ADVERTISEMENT

ಅಂತರ್ಜಾಲದಲ್ಲಿ ಅಗ್ರಿಗೋಲ್ಡ್‌ ಠೇವಣಿದಾರರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2017, 19:30 IST
Last Updated 1 ನವೆಂಬರ್ 2017, 19:30 IST
ಅಂತರ್ಜಾಲದಲ್ಲಿ ಅಗ್ರಿಗೋಲ್ಡ್‌ ಠೇವಣಿದಾರರ ಮಾಹಿತಿ
ಅಂತರ್ಜಾಲದಲ್ಲಿ ಅಗ್ರಿಗೋಲ್ಡ್‌ ಠೇವಣಿದಾರರ ಮಾಹಿತಿ   

ಬೆಂಗಳೂರು: ಅಗ್ರಿಗೋಲ್ಡ್‌ ಸಂಸ್ಥೆಯಿಂದ ವಂಚನೆಗೆ ಒಳಗಾದ ಠೇವಣಿದಾರರ ಮಾಹಿತಿಯನ್ನು ರಾಜ್ಯ ಸಿಐಡಿ ಬಿಡುಗಡೆ ಮಾಡಿದೆ.
ವಂಚನೆಗೆ ಒಳಗಾದವರಲ್ಲಿ ಒಬ್ಬರಾದ ನಿವೃತ್ತ ಭೂವಿಜ್ಞಾನಿ ಎನ್‌. ರಂಗನಾಥನ್‌ ಅವರು ಈ ಮಾಹಿತಿಯನ್ನು ಪರೀಕ್ಷಿಸಿಕೊಳ್ಳಲು ಠೇವಣಿದಾರರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ.

ಠೇವಣಿದಾರರು http://www.suhruth.in ಅಂತರ್ಜಾಲ ತಾಣದಲ್ಲಿ ಲಾಗಿನ್‌ ಆಗಿ ತಮ್ಮ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದು.  customer ಅಂತ ಲಾಗಿನ್‌ ಆಗಿ, agrigold ಪಾಸ್‌ವರ್ಡ್‌ ನೀಡಬೇಕು.

ಆನಂತರ ಬಳಕೆದಾರರ ಗುರುತಿನ ಸಂಖ್ಯೆ ದಾಖಲಿಸಿದರೆ ಠೇವಣಿದಾರರ ಮೊತ್ತದ ವಿವರವನ್ನು ತಿಳಿದುಕೊಳ್ಳಬಹುದು. ಇಲ್ಲಿ ವಿವರಗಳು ಇಲ್ಲದವರು ಇದೇ 13ರ ಒಳಗೆ ಸಿಐಡಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.