ADVERTISEMENT

ಅನಪೇಕ್ಷಿತ ಕರೆ: ನೋಂದಣಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ನವದೆಹಲಿ (ಪಿಟಿಐ): ಟೆಲಿ ಮಾರುಕಟ್ಟೆ ಕರೆಗಳಿಗೆ ಸಂಬಂಧಿಸಿದಂತೆ, ಮೊಬೈಲ್ ಕಂಪೆನಿಗಳು  ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ಟ್ರಾಯ್’ ಹೇಳಿದೆ.

ಟೆಲಿ ಮಾರುಕಟ್ಟೆ ಕಂಪೆನಿಗಳಿಗೆ ನೋಂದಣಿ ಶುಲ್ಕ ರೂ 1000 ಹಾಗೂ ಗ್ರಾಹಕ ಶಿಕ್ಷಣ ಶುಲ್ಕ ರೂ 9,000 ಎಂದು ‘ಟ್ರಾಯ್’ ನಿಗದಿಪಡಿಸಿದ್ದು, ಈಗಾಗಲೇ ಪರವಾನಿಗೆ ಪಡೆದಿರುವ ಕಂಪೆನಿಗಳು ಗ್ರಾಹಕ ಶಿಕ್ಷಣ ಶುಲ್ಕ ಮಾತ್ರ ಪಾವತಿಸಿದರೆ ಸಾಕು  ಎಂದು ಹೇಳಿದೆ.

ಈ ಆನ್‌ಲೈನ್ ನೋಂದಣಿ ಮುಂದಿನ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದ್ದು, ಇತರೆ ನಿಬಂಧನೆಗಳು ಫೆಬ್ರುವರಿ 1, 2011ರಿಂದ ಜಾರಿಗೆ ಬರಲಿದೆ. ವಾಣಿಜ್ಯ ಕರೆಗಳು ‘70’ ಸಂಖ್ಯೆಯಿಂದ ಪ್ರಾರಂಭವಾಗಲಿದ್ದು, ಗ್ರಾಹಕರು ಸುಲಭವಾಗಿ ಗುರುತಿಸಬಹುದು. ನಿಯಮವನ್ನು ಉಲ್ಲಂಘಿಸಿದರೆ  ಕಂಪೆನಿಗಳು ರೂ 2.50 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.