸಮರ್ಪಕ ಚಿಕಿತ್ಸೆ ಒದಗಿಸಲು ಸಹಕಾರಿಯಾಗಿದೆ.
ಹೊಸ ಘಟಕವನ್ನು ಒಳಗೊಂಡಂತೆ ಸ್ಪರ್ಶ್ ಆಸ್ಪತ್ರೆಗಳು ಈಗಲೇ ಶ್ರೇಷ್ಠ ವೈದ್ಯರಿಗೆ ಆಕರ್ಷಣೆಯ ಕೇಂದ್ರವಾಗಿವೆ. ವಿದೇಶಗಳಿಂದ ಮರಳಿ ಬಂದಿರುವ ತಜ್ಞರನ್ನು ಸಹ ಒಳಗೊಂಡಂತೆ ಅನೇಕರು, ಸ್ಪರ್ಶ್‌ನ ಸಹಕಾರಿ ಕಾರ್ಯಸಂಸ್ಕೃತಿ ಮತ್ತು ವೈದ್ಯಕೀಯ ನವೀನತೆಗಳಿಂದ ಪ್ರೇರಿತರಾಗಿದ್ದಾರೆ.
ಈ ಹೊಸ ಘಟಕದ ಆರಂಭದೊಂದಿಗೆ, ಸ್ಪರ್ಶ್ ಆಸ್ಪತ್ರೆಗಳು ಈಗ ಒಟ್ಟು 9 ಆಸ್ಪತ್ರೆಗಳ ಮೂಲಕ 1,400ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯವನ್ನು ಹೊಂದಿವೆ. ಇದರ ಮೂಲಕ, ಬೆಂಗಳೂರು ನಗರದಲ್ಲಿ ಬಹು-ವಿಶೇಷತೆ ತೃತೀಯ ಆರೈಕೆಯಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 2,000 ಹಾಸಿಗೆ ಸಾಮರ್ಥ್ಯ ತಲುಪುವ ಗುರಿ ಹೊಂದಿರುವ ಸ್ಪರ್ಶ್, ನವೀನತೆ ಮತ್ತು ಸಂಶೋಧನೆಯಲ್ಲಿ ತನ್ನ ದೀರ್ಘಕಾಲೀನ ಹೂಡಿಕೆಯಿಂದ ಇದನ್ನು ಸಾಧಿಸುವ ದಾರಿಯಲ್ಲಿದೆ.
ಸ್ಪರ್ಶ್ ಆಸ್ಪತ್ರೆಗಳ ಗುಂಪು ಬೆಂಗಳೂರು–ಕರ್ನಾಟಕದ ಪ್ರಮುಖ ಬಹು-ವಿಶೇಷತೆ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದು. ನೈತಿಕ ಮೌಲ್ಯಗಳು, ವೈದ್ಯಕೀಯ ಶ್ರೇಷ್ಠತೆ ಮತ್ತು ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವಾ ವಿತರಣೆಗೆ ಬದ್ಧವಾಗಿರುವುದಕ್ಕಾಗಿ ಪ್ರಸಿದ್ಧವಾಗಿದೆ. ಪ್ರಸ್ತುತ ಒಟ್ಟು 1,400ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯ ಹೊಂದಿರುವ ಒಂಬತ್ತು ಆಸ್ಪತ್ರೆಗಳೊಂದಿಗೆ, ಸ್ಪರ್ಶ್ ಅನೇಕ ಗೂಢ ವೈದ್ಯಕೀಯ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಇದರಲ್ಲಿ ಆರ್ಥೋಪೆಡಿಕ್ಸ್, ನ್ಯೂರೋಸೈನ್ಸ್, ಕಾರ್ಡಿಯಾಲಜಿ, ಆಂಕಾಲಜಿ, ನೆಫ್ರಾಲಜಿ, ವಯಸ್ಕ ಮತ್ತು ಬಾಲ ತುರ್ತು ಚಿಕಿತ್ಸಾ ಸೇವೆಗಳು, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸೇರಿದಂತೆ ಹಲವು ವಿಭಾಗಗಳಿವೆ.
ಅತ್ಯಾಧುನಿಕ ಮೂಲಸೌಕರ್ಯ, ರೋಬೋಟಿಕ್ ಶಸ್ತ್ರಚಿಕಿತ್ಸೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ನಿದಾನ ವ್ಯವಸ್ಥೆಗಳು, ಸುಧಾರಿತ ಇಮೇಜಿಂಗ್ ತಂತ್ರಜ್ಞಾನಗಳು ಇವುಗಳೊಂದಿಗೆ ಸ್ಪರ್ಶ್ ನವೀನತೆಯನ್ನು ದಯಾಪರ, ರೋಗಿ-ಕೇಂದ್ರಿತ ಆರೈಕೆಯೊಂದಿಗೆ ಸಂಯೋಜಿಸುತ್ತದೆ. ಭಾರತದಷ್ಟೇ ಅಲ್ಲದೆ ವಿದೇಶಗಳಿಂದಲೂ ಅನೇಕ ಶ್ರೇಷ್ಠ ವೈದ್ಯಕೀಯ ತಜ್ಞರು ಇದರ ಸಹಕಾರಾತ್ಮಕ, ತಂಡ ಆಧಾರಿತ ಕಾರ್ಯಸಂಸ್ಕೃತಿಗೆ ಆಕರ್ಷಿತರಾಗಿ ಇಲ್ಲಿಗೆ ಸೇರುತ್ತಿದ್ದಾರೆ. ಸ್ಪರ್ಶ್ ತನ್ನ ವಿಸ್ತರಣೆ ತಂತ್ರದ ಭಾಗವಾಗಿ ಮುಂದಿನ ಮೂರು ವರ್ಷಗಳಲ್ಲಿ ಹಾಸಿಗೆ ಸಾಮರ್ಥ್ಯವನ್ನು 2,000ಕ್ಕೆ ಹೆಚ್ಚಿಸಲು ಹೊಸ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ. ಇದರ ಮೂಲಕ, ವಿಶ್ವಮಟ್ಟದ ಆರೋಗ್ಯ ಸೇವೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ತನ್ನ ಧ್ಯೇಯವನ್ನು ಬಲಪಡಿಸುವುದರ ಜೊತೆಗೆ, ಬೆಂಗಳೂರನ್ನು ಜಾಗತಿಕ ಆರೋಗ್ಯ ಕೇಂದ್ರವನ್ನಾಗಿ ರೂಪಿಸಲು ಬದ್ಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.